ಆ್ಯಪ್ನಗರ

ಕಣ್ಣೀರಿಟ್ಟ ಅಭಿಮಾನಿಗಳು, ಪುನೀತ್‌ ರಾಜ್‌ಕುಮಾರ ಅಜರಾಮರ ಎಂದ ಫ್ಯಾನ್ಸ್‌

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಳೆತ್ತರ ಕಟೌಟ್‌ಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಸಲ್ಲಿಸಿ ಕಣ್ಣೀರು ಹಾಕಿದರು. ನೆಚ್ಚಿನ ನಾಯಕ ಆಕಸ್ಮಿಕವಾಗಿ ಅಗಲಿಕೆ ಆಗಿರುವುದು ಅವರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ.

Vijaya Karnataka 30 Oct 2021, 11:04 pm
ಯಾದಗಿರಿ: ಕರುನಾಡಿನ ಸಿನಿಮಾ ರಂಗದ ಅಪ್ರತಿಮ ನಾಯಕ ನಟ, ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ ಅವರ ನಿಧನಕ್ಕೆ ಜಿಲ್ಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Vijaya Karnataka Web ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌


ಅವರ ಅಭಿಮಾನಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಳೆತ್ತರ ಕಟೌಟ್‌ಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಸಲ್ಲಿಸಿ ಕಣ್ಣೀರು ಹಾಕಿದರು. ನೆಚ್ಚಿನ ನಾಯಕ ಆಕಸ್ಮಿಕವಾಗಿ ಅಗಲಿಕೆ ಆಗಿರುವುದು ಅವರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಎಲ್ಲಅಭಿಮಾನಿಗಳು ದುಃಖದಲ್ಲಿಯೇ ಪವರ್‌ ಸ್ಟಾರ್‌ಗೆ ಅಂತಿಮ ನಮನ ಸಲ್ಲಿಸಿರುವುದು ಎಲ್ಲೆಡೆ ಕಂಡು ಬಂದಿತು.

ಪುನೀತ್‌ ರಾಜ್‌ಕುಮಾರ್‌ ಪ್ರೇರಣೆ: 165 ಮಂದಿಯಿಂದ ನೇತ್ರದಾನ

ಅದರಲ್ಲಿಯೂ ಪುನೀತ್‌ ಅವರ ಸಿನಿಮಾಗಳು ಎಂದರೇ ಯುವ ಜನತೆಗೆ ಎಲ್ಲಿಲ್ಲದ ಪ್ರೀತಿ ಆಗಿತ್ತು. ಅವರ ಸಿನಿಮಾ ರಿಲೀಸ್‌ ಆದ ಮೊದಲನೇ ದಿನವೇ ನೋಡಲು ಮುಗಿ ಬೀಳುತ್ತಿದ್ದರು. ಆದರೆ ಇಂತಹ ಅತ್ಯುತ್ತಮವಾದ ನಟ ಅಕಾಲಿಕವಾಗಿ ನಿಧನ ಆಗಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೃದಯ ಬಾರವಾಗಿದೆ. ಕಣ್ಣಾಲೆಗಳು ಒದ್ದೆಯಾಗಿವೆ. ಪವರ್‌ ಸ್ಟಾರ್‌ನನ್ನು ಕಳೆದುಕೊಂಡು ಅಭಿಮಾನಿಗಳಿಗೆ ಗರ ಬಡಿದಂತೆ ಆಗಿದೆ.

ಅಪ್ಪುವಿನ ಸಿನಿಮಾ ಎಂದರೇ ಸಾಕು ಇಡೀ ಕುಟುಂಬವೇ ಚಿತ್ರಮಂದಿರಗಳಿಗೆ ಬಂದು ನೋಡುವಂತಹ ರೀತಿಯಲ್ಲಿಇರುತ್ತಿದ್ದವು. ಆದರೆ ಇದೀಗ ಅಚ್ಚುಮೆಚ್ಚಿನ ನಟನ ಕಳೆದಕೊಂಡಿರುವ ಪರಿಣಾಮ ಮುಂದಿನ ದಿನಗಳಲ್ಲಿ ಅವರ ಸಿನೆಮಾ ನೋಡದಂತಾಗಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ. ವಿಧಿ ದೊಡ್ಡ ಕ್ರೂರಿಯಾಗಿದ್ದಾನೆ. ಕನ್ನಡದ ಕುವರನನ್ನು ಕಳೆದುಕೊಂಡಿರುವುದು ನಮಗೆ ಆಘಾತ ತಂದಿದೆ ಎಂದು ಅವರ ಅಭಿಮಾನಿಗಳು ಕಣ್ಣೀರು ಹಾಕಿದರು.

ಇದಲ್ಲದೇ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರ ಕಚೇರಿಯಲ್ಲಿಯೂ ಯುವ ರತ್ನ, ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಸಲ್ಲಿಸಿದರು.

ಚಿನ್ನದ ನಾಡಿನೊಂದಿಗೆ ಚೆಂದದ ನಂಟು ಹೊಂದಿದ್ದ ಚಿನ್ನದಂಥ ಕುಮಾರ

ಬಳಿಕ ಮಾತನಾಡಿದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರು, ಸಿನಿಮಾ ರಂಗಕ್ಕೆ ಪುನೀತ್‌ ರಾಜ್‌ಕುಮಾರ ನೀಡಿದ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಚಿತ್ರಗಳು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆದರೇ ಸಾಕು ಇಡೀ ಕುಟುಂಬವೇ ಹೋಗಿ ವೀಕ್ಷಣೆ ಮಾಡುತ್ತಿತ್ತು. ಆದರೆ ಇದೀಗ ಕನ್ನಡದ ಅಪ್ರತಿಮ ಸಾಧಕನನ್ನು ಕಳೆದುಕೊಂಡು ಇಡೀ ಚಿತ್ರರಂಗವೇ ಬಡವಾಗಿದೆ ಎಂದು ಹೇಳಿದರು.

ಇನ್ನೂ ನಗರದ ಹೊರ ವಲಯದಲ್ಲಿ ಕೂಡ ನಟ ಪುನೀತ್‌ ರಾಜ್‌ಕುಮಾರ ನಿಧನಕ್ಕೆ ಅವರ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಶ್ಯಾಂಸನ್‌ ಮಾಳಿಕೇರಿ, ಚೆನ್ನಾರೆಡ್ಡಿ ಬಿಳ್ಹಾರ, ಬಸವರಾಜ ಸೊನ್ನದ, ಸಿದ್ರಾಮರೆಡ್ಡಿ, ವೀರೇಂದ್ರ ಪಾಟೀಲ್‌, ಬಂದಪ್ಪ ಸಾಹುಕಾರ, ರಾಜು ಬೆಲಿಮಂಚಿ ಸೇರಿದಂತೆ ಇನ್ನಿತರರಿದ್ದರು.

ಇದಲ್ಲದೇ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ ಅಭಿಮಾನಿಗಳಾದ ಚನ್ನಪ್ಪ, ಮೋಹನ್‌ ಕುರಕುಂದಿ, ಶಿವುಪ್ರಸಾದ್‌ ಸೇರಿದಂತೆ ಇನ್ನಿತರರು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

ಅತ್ಯುತ್ತಮ ಚಿತ್ರಗಳಲ್ಲಿ ನಟನೆ

ಸಮಾಜಕ್ಕೆ ಅತ್ಯುತ್ತಮ ಸಂದೇಶಗಳನ್ನು ನೀಡುವಂತ ಸಿನಿಮಾಗಳಲ್ಲಿಪುನೀತ್‌ ಅವರು ನಟನೆ ಮಾಡುವ ಮೂಲಕ ವಿಭಿನ್ನವಾಗಿ ಅವರು ಗುರುತಿಸಿಕೊಂಡಿದ್ದರು. ಅದರಲ್ಲಿಯೂ ವಿಶೇಷವಾಗಿ ಅವರಿಗೆ ಯುವ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಎಲ್ಲಿಯೇ ಹೋದರು ಕೂಡ ಅವರನ್ನು ನೋಡಲು ಮುಗಿ ಬೀಳುತ್ತಿದ್ದರು. ಆದರೆ ಅವರ ಆಕಸ್ಮಿಕ ಸಾವಿನಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ತೀವ್ರ ಆಘಾತ ಉಂಟು ಮಾಡಿದೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ