ಆ್ಯಪ್ನಗರ

ಎ-ಖಾತಾ ಮತ್ತು ಬಿ- ಖಾತ ದಾಖಲೆಪತ್ರಗಳ ನಡುವೆ ಇರುವ ವ್ಯತ್ಯಾಸಗಳು

ನಮ್ಮ ಹಣ ಹಾಗೂ ಆಸ್ತಿಯ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Magicbricks 11 Dec 2019, 5:08 pm
ಆಸ್ತಿಯ ದಾಖಲೆ ಪತ್ರಗಳು ಸಾಮಾನ್ಯವಾಗಿ ಎ,ಬಿ,ಸಿ,ಡಿ,ಇ ಎನ್ನುವ ಖಾತಾ ಅಡಿಯಲ್ಲಿ ಎ-ಖಾತಾ, ಬಿ-ಖಾತಾಗಳು ಪ್ರಾರಂಭವಾಗುತ್ತವೆ. ಈ ವಿಷಯಗಳ ಬಗ್ಗೆ ಅನೇಕರು ತಿಳಿದಿರುತ್ತಾರೆ. ಆದರೆ ಆಳವಾಗಿ ಅವುಗಳ ಮಹತ್ವವನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದು. ಸಾಕಷ್ಟು ಜನರು ಆಸ್ತಿಗೆ ಸಂಬಂಧಿಸಿದಂತೆ ಎ-ಖಾತಾ ಅಥವಾ ಬಿ-ಖಾತಾ ಎನ್ನುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.
Vijaya Karnataka Web magicbricks


ಅಲ್ಲದೆ ಅವುಗಳ ಕುರಿತು ಯಾವುದೇ ಕ್ರಮ ಕೈಗೊಳ್ಳಲು ಸಹ ಮುಂದಾಗುವುದಿಲ್ಲ. ಆಸ್ತಿಯ ದಾಖಲೆ ಪತ್ರದಲ್ಲಿ ಇರುವ ಖಾತಾಗಳ ವಿವರವನ್ನು ತಿಳಿದುಕೊಂಡಿದ್ದರೆ ಆಸ್ತಿಗೆ ಸಂಬಂಧಿಸಿದಂತೆ ಅನಗತ್ಯವಾಗಿ ಬರುವ ತೊಂದರೆಗಳಿಂದ ದೂರ ಇರಬಹುದು.

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ತನ್ನ ವ್ಯಾಪ್ತಿಗೆ ಬರುವ ಆಸ್ತಿಗೆ ನೀಡುವ ದಾಖಲಾತಿ ಎನ್ನಲಾಗುವುದು. ಇದು ತೆರಿಗೆ ಪಾವತಿಸುವ ಹೊಣೆಗಾರಿಕೆಯನ್ನು ತಿಳಿಸುವುದು. ಆದರೆ ಅವನ/ಅವಳ ಮಾಲೀಕತ್ವದ ಬಗ್ಗೆ ಘೋಷಿಸುವುದಿಲ್ಲ. ಖಾತೆ ಹೊಂದಿರುವುದು ಎಂದರೆ ನೀವು ಆಸ್ತಿಗೆ ತೆರಿಗೆಯನ್ನು ಪಾವತಿಸುವ ಹೊಣೆಗಾರಿಕೆಯನ್ನು ತಿಳಿಸುವುದು. ಈ ಖಾತೆಯು ಒಂದು ನಿರ್ದಿಷ್ಟ ಆಸ್ತಿಯ ಮೇಲೆ ನಮ್ಮ ಮಾಲಿಕತ್ವ ಅಥವಾ ಹಕ್ಕು ಎಷ್ಟಿದೆ ಎನ್ನುವುದನ್ನು ತಿಳಿಸುತ್ತದೆ. ಒಂದು ಆಸ್ತಿಯನ್ನು ಖರೀದಿಸುವಾಗ ಮತ್ತು ಮಾರುವಾಗ ಖಾತೆಯು ಅತ್ಯಗತ್ಯವಾಗಿರುತ್ತದೆ.

ಯಾವುದೇ ವ್ಯಕ್ತಿ ಬಿಬಿಎಂಪಿ ಮಿತಿಯಲ್ಲಿ ಆಸ್ತಿಯನ್ನು ಹೊಂದಿದ್ದರೆ ಖಾತೆಯನ್ನು ಹೊಂದಲು ಅರ್ಹನಾಗಿರುತ್ತಾನೆ. ಖಾತೆಯನ್ನು ಪಡೆದುಕೊಂಡ ನಂತರ ಆ ಆಸ್ತಿಗೆ ಸೂಕ್ತ ತೆರಿಗೆಯನ್ನು ಪಾವತಿಸಲು ಅರ್ಹನಾಗಿರುತ್ತಾನೆ. ಖಾತೆಗೆ ಅನುಗುಣವಾಗಿ ದಾಖಲಾತಿಯ ಪತ್ರದಲ್ಲಿ ಮಾಲೀಕನ ಹೆಸರು, ಆಸ್ತಿಯ ಸ್ಥಳ, ಗಾತ್ರ, ಆಸ್ತಿಯ ಸಂಖ್ಯೆ, ಗಡಿ ರೇಖೆಗಳು, ಅಂತರ್ನಿರ್ಮಿತ ಪ್ರದೇಶ ಮತ್ತು ಆಸ್ತಿಗೆ ಸಲ್ಲಿಸಿದ ತೆರಿಗೆಯ ವಿವರ ಸೇರಿದಂತೆ ಎಲ್ಲಾ ಮಾಹಿತಿಯು ಇರುತ್ತವೆ. ನಿರ್ದಿಷ್ಟ ಆಸ್ತಿಯ ಮೇಲೆ ಪಾವತಿಸಬೇಕಾದ ತೆರಿಗೆಯನ್ನು ಲೆಕ್ಕ ಮಾಡಲು ಖಾತಾ ಎನ್ನುವುದು ಅತ್ಯಗತ್ಯ.

ಎ ಖಾತಾ ಮತ್ತು ಬಿ-ಖಾತಾ ನಡುವಿನ ವ್ಯತ್ಯಾಸ:
ಎ- ಖಾತಾ ಮತ್ತು ಬಿ-ಖಾತಾ ಪರಿಕಲ್ಪನೆಯನ್ನು ಬಿಬಿಎಂಪಿಯು 2007ರಲ್ಲಿ ಜಾರಿಗೆ ತಂದಿತು. ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಖಾತಾ ವಿಭಾಗವನ್ನು ರಚಿಸಲಾಯಿತು ಎನ್ನಲಾಗುತ್ತದೆ. ಎ ಖಾತಾ ಹೊಂದಿರುವ ಆಸ್ತಿಯು ಸಂಪೂರ್ಣವಾಗಿ ಕಾನೂನು ಬದ್ಧವಾಗಿರುವುದು ಎಂದು ಪರಿಗಣಿಸಿತು. ಬಿ-ಖಾತಾ ಎನ್ನುವುದು ಅರೆ ಕಾನೂನು ಅಥವಾ ಕಾನೂನು ಬಾಹಿರ ಎಂದು ಪಟ್ಟಿ ಮಾಡಲಾಯಿತು.

ಎ-ಖಾತಾ ಹೊಂದಿರುವ ನಿಮ್ಮ ಆಸ್ತಿಯ ದಾಖಲಾತಿ ಪತ್ರವು ಸಂಪೂರ್ಣವಾಗಿ ಕಾನೂನು ಬದ್ಧವಾಗಿದೆ ಎಂದು ಸಾಬೀತುಪಡಿಸುತ್ತದೆ. ಆಸ್ತಿಯು ಎಲ್ಲಾ ಸರ್ಕಾರಿ ನಿಯಮಗಳಿಗೆ ಬದ್ಧವಾಗಿದೆ. ಜೊತೆಗೆ ಎಲ್ಲಾ ಬಗೆಯ ಕಾನೂನು ದೃಷ್ಟಿಯಿಂದಲೂ ಸರಿಯಾದ ದಾಖಲಾತಿಯನ್ನು ಹೊಂದಿರುವ ಆಸ್ತಿ ಎಂದು ಪರಿಗಣಿಸ ಲಾಗುವುದು. ಎ-ಖಾತಾ ಹೊಂದಿರುವ ಆಸ್ತಿಗೆ ವ್ಯಾಪಾರ ಪರವಾನಗಿ, ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ, ಕಟ್ಟಡ ಯೋಜನೆ ಅನುಮೋದನೆ ಮತ್ತು ಬ್ಯಾಂಕ್‍ಗಳಿಂದ ಸಾಲಗಳಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಆದರೆ ಬಿ-ಖಾತಾ ಆಸ್ತಿಯ ಗುಣಲಕ್ಷಣಗಳು ಈ ರೀತಿಯಲ್ಲಿ ಇರುವುದಿಲ್ಲ. ಬಿ-ಖಾತಾ ದಾಖಲೆ ಪತ್ರಗಳ ಆಸ್ತಿಯು ಕಾನೂನು ಬಾಹಿರವಾಗಿರುತ್ತದೆ. ಜೊತೆಗೆ ಅನೇಕ ನಿಯಮಗಳ ಉಲ್ಲಂಘನೆಯನ್ನು ಸೂಚಿಸುತ್ತದೆ. ಬಿ-ಖಾತಾ ಪಟ್ಟಿಯಲ್ಲಿ ಮಾಡಲಾದ ಗುಣಲಕ್ಷಣಗಳ ಪ್ರಕಾರ ಅಲ್ಲಿ ಅನಧಿಕೃತ ವಿನ್ಯಾಸಗಳು, ಪೂರ್ಣಗೊಳ್ಳದ ರಚನೆ ಹಾಗೂ ಅನುಚಿತ ರೀತಿಯಲ್ಲಿ ಇಷ್ಟಗಳ ಮೇರೆಗೆ ಕಟ್ಟಡಗಳ ನಿರ್ಮಾಣವಾಗಿರುತ್ತದೆ. ಬಿ-ಖಾತಾ ಆಸ್ತಿ ಹೊಂದಿರುವ ವ್ಯಕ್ತಿಗಳು ಸರ್ಕಾರದ ಪರವಾನಗಿ, ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ. ಮಾಲೀಕತ್ವವನ್ನು ಮರು ಮಾರಾಟ ಅಥವಾ ವರ್ಗಾವಣೆ ಮಾಡುವುದಕ್ಕೆ ಯಾವುದೇ ಅಧಿಕೃತ ಹಕ್ಕುಗಳು ಇರುವುದಿಲ್ಲ.

ನೀವು ಬಿ-ಖಾತಾ ಆಸ್ತಿಯನ್ನು ಹೊಂದಿದ್ದು, ಲಭ್ಯವಿರುವ ಸೌಲಭ್ಯವನ್ನು ಪಡೆಯಬೇಕು ಎಂದಾದರೆ ಅದನ್ನು ಮೊದಲು ಎ-ಖಾತವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಎ-ಖಾತಾ ಆಸ್ತಿಗೆ ಸಿಗುವ ಕೆಲವು ಅನುಕೂಲಗಳು ಹೀಗಿವೆ..

  • ಬಿಬಿಎಂಪಿ ನಿಮ್ಮ ಆಸ್ತಿಯನ್ನು ಕಾನೂನುಬದ್ಧವಾಗಿದೆ ಎಂದು ಗುರುತಿಸುವುದು.
  • ನೀರು ಮತ್ತು ವಿದ್ಯುತ್ ಸಂಪರ್ಕಗಳಂತಹ ಮೂಲಭೂತ ಸೌಲಭ್ಯಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು.
  • ಆಸ್ತಿಗೆ ಸಂಬಂಧಿಸಿದಂತೆ ವ್ಯಾಪಾರದ ಪರವಾನಗಿಯನ್ನು ಪಡೆಯಬಹುದು.
  • ಸಾಲವನ್ನು ಪಡೆಯಲು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ನೀವು ಬಡವರಾಗಿ ಜನಿಸಿದರೆ ಅದು ನಿಮ್ಮ ತಪ್ಪಲ್ಲ ಎಂದು ಹೇಳಲಾಗುವುದು. ಅದೇ ನೀವು ಬಡವರಾಗಿ ಸತ್ತರೆ ಅದು ಖಂಡಿತವಾಗಿಯೂ ನಿಮ್ಮ ತಪ್ಪಾಗುವುದು. ಅಂತೆಯೇ, ಬಿ-ಖಾತಾ ಆಸ್ತಿಯನ್ನು ಖರೀದಿಸುವುದು ದೊಡ್ಡ ವಿಷಯವಲ್ಲ. ಆದರೆ ಅದನ್ನು ಎ-ಖಾತಾ ವನ್ನಾಗಿ ಪರಿವರ್ತಿಸಿಕೊಳ್ಳದೆ ಹೋದರೆ ಅದು ನಿಮ್ಮ ಕಡೆಯಿಂದ ದೊಡ್ಡ ತಪ್ಪಾಗುವುದು. ಎ-ಖಾತಾ ಆಸ್ತಿಯನ್ನು ಹೊಂದುವುದರಿಂದ ಪಡೆದುಕೊಳ್ಳಬಹುದಾದ ಪ್ರಯೋಜನಗಳನ್ನು ಅರ್ಥಮಾಡಿಕೊಂಡ ನಂತರ ನೀವು ಆ ತಪ್ಪುಗಳನ್ನು ಮಾಡುವುದಿಲ್ಲ ಎಂದು ಭಾವಿಸುತ್ತೇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ