ಆ್ಯಪ್ನಗರ

2020 ಅಕ್ಟೋಬರ್‌ನ ಶುಭ ದಿನಗಳಾವುವು..? ಈ ಯೋಗದಲ್ಲೇ ಚಿನ್ನ ಖರೀದಿಸಿ..!

2020 ಅಕ್ಟೋಬರ್‌ ತಿಂಗಳು ಅತ್ಯಂತ ವಿಶೇಷ ಮಾಸವಾಗಿದ್ದು. ಈ ಮಾಸದಲ್ಲಿ 2020 ರ ಅಧಿಕ ಮಾಸವು ಕೊನೆಗೊಳ್ಳಲಿದೆ. ಅಕ್ಟೋಬರ್‌ ಮಾಸದಲ್ಲಿ ಯಾವೆಲ್ಲಾ ಶುಭ ದಿನಗಳು ಶುಭ ಯೋಗದೊಂದಿಗೆ ಸೇರಲಿದೆ ಗೊತ್ತಾ..? ಈ ಯೋಗದಲ್ಲಿ ಯಾವ ಕೆಲಸ ಮಾಡಿದರೆ ಶುಭ..? ಯಾವ ಕೆಲಸ ಮಾಡಿದರೆ ಅಶುಭ..?

Vijaya Karnataka Web 7 Oct 2020, 2:46 pm
ಅಕ್ಟೋಬರ್‌ ತಿಂಗಳಿನಲ್ಲಿ ನಾಲ್ಕು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಿದ್ದರೆ, ಈ ತಿಂಗಳಲ್ಲಿನ ಕೆಲವು ದಿನಗಳು ಜ್ಯೋತಿಷ್ಯದ ಪ್ರಕಾರ ಅತ್ಯಂತ ಶುಭ ದಿನವಾಗಿದೆ. 2020 ಅಕ್ಟೋಬರ್‌ ತಿಂಗಳಲ್ಲಿ ಅಧಿಕ ಮಾಸವು ಮುಕ್ತಾಯಗೊಳ್ಳುತ್ತದೆ ಮತ್ತು 2020 ರ ನವರಾತ್ರಿಯು ಅರಂಭಗೊಳ್ಳುತ್ತದೆ. ಅಷ್ಟು ಮಾತ್ರವಲ್ಲದೇ, ಲಕ್ಷ್ಮಿ ಶಾರದ ಪೌರ್ಣಮಿಯ ಪೂಜಾ ದಿನವು ಈ ತಿಂಗಳಲ್ಲಿ ಬರಲಿದೆ. ಈ ಶುಭ ದಿನಗಳಲ್ಲಿ ದೇವರನ್ನು ಪೂಜಿಸುವುದರಿಂದ ಶುಭ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಮತ್ತು ಕುಟುಂಬದಲ್ಲಿ ಶಾಂತಿ, ಸಂತೋಷ ಹೆಚ್ಚಾಗುತ್ತದೆ. 2020 ಅಕ್ಟೋಬರ್‌ನಲ್ಲಿನ ಶುಭ ದಿನಗಳಾವುವು ತಿಳಿದುಕೊಳ್ಳಿ.
Vijaya Karnataka Web these days of 2020 october bring you wealth and prosperity
2020 ಅಕ್ಟೋಬರ್‌ನ ಶುಭ ದಿನಗಳಾವುವು..? ಈ ಯೋಗದಲ್ಲೇ ಚಿನ್ನ ಖರೀದಿಸಿ..!


​ಈ ಯೋಗದಲ್ಲಿ ಶುಭ ಪರಿಣಾಮವನ್ನು ಪಡೆಯುವಿರಿ

2020 ರ ಅಕ್ಟೋಬರ್‌ 11 ರಂದು ಭಾನುವಾರ ರವಿಪುಷ್ಯ ಶುಭ ಯೋಗವು ಆರಂಭವಾಗಲಿದೆ. ರವಿಪುಷ್ಯ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಪುಷ್ಯ ಯೋಗವು ನೀಡುವ ಶುಭ ಫಲಕ್ಕೆ ಸಮನಾಗಿದೆ ಎನ್ನುವ ನಂಬಿಕೆಯಿದೆ. ಎಲ್ಲಾ ಅಶುಭ ಯೋಗದ ದೋಷವನ್ನು ದೂರಾಗಿಸುವ ಸಾಮರ್ಥ್ಯವನ್ನು ಈ ಒಂದು ಯೋಗವು ಪಡೆದುಕೊಂಡಿದೆ. ಈ ಯೋಗದಲ್ಲಿ ನೀವು ಯಾವುದೇ ಶುಭ ಕಾರ್ಯವನ್ನು ಮಾಡಬಹುದಾಗಿದೆ. ವಾಹನ, ಭೂಮಿಯನ್ನು ಖರೀದಿಸಬಹುದು. ಜೊತೆಗೆ ಹೊಸ ಕೆಲಸವನ್ನು ಕೂಡ ಅರಂಭಿಸಲು ಇದು ಶುಭ ಸಮಯವಾಗಿದೆ. ಈ ಎಲ್ಲಾ ಕೆಲಸಗಳಿಂದಲೂ ನೀವು ಶುಭ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಅಲ್ಲದೆ, ಈ ದಿನ, ಚಂದ್ರನು ತನ್ನದೇ ಆದ ರಾಶಿಚಕ್ರ ಚಿಹ್ನೆಯಲ್ಲಿ ಉಳಿಯುತ್ತಾನೆ, ಅದು ಚಂದ್ರನ ಸ್ವಂತ ರಾಶಿಚಕ್ರವಾಗಿದೆ, ಅಂದರೆ ಚಂದ್ರನು ಬಲವಾಗಿರುತ್ತಾನೆ. ಇದೂ ಶುಭವಾಗಲಿದೆ. ಇದರೊಂದಿಗೆ, ಈ ದಿನದಂದು ಸರ್ವಾರ್ಥ ಸಿದ್ಧ ಯೋಗವನ್ನು ಮಾಡಲಾಗುತ್ತಿದೆ, ಇದು ಈ ದಿನದ ಮಹತ್ವವನ್ನು ಹಲವು ಬಾರಿ ಹೆಚ್ಚಿಸುತ್ತದೆ.

ನವರಾತ್ರಿಯ ಒಂಭತ್ತು ದಿನಗಳಲ್ಲಿ ಯಾವ ದಿನ ಯಾವ ದೇವಿಯ ಪೂಜೆ? ಶುಭ ಮುಹೂರ್ತದ ಮಾಹಿತಿ ಇಲ್ಲಿದೆ..

​ಈ ಯೋಗ ಶುಭ ಫಲವನ್ನು ನೀಡುವುದು

ಅಧಿಕ ಮಾಸದ ಎರಡನೇ ಏಕಾದಶಿಯು ಕಾಮಿಕಾ ಏಕಾದಶಿಯಾಗಿದ್ದು, ಈ ಏಕಾದಶಿಯು 2020 ರ ಅಕ್ಟೋಬರ್‌ 13 ರಂದು ಮಂಗಳವಾರ ಬರಲಿದೆ. ಪ್ರಾಚೀನ ಧರ್ಮಗ್ರಂಥಗಳ ಪ್ರಕಾರ, ಕಾಮಿಕಾ ಏಕಾದಶಿ ವ್ರತವನ್ನು ಆಚರಿಸುವುದರಿಂದ ವಾಜಪೇಯಿ ಯಜ್ಞಕ್ಕೆ ಸಮಾನವಾದ ಫಲವನ್ನು ಪಡೆಯಬಹುದು. ಅಧಿಕ ಮಾಸದಲ್ಲಿ ಈ ಏಕಾದಶಿ ಬಂದಿರುವುದರಿಂದ ಇದು ಮತ್ತಷ್ಟು ಫಲದಾಯಕವಾಗಿದೆ. ಈ ದಿನ ಶುಭ ಯೋಗವೆಂಬ ಯೋಗವೂ ಕೂಡ ಜೊತೆಯಾಗಲಿದೆ. ಯೋಗದ ಹೆಸರೇ ಸೂಚಿಸುವಂತೆ ಈ ಯೋಗ ಯಾವಾಗಲೂ ಶುಭ ಫಲವನ್ನೇ ನೀಡುವುದು. ನೀವು ಈ ಶುಭ ಯೋಗದಲ್ಲಿ ಹಣದ ಹೂಡಿಕೆಯನ್ನು ಮಾಡಬಹುದು ಮತ್ತು ಯಾವುದೇ ನೂತನ ಕೆಲಸವನ್ನು ಆರಂಭಿಸಬಹುದು. ಈ ಯೋಗದಲ್ಲಿ ನೀವು ಯಾವುದೇ ಕಾರ್ಯ ಮಾಡಿದರೂ ಅದರಿಂದ ಶುಭ ಫಲವನ್ನು ಪಡೆದುಕೊಳ್ಳುವಿರಿ. ಈ ಯೋಗವು ಗುರು ಪುಷ್ಯ ಯೋಗವು ನೀಡುವ ಫಲದಷ್ಟೇ ಪರಿಣಾಮಕಾರಿಯಾಗಿದೆ.

2020 ನವರಾತ್ರಿ: ಕುದುರೆಯನ್ನೇರಿ ಬರುವ ದುರ್ಗೆ..! ಇದು ಶುಭವೋ..? ಅಶುಭವೋ..?

​ಈ ಯೋಗದಲ್ಲಿ ಮಾನ - ಸಮ್ಮಾನವು ನಿಮ್ಮದಾಗುವುದು

2020 ರ ಅಕ್ಟೋಬರ್ 15 ರ ಗುರುವಾರದಂದು ಮಾಸಿಕ ಶಿವರಾತ್ರಿ ಅಥವಾ ಮಾಸ ಶಿವರಾತ್ರಿ ಬರಲಿದೆ. ಈ ದಿನದಂದು ಶಿವನನ್ನು ಪೂಜಿಸುವ ಮೂಲಕ ವ್ಯಕ್ತಿಯು ಸಂತೋಷವನ್ನು ಮತ್ತು ಸಮೃದ್ಧಿಯನ್ನು ಪಡೆಯುವನು. ಮಾಸ ಶಿವರಾತ್ರಿಯೊಂದಿಗೆ ಈ ದಿನ ಸಮೃದ್ಧಿದಾಯಕ ಬ್ರಹ್ಮ ಯೋಗವು ಜೊತೆಯಾಗಲಿದೆ. ಈ ಶುಭ ಯೋಗದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಿದರೂ ಅದರಿಂದ ನೀವು ಗೌರವವನ್ನು ಸಂಪಾದಿಸುವಿರಿ. ನೀವು ಶಾಂತಿದಾಯಕ ಕೆಲಸವನ್ನು ಮಾಡಲು ಬಯಸಿದರೆ ಈ ಯೋಗದಲ್ಲಿ ಮಾಡಬಹುದು. ಇದರೊಂದಿಗೆ ಈ ದಿನ ಐಂದ್ರ ಯೋಗ ಕೂಡ ಬರಲಿದೆ. ಈ ಯೋಗದಲ್ಲಿ ಹಣಕ್ಕೆ ಸಂಬಂಧಿಸಿದ ಕೆಲಸ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಯೋಗದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುವಿರಿ.

2020 ಅಕ್ಟೋಬರ್‌: 2020 ನವರಾತ್ರಿ ಯಾವಾಗ..? ಈ ಬಾರಿ ನವರಾತ್ರಿಯ ವಿಶೇಷವೇನು..?

​ಈ ಯೋಗದಲ್ಲಿ ಕೆಲಸ ಮಾಡಲು ಯಾವುದೇ ಅಡೆತಡೆಗಳಿರುವುದಿಲ್ಲ

2020 ರ ಅಕ್ಟೋಬರ್‌ 26 ರಂದು ಸೋಮವಾರ ಅನೇಕ ಯೋಗಗಳು ಜೊತೆಯಾಗಲಿದೆ. ಈ ದಿನ ವೃದ್ಧಿ ಯೋಗ ಸೃಷ್ಟಿಯಾಗುವುದು. ಯೋಗದ ಹೆಸರೇ ಸೂಚಿಸುವಂತೆ ಇದು ವೃದ್ಧಿದಾಯಕ ಯೋಗವಾಗಿದೆ. ಈ ಯೋಗದಲ್ಲಿ ನೀವು ಯಾವುದೇ ಕೆಲಸವನ್ನು ಮಾಡದರೂ ಅದು ಬೆಳವಣಿಗೆಗೆ ಕಾರಣವಾಗುತ್ತದೆ. ನೀವು ಹೊಸ ವ್ಯವಹಾರ ಅಥವಾ ಉದ್ಯೋಗವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅದನ್ನು ಅತ್ಯುತ್ತಮ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ಯೋಗದಲ್ಲಿ ಕೆಲಸ - ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ಯಾವುದೇ ಅಡೆತಡೆಗಳು ಬರಲಾರದು. ಈ ದಿನ ನೀವು ಚಿನ್ನ ಮತ್ತು ಬೆಳ್ಳಿಯನ್ನು ಕೂಡ ಖರೀದಿಸಬಹುದು. ಈ ದಿನ 2020 ರ ವಿಜಯದಶಮಿ ಕೂಡ ಬಂದಿದೆ.

ದೇವರ ಕೋಣೆ ಹೇಗಿರಬೇಕು..?ನಿಯಮ ತಪ್ಪಿದರೆ ಕಷ್ಟ - ನಷ್ಟ ಕಟ್ಟಿಟ್ಟ ಬುತ್ತಿ..!

​ಈ ಯೋಗ ಮಹಾಲಕ್ಷ್ಮಿ ಆಶೀರ್ವಾದ ನೀಡುತ್ತದೆ

2020 ಅಕ್ಟೋಬರ್‌ 31 ರಂದು ಶನಿವಾರ ಶಾರದ ಪೌರ್ಣಮಿಯ ಶುಭ ದಿನವಾಗಿದೆ. ಮಹಾಲಕ್ಷ್ಮಿಯು ಶಾರದ ಪೌರ್ಣಮಿ ದಿನ ಜನಿಸಿದಳೆಂಬ ನಂಬಿಕೆಯಿದೆ. ಆದ್ದರಿಂದ ಈ ದಿನವನ್ನು ಧರ್ಮಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಟವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ದಿನವೆಂದು ಕರೆಯುತ್ತಾರೆ. ಈ ದಿನ ರಾತ್ರಿ ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಶುಭ ಫಲವನ್ನು ಪಡೆಯುವಿರಿ. ಈ ದಿನ ಲಕ್ಷ್ಮಿ ದೇವಿಯ ವ್ರತವನ್ನು ಕೂಡ ಅಚರಿಸಲಾಗುವುದು. ಈ ದಿನ ಮಾಡಿದ ಕೆಲಸ - ಕಾರ್ಯಗಳೆಲ್ಲವೂ ಯಶಸ್ಸನ್ನು ನಿಡುತ್ತದೆ.

ಪೊರಕೆಯಿಂದ ಹೊಡೆದರೆ ದೋಷ ಖಂಡಿತ..! ಪೊರಕೆ ವಿಷಯದಲ್ಲಿ ಹುಷಾರಾಗಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ