ಆ್ಯಪ್ನಗರ

ಡಿಸೆಂಬರ್‌ 2020 ಸೂರ್ಯಗ್ರಹಣ ಯಾವಾಗ ಗೊತ್ತಾ..? ಸೋಮವಾರಗಳೆಲ್ಲವೂ ವಿಶೇಷವೇಕೇ..?

ಡಿಸೆಂಬರ್‌ ಮಾಸದಲ್ಲಿ ಅದರಲ್ಲೂ 2020 ರ ಡಿಸೆಂಬರ್‌ ಮಾಸದಲ್ಲಿ ಬರುವ ಪ್ರತೀ ಸೋಮವಾರಗಳು ಅತ್ಯಂತ ವಿಶೇ‍ವಾಗಿದೆ ಮತ್ತು ಮಹತ್ವಪೂರ್ಣದ್ದಾಗಿದೆ. 2020 ಡಿಸೆಂಬರ್‌ ತಿಂಗಳ ಸೋಮವಾರದ ಮಹತ್ವವೇನು ಗೊತ್ತಾ..? ಡಿಸೆಂಬರ್‌ ತಿಂಗಳ ಸೋಮವಾರವೇಕೇ ವಿಶೇಷ..?

Vijaya Karnataka Web 5 Dec 2020, 3:27 pm
ನಾವೀಗ 2020 ರ ಅಂತ್ಯದಲ್ಲಿದ್ದೇವೆ. ಅಂದರೆ ನಾವೀಗ ಡಿಸೆಂಬರ್‌ ತಿಂಗಳಲ್ಲಿದ್ದೇವೆ. ಈ ತಿಂಗಳಲ್ಲಿ ಅನೇಕ ಶುಭ ಯೋಗಗಳು ನಿಮಗೆ ಸಾಥ್‌ ನೀಡಲಿದೆ. ಜ್ಯೋತಿಷ್ಯದ ದೃಷ್ಟಿಯಿಂದ ಡಿಸೆಂಬರ್ ತಿಂಗಳು ಬಹಳ ವಿಶೇಷವಾಗಿದ್ದರೆ, ಧರ್ಮದ ವಿಷಯದಲ್ಲೂ ಈ ತಿಂಗಳು ಅತ್ಯಂತ ಮಹತ್ವಪೂರ್ಣದ್ದಾಗಿದೆ. . ವಾಸ್ತವವಾಗಿ ಈ ಬಾರಿ ಡಿಸೆಂಬರ್ ತಿಂಗಳ ಎಲ್ಲಾ ಸೋಮವಾರಗಳು ಬಹಳ ವಿಶೇಷವಾಗಲಿವೆ. ವರ್ಷದ ಕೊನೆಯ ತಿಂಗಳ ಪ್ರತಿ ಸೋಮವಾರದಂದು ಶುಭ ಯೋಗವು ರೂಪುಗೊಳ್ಳಲಿದೆ. ಮೊದಲನೆಯದು ಡಿಸೆಂಬರ್ 7 ಸೋಮವಾರ, ಎರಡನೆಯದು ಡಿಸೆಂಬರ್ 14, ಮೂರನೆಯದು ಡಿಸೆಂಬರ್ 21 ಮತ್ತು ನಾಲ್ಕನೆಯದು ಡಿಸೆಂಬರ್ 28. ಈ ಬಾರಿ ಡಿಸೆಂಬರ್ ಸೋಮವಾರ ಏಕೆ ತುಂಬಾ ವಿಶೇಷವಾಗಿದೆ ಎನ್ನುವುದು ನಿಮಗೆ ತಿಳಿದಿದೆಯೇ..?
Vijaya Karnataka Web ಡಿಸೆಂಬರ್‌ 2020 ಸೂರ್ಯಗ್ರಹಣ ಯಾವಾಗ ಗೊತ್ತಾ..? ಸೋಮವಾರಗಳೆಲ್ಲವೂ ವಿಶೇಷವೇಕೇ..?


ತಿಪ್ಪು ತಿಳುವಳಿಕೆಯಿಂದ ಯಶಸ್ಸು ಅಸಾಧ್ಯ ಎನ್ನುತ್ತಾನೆ ಚಾಣಕ್ಯ..! ಇವುಗಳನ್ನು ಮರೆತುಬಿಡಿ

1. ಡಿಸೆಂಬರ್ 7, ಸೋಮವಾರ ಕಾಲಭೈರವಾಷ್ಟಮಿ:
ಈ ಬಾರಿ ಡಿಸೆಂಬರ್‌ ತಿಂಗಳ ಮೊದಲ ಸೋಮವಾರವು ಡಿಸೆಂಬರ್ 7 ರಂದು ಬಂದಿದೆ. ಈ ದಿನದಂದೇ ಕಾಲಭೈರವ ಅಷ್ಟಮಿ ಉಪವಾಸ ಕೂಡ ಇದೆ. ಈ ದಿನವು ಪೂಜೆ ಮತ್ತು ಆಚರಣೆಗಳಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ದಿನ ಕಾಲಭೈರವನನ್ನು ಆರಾಧಿಸುವುದರಿಂದ ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ಅಡಚಣೆಗಳು ಉಂಟಾಗುವುದಿಲ್ಲ. ಕಾಲಭೈರವ ಅಷ್ಟಮಿಯ ಹಬ್ಬವನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಎಂಟನೇ ದಿನ ಆಚರಿಸಲಾಗುತ್ತದೆ. ಈ ದಿನ ಶಿವನು ಕಾಲಭೈರವನಾಗಿ ಅವತರಿಸಿದ್ದಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಈ ದಿನವನ್ನು ಕಾಲಭೈರವ ಜಯಂತಿ ಎಂದು ಆಚರಿಸಲಾಗುತ್ತದೆ.

ಆಲಂ ನ್ನು ಅರಳಿ ಮರಕ್ಕೆ ಕಟ್ಟಿದರೆ ಸಾಲವೇ ಇರದು..! ಆಲಂ ನ್ನು ಒಮ್ಮೆ ಬಳಸಿ ನೋಡಿ

2. ಡಿಸೆಂಬರ್ 14, ಸೋಮವಾರ ಕೊನೆಯ ಕಾರ್ತಿಕ ಸೋಮವಾರ:
ಡಿಸೆಂಬರ್‌ 14 ರಂದು ಕಾರ್ತಿಕ ಮಾಸದ ಕೊನೆಯ ಸೋಮವಾರವು ಬಂದಿದೆ. ಈ ದಿನದಂದೇ ಅಮಾವಾಸ್ಯೆ ಕೂಡ ಇದೆ. ವೈದಿಕ ನಂಬಿಕೆಯ ಪ್ರಕಾರ, ಅಮಾವಾಸ್ಯೆಯ ದಿನಾಂಕವನ್ನು ಧಾರ್ಮಿಕ ದೃಷ್ಟಿಯಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಅಮಾವಾಸ್ಯೆ ಸೋಮವಾರ ಬಿದ್ದಾಗ ಅದು ಇನ್ನಷ್ಟು ಶುಭವಾಗಿರುತ್ತದೆ. ಅಂತಹ ಅಮಾವಾಸ್ಯೆಯನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಅಷ್ಟು ಮಾತ್ರವಲ್ಲ, ಈ ದಿನದಂದು ಸಂಜೆ ಸೂರ್ಯಗ್ರಹಣವಿದೆ, ಇದು ವರ್ಷದ ಕೊನೆಯ ಗ್ರಹಣವಾಗಿದೆ. ಈ ಗ್ರಹಣವು ಭಾರತದಲ್ಲಿ ನಡೆಯದ ಕಾರಣ ಭಾರತೀಯರ ಮೇಲೆ ಅದರ ಪ್ರಭಾವ ಇರದು.

ಮುಸ್ಸಂಜೆಯಲ್ಲಿ ಹಾಲು ನೀಡಿದ್ರೆ ಬರ್ಬಾತ್‌ ಆಗೋದು ಗ್ಯಾರೆಂಟಿ..! ಈ ತಪ್ಪುಗಳು ಆಗದಿರಲಿ
3. ಡಿಸೆಂಬರ್ 21, ಸೋಮವಾರ, ಮಕರ ರಾಶಿಯಲ್ಲಿ ಸೂರ್ಯ:

ಡಿಸೆಂಬರ್ 21 ರಂದು, ಜ್ಯೋತಿಷ್ಯ ಜಗತ್ತಿನಲ್ಲಿ 800 ವರ್ಷಗಳ ನಂತರ ಅದ್ಭುತ ಘಟನೆಯೊಂದು ನಡೆಯಲಿದೆ. ಈ ದಿನ, ಗ್ರಹಗಳ ಕುಟುಂಬದ ಇಬ್ಬರು ಪ್ರಮುಖ ಸದಸ್ಯರಾದ ಗುರು ಮತ್ತು ಶನಿ ಅತ್ಯಂತ ಹತ್ತಿರ ಸೇರಲಿದ್ದಾರೆ. ಎರಡು ಗ್ರಹಗಳು ಪ್ರಸ್ತುತ ಮಕರ ರಾಶಿಯಲ್ಲಿ ಜೊತೆಯಾಗಿ ಸಂಚಾರವನ್ನು ಆರಂಬಿಸಲಿವೆ. ಮತ್ತು ಡಿಸೆಂಬರ್ 21 ರ ರಾತ್ರಿ ಈ ಎರಡು ಗ್ರಹಗಳು ಒಂದಕ್ಕೊಂದು ಹತ್ತಿರ ಬರುತ್ತವೆ ಮತ್ತು ಅವುಗಳನ್ನು ಪ್ರತ್ಯೇಕಿಸಲು ಕಷ್ಟವಾಗುತ್ತದೆ. ಇದರೊಂದಿಗೆ ಸೂರ್ಯನು ಕೂಡ ಈ ದಿನದಿಂದ ಮಕರ ರಾಶಿಯಲ್ಲಿ ಇರುತ್ತಾನೆ.

ಹನುಮನಿಗೆ ತುಳಸಿ ಹಾರ ಅರ್ಪಿಸಿದರೆ ಪವಾಡವೇ ನಡೆಯುವುದು..! ಕೋರ್ಟು ಸಮಸ್ಯೆಗಳೇ ದೂರ
4. ಡಿಸೆಂಬರ್ 28, ಸೋಮವಾರ ಪಿಶಾಚಮೋಚನ ಶ್ರಾದ್ಧ

ಈ ಬಾರಿ ವರ್ಷದ ಕೊನೆಯ ಸೋಮವಾರ, ಪಿತೃಗಳಿಗೆ ದಿನವು ಕೂಡಿ ಬರಲಿದೆ. ಡಿಸೆಂಬರ್ ಕೊನೆಯ ಸೋಮವಾರ, ಈ ಬಾರಿ ಪಿಶಾಚಮೋಚನ ಶ್ರಾದ್ಧ ನಡೆಯುತ್ತಿದೆ. ಈ ದಿನದಂದು ಪಿತೃಗಳಿಗೆ ಪಿಂಡ ದಾನ ಮಾಡುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ಜೊತೆಗೆ, ಕೆಲವರು ಈ ದಿನ ತಮ್ಮ ಪೂರ್ವಜರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾರೆ. ಈ ದಿನ, ಪೂರ್ವಜರಿಗೆ ಪ್ರಿಯವಾದ ವಸ್ತುಗಳನ್ನು ದಾನ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷ ಸಿಗುತ್ತದೆ. ಈ ದಿನ ಪೂರ್ವಜರನ್ನು ಸ್ಮರಿಸುವ ಮೂಲಕ ನಮ್ಮೆಲ್ಲಾ ತೊಂದರೆಗಳು ದೂರಾಗುವುದು ಮತ್ತು ಪೂರ್ವಜರ ಆಶೀರ್ವಾದವನ್ನು ಕೂಡ ಪಡೆಯಲಾಗುವುದು ಎನ್ನುವ ನಂಬಿಕೆಯಿದೆ.

ಈ 3 ದೇವರನ್ನು ಪೂಜಿಸಿದ್ರೆ ಸಂತೋಷ, ಶಾಂತಿ ಖಂಡಿತ..! ಆ 3 ದೇವರು ಯಾವುದು..?

ಡಿಸೆಂಬರ್‌ನಲ್ಲಿ ಬರುವ ಈ ನಾಲ್ಕು ಸೋಮವಾರಗಳು ಹೆಚ್ಚು ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. ಈ ಸೋಮವಾರಗಳಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸುವುದರಿಂದ ಆತನ ಆಶೀರ್ವಾದವನ್ನು ಕೂಡ ನಾವು ಪಡೆದುಕೊಳ್ಳಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ