ಆ್ಯಪ್ನಗರ

ರಾಹುಲ್‌ಗೆ ದಲಿತ ಹೆಣ್ಣು ಕೊಡಿಸಲು ಸಿದ್ಧ: ಕಾರಜೋಳ

ರಾಹುಲ್ ಗಾಂಧಿಗೆ ಕರ್ನಾಟಕದಿಂದ ದಲಿತ ಕುಟುಂಬದ ಹೆಣ್ಣು ಕೊಡಿಸಲು ನಾವು ಸಿದ್ದರಿದ್ದೇವೆ ಎಂದು ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Vijaya Karnataka 29 Aug 2017, 3:24 pm
ಬೆಂಗಳೂರು: ರಾಹುಲ್ ಗಾಂಧಿಗೆ ಕರ್ನಾಟಕದಿಂದ ದಲಿತ ಕುಟುಂಬದ ಹೆಣ್ಣು ಕೊಡಿಸಲು ನಾವು ಸಿದ್ದರಿದ್ದೇವೆ. ಬೇಕಾದರೆ ಬಂದು ಮದುವೆಯಾಗಬಹುದು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
Vijaya Karnataka Web rahul will marry a dalit girl
ರಾಹುಲ್‌ಗೆ ದಲಿತ ಹೆಣ್ಣು ಕೊಡಿಸಲು ಸಿದ್ಧ: ಕಾರಜೋಳ


ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಖರ್ಗೆ,ಪರಮೇಶ್ವರ, ದಿನೇಶ್ ಗುಂಡೂರಾವ್ ಯಾರಾದರೂ ಮಧ್ಯಸ್ಥಿಕೆ ವಹಿಸಿ ಸೋನಿಯಾಗಾಂಧಿಯವರೊಂದಿಗೆ ಮಾತುಕತೆ ನಡೆಸಿ ಅವಿವಾಹಿತ ರಾಹುಲ್ ಗಾಂಧಿಯವರಿಗೆ ಮದುವೆ ಮಾಡಿಸಲಿ ಎಂದರು.

ಕರ್ನಾಟಕದ ದಲಿತ ಕುಟುಂಬದಿಂದ ರಾಹುಲ್ ಗಾಂಧಿಗೆ ಹೆಣ್ಣು ಕೊಡಲು ನಾವು ಸಿದ್ದ. ಅವರು ಖರ್ಗೆಯವರ ವಂಶಸ್ಥರ ಜತೆ ಯಾದರೂ ಸಂಬಂಧ ಬೆಳಸಲಿ, ಪರಮೇಶ್ವರ ವಂಶದವರ ಜತೆಯಾದರೂ ಸಂಬಂಧ ಬೆಳೆಸಲಿ ಅಥವಾ ಕಾರಜೋಳ ವಂಶಸ್ಥರ ಜತೆಯಾದರೂ ಸಂಬಂಧ ಬೆಳೆಸಿದರೆ ನಾವು ಸೋನಿಯಾಗಾಂಧಿಯವರಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ