Please enable javascript.Christmas 2022,Christmas 2022: ಕ್ರಿಸ್‌ಮಸ್‌ನ ಮಹತ್ವ ಮತ್ತು ಇತಿಹಾಸವೇನೆಂಬುದು ನಿಮಗೆ ಗೊತ್ತೇ..? - christmas 2022 celebrate on 25 december know its history and importance - Vijay Karnataka

Christmas 2022: ಕ್ರಿಸ್‌ಮಸ್‌ನ ಮಹತ್ವ ಮತ್ತು ಇತಿಹಾಸವೇನೆಂಬುದು ನಿಮಗೆ ಗೊತ್ತೇ..?

Authored byಮನಿಷಾ ಆನಂದ | Agencies 23 Dec 2022, 2:39 pm
Subscribe

ಭಾರತದಲ್ಲಿ ಹಾಗೂ ಕ್ರೈಸ್ತ ಸಮುದಾಯದವರು ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಹಬ್ಬವೂ ಒಂದು. ಪ್ರತೀ ವರ್ಷದಂತೆ ಈ ವರ್ಷವೂ ಡಿಸೆಂಬರ್ 25 ರಂದು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುವುದು. ಕ್ರಿಸ್‌ಮಸ್‌ ಹಬ್ಬದ ಪ್ರಾಮುಖ್ಯತೆಯೇನು..? ಕ್ರಿಸ್‌ಮಸ್‌ ಹಬ್ಬದ ಆಚರಣೆಯು ಆರಂಭವಾಗಿದ್ದು ಹೇಗೆ..?

ಹೈಲೈಟ್ಸ್‌:

ಹೈಲೈಟ್ಸ್‌:
  • ಕ್ರಿಸ್‌ಮಸ್‌ ಹಬ್ಬದ ಪ್ರಾಮುಖ್ಯತೆ
  • ಕ್ರಿಸ್‌ಮಸ್‌ ಹಬ್ಬದ ಇತಿಹಾಸ
  • ಕ್ರಿಸ್‌ಮಸ್‌ ಹಬ್ಬದ ಉಗಮ
Christmas 2022
ಕ್ರಿಸ್‌ಮಸ್‌ 2022
ಕ್ರಿಸ್‌ಮಸ್‌ ಹಬ್ಬವು ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್‌ಮಸ್‌ ದಿನವಾಗಿ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ನ ಸಂಭ್ರಮವು ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 24 ರಿಂದ ಪ್ರಾರಂಭವಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ಈ ದಿನವನ್ನು ಯೇಸುಕ್ರಿಸ್ತನ ಜನ್ಮದಿನವೆಂದು ಆಚರಿಸುತ್ತಾರೆ. ಭಾರತದಲ್ಲಿಯೂ ಕ್ರಿಶ್ಚಿಯನ್ ಧರ್ಮದ ಜೊತೆಗೆ ಎಲ್ಲಾ ಧರ್ಮದ ಜನರು ಕ್ರಿಸ್‌ಮಸ್‌ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಕ್ರಿಸ್‌ಮಸ್‌ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ..?
Christmas 2022 : ಪ್ರೀತಿ, ಶಾಂತಿ ಸಾರಿದ ಏಸುಕ್ರಿಸ್ತರ ಜನ್ಮದಿನದ ಹಬ್ಬ : ಇಲ್ಲಿದೆ ಕ್ರಿಸ್‌ಮಸ್‌ನ ಅಪರೂಪದ ಸಂಗತಿಗಳು
Christmas

ಕ್ರಿಸ್‌ಮಸ್‌


Christmas 2022: ಕ್ರಿಸ್‌ಮಸ್‌ನಲ್ಲಿ ಕ್ರಿಸ್‌ಮಸ್‌ ಟ್ರೀಯನ್ನೇಕೆ ಅಲಂಕರಿಸಬೇಕು..? ಹಿನ್ನೆಲೆ ಹೀಗಿದೆ..!
ಕ್ರಿಶ್ಚಿಯನ್ ಧರ್ಮದ ಜನರು ಕ್ರಿಸ್‌ಮಸ್‌ ಹಬ್ಬವನ್ನು ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ಅಂದರೆ ಡಿಸೆಂಬರ್ 24 ರಿಂದ ಆಚರಿಸುತ್ತಾರೆ. ಡಿಸೆಂಬರ್ 24 ರ ಮಧ್ಯರಾತ್ರಿ, ಜನರು ಚರ್ಚ್‌ಗೆ ಹೋಗುತ್ತಾರೆ ಮತ್ತು ಅಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ತಮ್ಮ ದೇವನಾದ ಯೇಸು ಕ್ರಿಸ್ತನನ್ನು ಈ ದಿನ ನೆನೆಯುತ್ತಾರೆ. ನಂತರ ಕ್ರಿಸ್‌ಮಸ್‌ ಹಬ್ಬದ ದಿನದಂದು ಪರಸ್ಪರ ಅಭಿನಂದಿಸಿ ಮತ್ತು ಉಡುಗೊರೆಗಳನ್ನು ವಿತರಿಸುತ್ತಾರೆ.

Chanakya Niti : ಜೀವನದಲ್ಲಿ ಒಳಿತಾಗಲು ಈ ಐದು ಅಂಶಗಳನ್ನು ಯಾವತ್ತೂ
1. ಕ್ರಿಸ್‌ಮಸ್ ಹಬ್ಬದ ಪ್ರಾಮುಖ್ಯತೆ:
ಒಂದು ಕಾಲದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಇಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಇದು ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು ಮತ್ತು ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸು ಕ್ರಿಸ್ತನು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಕ್ರಿಸ್‌ಮಸ್‌ ಹಬ್ಬದ ಕುರಿತು ಇದೆ.

Paush Maas 2022-23: ಪುಷ್ಯ ಮಾಸದಲ್ಲಿ ನಾವು ಈ ಕೆಲಸಗಳನ್ನು ಮಾಡಲೇಬೇಕು..!
Christmas

ಕ್ರಿಸ್‌ಮಸ್‌


Chandra Darshan 2022: ಕೊನೆಯ ಚಂದ್ರ ದರ್ಶನದ ಸಮಯ, ಪೂಜೆ ವಿಧಾನ, ಮಂತ್ರ
2. ಕ್ರಿಸ್‌ಮಸ್‌ 2022 ಇತಿಹಾಸ:
ಕ್ರಿಸ್‌ಮಸ್‌ನ ಇತಿಹಾಸವು ಕೇವಲ ಕೆಲವು ವರ್ಷಗಳಷ್ಟು ಹಳೆಯದಲ್ಲ, ಆದರೆ ಈ ಆಚರಣೆಯು ಹಲವು ಶತಮಾನಗಳ ಹಿಂದಿನದು. ಕ್ರಿಸ್‌ಮಸ್ ಅನ್ನು ಮೊದಲು ರೋಮ್‌ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿಸೆಂಬರ್ 25 ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆ ಸಮಯದಲ್ಲಿ, ರೋಮ್‌ನ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ಮುಖ್ಯ ದೇವತೆಯಾಗಿ ಪರಿಗಣಿಸುತ್ತಿದ್ದರು ಮತ್ತು ಸೂರ್ಯದೇವನನ್ನು ಪೂಜಿಸುತ್ತಿದ್ದರು.

Paush Maas 2022-23: ಪುಷ್ಯ ಮಾಸದ ಕುರಿತು ನೀವು ತಿಳಿದುಕೊಳ್ಳಲೇಬೇಕಾದ 10
ಆದರೆ ಕ್ರಿ.ಶ. 330 ರ ಹೊತ್ತಿಗೆ, ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು. ರೋಮ್‌ನಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆ ಹೆಚ್ಚಾಯಿತು. ಇದಾದ ನಂತರ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರವೆಂದು ಒಪ್ಪಿಕೊಂಡರು ಮತ್ತು ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯವು ಡಿಸೆಂಬರ್ 25 ರಂದು ಪ್ರಾರಂಭವಾಯಿತು.

Paush Month 2022-23 : ಸೂರ್ಯನ ಪೂಜೆಗೆ ಉತ್ತಮ ಮಂಗಳಕರ ಪುಷ್ಯ ಮಾಸ
christmas

ಕ್ರಿಸ್‌ಮಸ್‌


Margashirsha Amavasya 2022: 2022ರ ಕೊನೆಯ ಅಮಾವಾಸ್ಯೆ ಮುಹೂರ್ತ, ಪೂಜೆ
ಜನರು ಈ ದಿನವನ್ನು ಕೆಟ್ಟದ್ದರ ಮೇಲೆ ಒಳಿತಿನ ವಿಜಯವೆಂದು ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮದ ಜನರಿಗೆ ಕ್ರಿಸ್‌ಮಸ್‌ ಹಬ್ಬವು ಹೊಸ ವರ್ಷವಾಗಿದೆ. ಪ್ರತಿ ವರ್ಷದಂತೆ, ಈ ವರ್ಷ ಅಂದರೆ 2022 ರಲ್ಲಿ, ಕ್ರಿಸ್‌ಮಸ್‌ ದಿನವನ್ನು ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ