ಆ್ಯಪ್ನಗರ

ಮೂಲಸೌಲಭ್ಯ ಕಲ್ಪಿಸಲು ಹೋರಾಟ ರೂಪಿಸಿ

ಕನ್ನಡ, ನಾಡು, ನುಡಿ, ಜಲ ರಕ್ಷಣೆಗೆ ಕಾರ್ಯಕರ್ತರು ಸದಾ ಸಿದ್ಧರಾಗಿರಬೇಕು, ಗ್ರಾಮೀಣ ಪ್ರದೇಶದಲ್ಲಿಮೂಲ ಸೌಲಭ್ಯ ಕಲ್ಪಿಸಲು ಹೋರಾಟ ರೂಪಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ್‌ ಹೇಳಿದರು.

Vijaya Karnataka 13 Oct 2019, 4:10 pm
ಯಾದಗಿರಿ:ಕನ್ನಡ, ನಾಡು, ನುಡಿ, ಜಲ ರಕ್ಷಣೆಗೆ ಕಾರ್ಯಕರ್ತರು ಸದಾ ಸಿದ್ಧರಾಗಿರಬೇಕು, ಗ್ರಾಮೀಣ ಪ್ರದೇಶದಲ್ಲಿಮೂಲ ಸೌಲಭ್ಯ ಕಲ್ಪಿಸಲು ಹೋರಾಟ ರೂಪಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ್‌ ಹೇಳಿದರು.
Vijaya Karnataka Web struggling to provide basic amenities
ಮೂಲಸೌಲಭ್ಯ ಕಲ್ಪಿಸಲು ಹೋರಾಟ ರೂಪಿಸಿ


ನಗರದ ಪ್ರವಾಸಿ ಮಂದಿರದಲ್ಲಿಕಾರ್ಯಕರ್ತರ ಸಭೆಯಲ್ಲಿಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಕಾರ್ಯ ನಮ್ಮ ಕಾರ್ಯಕರ್ತರಿಂದಾಗಬೇಕಿದೆ ಎಂದು ಹೇಳಿದರು.

ಗ್ರಾಮ ಘಟಕಗಳ ಅಧ್ಯಕ್ಷರು ಹೋರಾಟ ರೂಪಿಸಬೇಕಾದರೆ ತಾಲೂಕು ಘಟಕ ಮತ್ತು ಜಿಲ್ಲಾಘಟಕದ ಅಧ್ಯಕ್ಷರ ಗಮನಕ್ಕೆ ತರಬೇಕು. ಇದರಿಂದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಯಶಸ್ವಿ ಹೋರಾಟ ಮಾಡಲು ಇನ್ನೂ ಹೆಚ್ಚಿನ ಅನೂಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿಮೈಲಾರಪ್ಪ ಜಾಗಿರದಾರ, ದಿಲೀಪ್‌ ಕುಮಾರ ಶೇಠ್‌, ಮೌನೇಶ ಬೆಳಗೇರಾ, ಬಿರೇಶ ಚಿರತನೂರ, ಮಾರ್ಥಂಡಪ್ಪ ಮುಷ್ಟೂರ, ದೇವಿಂದಪ್ಪ ವಾರಿ, ಆನಂದ ಆಶನಾಳ, ಪಾಂಡು ಅರಿಕೇರಿ, ಮಲ್ಲುಮಷ್ಕನಳ್ಳಿ, ಚಂದ್ರು ಕಡೆಚೂರ, ಯೋಗೇಶ ಬಾಚವಾರ, ಕೀರ್ತಿಕುಮಾರ, ದೇವು ನಾಯಕ, ಲಕ್ಷತ್ರ್ಮಣ, ಭೀಮರಾಯ ಮೆಟನಕೇರಿ, ಕಾಶಿನಾಥ ಕಲಾಲ, ಯೇಸುಮಿತ್ರ ಸೇರಿದಂತೆ ಇತರರಿದ್ದರು.

ಇದೇ ಸಂದರ್ಭದಲ್ಲಿನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ರಾಮಣ್ಣ ದೊರೆ (ಜಿಲ್ಲಾಸಹ ಸಂಚಾಲಕ), ಮಂಜುನಾಥ (ಕಾರ್ಯಾಧ್ಯಕ್ಷ), ಮಲ್ಲುನಾಯಕ (ಕಾರ್ಯದರ್ಶಿ), ಶಿವಕುಮಾರ ಬೆಂಕಿ(ಕಾರ್ಯಾಧ್ಯಕ್ಷ), ಮಲ್ಲುದೊಡ್ಮನಿ(ಉಪಾಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ