ಆ್ಯಪ್ನಗರ

ಸಿದ್ದು ಸಂಪುಟದಲ್ಲಿ ಗೃಹಮಂತ್ರಿ ಹುದ್ದೆ ವಹಿಸಿಕೊಳ್ಳೋರೇ ಇಲ್ಲ

ಜಿ ಪರಮೇಶ್ವರ್‌ ರಾಜೀನಾಮೆಯಿಂದ ತೆರವಾಗಿರುವ ಗೃಹ ಸಚಿವ ಸ್ಥಾನ ವಹಿಸಿಕೊಳ್ಳಲು ಸಿದ್ದರಾಮಯ್ಯ ಸಂಪುಟದ ಯಾವ ಸಚಿವರೂ ಮುಂದೆ ಬರುತ್ತಿಲ್ಲ.

Bangalore Mirror Bureau 27 Jun 2017, 12:16 pm
ಬೆಂಗಳೂರು: ಜಿ ಪರಮೇಶ್ವರ್‌ ರಾಜೀನಾಮೆಯಿಂದ ತೆರವಾಗಿರುವ ಗೃಹ ಸಚಿವ ಸ್ಥಾನ ವಹಿಸಿಕೊಳ್ಳಲು ಸಿದ್ದರಾಮಯ್ಯ ಸಂಪುಟದ ಯಾವ ಸಚಿವರೂ ಮುಂದೆ ಬರುತ್ತಿಲ್ಲ.
Vijaya Karnataka Web no one wants to be karnataka home minister
ಸಿದ್ದು ಸಂಪುಟದಲ್ಲಿ ಗೃಹಮಂತ್ರಿ ಹುದ್ದೆ ವಹಿಸಿಕೊಳ್ಳೋರೇ ಇಲ್ಲ


ಇದೀಗ ರಾಜ್ಯ ಸಂಪುಟದಲ್ಲಿ 3 ಸ್ಥಾನಗಳು ತೆರವಾಗಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಅವುಗಳನ್ನು ಆದಷ್ಟು ಬೇಗನೇ ತುಂಬಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಒಲವು ತೋರಿದ್ದಾರೆ.

ಗೃಹಸಚಿವ ಸ್ಥಾನ ಯಾರಿಗೆ ನೀಡುವುದು? ಎಂಬುದರ ಕುರಿತು ಸಿದ್ದು ಸಂಪುಟದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆವರೆಗೆ ಗೃಹಸಚಿವ ಸ್ಥಾನದಲ್ಲಿ ಕುಳಿತು ಆಡಳಿತ ನಡೆಸುವುದು ಸವಾಲಿನ ಕೆಲಸವಾಗಿರುವುದರಿಂದ ಆ ಹುದ್ದೆಯಲ್ಲಿ ಕೂರಲು ಯಾರೂ ಮುಂದೆ ಬರುತ್ತಿಲ್ಲ.

ಅವಹೇಳನಕಾರಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸದನದ ಹಕ್ಕು ಬಾಧ್ಯತೆ ಸಮಿತಿಯ ಶಿಫಾರಸ್ಸಿನಂತೆ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವ ವಿಷಯ ಈಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಸಂದರ್ಭದಲ್ಲಿ ಗೃಹ ಸಚಿವಾಲಯವನ್ನು ಯಾರು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ಬಗ್ಗೆ ಚರ್ಚೆ ನಡೆದಿದೆ.

ಮಂತ್ರಿಗಳಾದ ಟಿ.ಬಿ. ಜಯಚಂದ್ರ, ಬಿ. ರಾಮಲಿಂಗಾ ರೆಡ್ಡಿ ಅಥವಾ ಸಂತೋಷ್‌ ಲಾಡ್‌ ಈ ಮೂವರ ಹೆಸರು ಗೃಹ ಸಚಿವ ಹುದ್ದೆಗೆ ಪರಿಗಣನೆಯಲ್ಲಿದೆ.

ಡಿ.ಕೆ. ಶಿವಕುಮಾರ್‌ ಗೃಹಸಚಿವ ಸ್ಥಾನದ ಕುರಿತು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಅಭಿವೃದ್ಧಿ ಮಂತ್ರಿ ಕೆಜೆ ಜಾರ್ಜ್ ಅಥವಾ ಲೋಕೋಪಯೋಗಿ ಸಚಿವ ಹೆಚ್‌ ಸಿ ಮಹದೇವಪ್ಪ ಅವರನ್ನು ಗೃಹಸಚಿವ ಸ್ಥಾನದಲ್ಲಿ ಕೂರಿಸಲು ಸಿಎಂ ಆಸಕ್ತಿ ತೋರಿಸಿದ್ದರು. ಆದರೆ ಇವರಿಬ್ಬರೂ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿಲ್ಲ.

ಸಿದ್ದು ಕ್ಯಾಬಿನೆಟ್‌ನಲ್ಲಿ ಇತ್ತೀಚೆಗೆ ನಡೆದ ಹಲವು ವಿದ್ಯಮಾನಗಳಿಂದಾಗಿ ಪರಮೇಶ್ವರ್ (ದಲಿತರು), ಹೆಚ್ ವೈ ಮೇಟಿ (ಕುರುಬರು) ಮತ್ತು ಹೆಚ್ ಎಸ್‌ ಮಹದೇವ್‌ ಪ್ರಸಾದ್‌ (ಲಿಂಗಾಯಿತರು) ಅವರ ಸ್ಥಾನಗಳು ಖಾಲಿ ಬಿದ್ದಿದ್ದವು.

ಪರಮೇಶ್ವರ್‌ ಅವರ ಸ್ಥಾನಕ್ಕೆ ಶಾಸಕಿ ಮೋಟಮ್ಮ, ಪಿ ನರೇಂದ್ರ ಸ್ವಾಮಿ ಮತ್ತು ಆರ್‌ ಬಿ ತಿಮ್ಮಾಪುರ್ ಹೆಸರು ಕೂಡ ಕೇಳಿ ಬರುತ್ತಿದೆ. ಮೇಟಿ ಸ್ಥಾನಕ್ಕೆ ಹೆಚ್‌ ಎಂ ರೇವಣ್ಣ, ಸಿ ಎಸ್ ಶಿವಳ್ಳಿ, ಬಿಜಿ ಗೋವಿಂದಪ್ಪನವರ ಹೆಸರು ಕೇಳಿ ಬರುತ್ತಿದ್ದು, ಪ್ರಸಾದ್‌ ಅವರ ಸ್ಥಾನಕ್ಕೆ ಶಾಸಕ ಷಡಕ್ಷರಿ ಹೆಸರು ಮಾತ್ರ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ