ಆ್ಯಪ್ನಗರ

ಮದುವೆಗೂ ಮುನ್ನ ಹಣ ಗಳಿಸಬೇಕು ಎನ್ನುತ್ತಾನೆ ಚಾಣಕ್ಯ..! ಸಂಪತ್ತು ಪಡೆಯುವ ಸರಳ ವಿಧಾನ..

ಸಾಮಾನ್ಯವಾಗಿ ಎಲ್ಲರಿಗೂ ಹಣ ಗಳಿಸಬೇಕೆಂಬ, ಸಂಪತ್ತು ಹೊಂದಬೇಕೆಂಬ ಆಸೆ ಇದ್ದೇ ಇರುತ್ತದೆ. ಹಾಗಾದರೆ ಹಣ, ಸಂಪತ್ತು ಗಳಿಸುವುದು ಹೇಗೆ..? ಚಾಣಕ್ಯನ ಪ್ರಕಾರ ಹಣ ಗಳಿಸುವುದು ಹೇಗೆ..? ಸಂಪತ್ತನ್ನು ಹೊಂದಲು ಏನು ಮಾಡಬೇಕು..? ಇಲ್ಲಿದೆ ಹಣ, ಸಂಪತ್ತು ಗಳಿಸಲು ಸರಳ ಹಾಗೂ ಸುಲಭ ವಿಧಾನ..

Vijaya Karnataka Web 17 Apr 2021, 6:09 pm
ಹಣವು ವ್ಯಕ್ತಿಯ ಬಳಿ ಇದ್ದರೆ, ಅವನ ಜೀವನವು ಸುಲಭವಾಗುತ್ತದೆ ಏಕೆಂದರೆ ನಮ್ಮ ಜೀವನದಲ್ಲಿನ ಅರ್ಧಕ್ಕಿಂತ ಹೆಚ್ಚು ತೊಂದರೆಗಳು ಹಣದಿಂದ ದೂರಾಗುತ್ತದೆ. ಆಚಾರ್ಯ ಚಾಣಕ್ಯ ಅವರು ಬಡತನದಿಂದ ಬಳಲುತ್ತಿರುವ ಜೀವನವನ್ನು ವಿಷವೆಂದು ಪರಿಗಣಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ತಿಳಿದುಕೊಳ್ಳಬೇಕಾದ ಚಾಣಕ್ಯ ನೀತಿಯಲ್ಲಿ ಹಣದ ಬಗ್ಗೆ ಇಂತಹ ಆಳವಾದ ವಿಷಯಗಳನ್ನು ಅವರು ಹೇಳಿದ್ದಾರೆ. ಚಾಣಕ್ಯನು ಹಣ ಮತ್ತು ಶ್ರೀಮಂತಿಕೆಯ ಬಗ್ಗೆ ಏನೆಂದು ಹೇಳಿದ್ದಾನೆ..?
Vijaya Karnataka Web according to chanakya niti money and wealth is everything in life
ಮದುವೆಗೂ ಮುನ್ನ ಹಣ ಗಳಿಸಬೇಕು ಎನ್ನುತ್ತಾನೆ ಚಾಣಕ್ಯ..! ಸಂಪತ್ತು ಪಡೆಯುವ ಸರಳ ವಿಧಾನ..


​1. ಸಂಪತ್ತನ್ನು ಸಂಗ್ರಹಿಸಲು ಕಾರಣ

ಆಚಾರ್ಯ ಚಾಣಕ್ಯನು ಹೇಳುವ ಪ್ರಕಾರ, ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಸಂಪತ್ತು ಸಹಕಾರಿಯಾಗುತ್ತದೆ ಎಂದು ಹೇಳುತ್ತಾನೆ. ಆದರೆ ಇದು ನಿಮಗೆ ಸಮಾಜದಲ್ಲಿ ಮೌಲ್ಯವನ್ನು, ಗೌರವವನ್ನು ಮತ್ತು ಪ್ರತಿಷ್ಠೆಯನ್ನು ನೀಡುತ್ತದೆ. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ಭವಿಷ್ಯದಲ್ಲಿ ಕೆಟ್ಟ ಸಮಯವನ್ನು ಸುಲಭವಾಗಿ ನಿವಾರಿಸಲು ಸಂಪತ್ತನ್ನು ಸಂಗ್ರಹಿಸಬೇಕು.

ಉದ್ದವಾದ ತಲೆಕೂದಲಿರುವ ಮಹಿಳೆಯರೇ ಅದೃಷ್ಟವಂತರು..! ನಿಮ್ಮಲ್ಲಿ ಈ ಲಕ್ಷಣಗಳಿವೆಯೇ..?

​2. ವ್ಯಕ್ತಿಯು ಎಲ್ಲಿ ವಾಸಿಸಬೇಕು..?

ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣ, ಉದ್ಯೋಗದ ಸಾಧನಗಳಿರುವ ಸ್ಥಳಗಳಲ್ಲಿ ವಾಸಿಸಬೇಕು. ಸಾಕಷ್ಟು ವೈದ್ಯಕೀಯ ಚಿಕಿತ್ಸೆ ಇರಬೇಕು ಮತ್ತು ಅಲ್ಲಿ ವ್ಯಕ್ತಿ ಗೌರವ ಮತ್ತು ಶುಭ ಚಿಂತಕರನ್ನು ಪಡೆಯಬಹುದು. ಇಂತಹ ಸ್ಥಳಗಳಲ್ಲಿ ವಾಸಿಸುವುದರಿಂದ ಅಪಾರ ಜ್ಞಾನವನ್ನು ಹೊಂದುತ್ತಾನೆ.

ತುಳಸಿ ಹಾರ ಧರಿಸುವುದರ ಪ್ರಯೋಜನವೇನು ಗೊತ್ತೇ..? ವಿಧಿ - ವಿಧಾನಗಳೊಂದಿಗೆ ಧರಿಸಿ..

3. ಹಣ ಸಂಪಾದನೆಗೆ ಇದು ಅತಿಮುಖ್ಯ

ನೀವು ನಿಜವಾಗಿಯೂ ಹಣ ಸಂಪಾದಿಸಲು ಬಯಸಿದರೆ, ನಂತರ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು ಮತ್ತು ಗುರಿಯನ್ನು ಸಾಧಿಸಲು ಆ ದಿಕ್ಕಿನಲ್ಲಿ ಶ್ರಮಿಸಬೇಕು. ಇದರಿಂದಾಗಿ ನೀವು ಹಣ ಮತ್ತು ಗೌರವವನ್ನು ಗಳಿಸುವಿರಿ. ಗುರಿಯಿಲ್ಲದ ವ್ಯಕ್ತಿ ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಜೀವನದಲ್ಲಿ ತಮ್ಮದೇ ಆದ ಗುರಿಯನ್ನು ಇಟ್ಟುಕೊಂಡಿರಬೇಕು.

ಮಂಗಳವಾರ, ಶನಿವಾರ ಹೀಗೆ ಮಾಡಿದರೆ ಭವಿಷ್ಯವೇ ನಾಶ..! ಅಬ್ಬಾ.. ಇವುಗಳನ್ನು ತಿನ್ನದಿರಿ..

​4. ಇತಿ - ಮಿತಿಯಲ್ಲಿರಲಿ ದಾನ

ಪ್ರತಿಯೊಬ್ಬ ವ್ಯಕ್ತಿಯು ದಾನ ಮಾಡುವ ಮನೋಭಾವವನ್ನು ಹೊಂದಿರಬೇಕು. ದಾನವು ಸದ್ಗುಣಶೀಲ ವ್ಯಕ್ತಿಗೆ ಜನ್ಮ ಜನ್ಮದ ಅದೃಷ್ಟವನ್ನು ನೀಡುತ್ತದೆ. ಆದರೆ ಅತಿಯಾದ ದಾನ ಮಾಡುವ ಗುಣವನ್ನು ಹೊಂದಿರಬಾರದು. ಬಲಿ ಮಹಾದಾನಿಯಾಗಿದ್ದರಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಆದ್ದರಿಂದ, ನಮ್ಮ ಇತಿ - ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ದಾನ ಮಾಡಬೇಕು.

ಪ್ರತ್ಯಂಗಿರಾ ಹೋಮವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ..! ಮಾರ್ಗದರ್ಶನವಿಲ್ಲದೇ ಮಾಡದಿರಿ..

​5. ವಿವಾಹಕ್ಕೂ ಮುನ್ನ ಎಚ್ಚರ

ಜೀವನದಲ್ಲಿ ಸಂಪತ್ತು ಮತ್ತು ಆಸ್ತಿಯ ಆಸೆಯನ್ನು ಪೂರ್ಣಗೊಳಿಸಿಕೊಂಡ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ಚಾಣಕ್ಯ ಹೇಳುತ್ತಾನೆ. ಒಂದು ವೇಳೆ ನೀವು ಸ್ವಾರ್ಥಿ ಹೆಂಡತಿಯನ್ನು ಪಡೆದುಕೊಂಡರೆ ಆಕೆ ನಿಮ್ಮ ಬಳಿ ಸಂಪತ್ತು ಇಲ್ಲದಿರುವುದನ್ನು ಕಂಡು ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಅಥವಾ ಅವಳ ನಡವಳಿಕೆಯು ನಿಮ್ಮ ಕಡೆಗೆ ಬದಲಾಗುತ್ತದೆ. ಆದರೆ ಆದರ್ಶ ಹೆಂಡತಿ ತಾಳ್ಮೆಯಿಂದ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾಳೆ ಮತ್ತು ನಿಮ್ಮನ್ನು ದುಃಖದಿಂದ ಹೊರತರಲು ಸಾಧ್ಯವಾದಷ್ಟು ಶ್ರಮಿಸುತ್ತಾಳೆ.

ಚೈತ್ರ ಮಾಸ 2021: ಮರೆತೂ ಈ ಆಹಾರಗಳನ್ನು ಸೇವಿಸದಿರಿ..! ಯಾವ ಆಹಾರ ಸೇವಿಸಬೇಕು..?

​6. ಹಣಕ್ಕಾಗಿ ಈ ಮಾರ್ಗಗಳನ್ನು ಹಿಡಿಯದಿರಿ

ಹೊಗಳಿಕೆಯ ಜನರನ್ನು ಸಂಪತ್ತಿಗಾಗಿ ನಂಬಬಾರದು, ನಮ್ಮ ಮೇಲೆ ದಬ್ಬಾಳಿಕೆ ಮಾಡುವ ಜನರಿಂದ ಸಂಪತ್ತನ್ನು ಅಪೇಕ್ಷಿಸಬಾರದು, ತಮ್ಮ ತತ್ವಗಳನ್ನು ತ್ಯಜಿಸಿ ಹಣ ಸಂಪಾದನೆ ಮಾಡಲು ಹೋಗಬಾರದು, ಧರ್ಮವನ್ನು ಬದಲಾಯಿಸುವ ಮೂಲಕ ಹಣ ಸಂಪಾದನೆ ಮಾಡಬಾರದು ಅಥವಾ ಅತ್ಯಂತ ಕೀಳು ಮಟ್ಟಿದ ಕೆಲಸ ಮಾಡುವ ಮೂಲಕ ಯಾವ ಸಂಪತ್ತನ್ನು ಪಡೆದುಕೊಳ್ಳಬಾರದು. ಇಂತಹ ಕೆಟ್ಟ ಕೆಲಸಗಳಿಂದ ದೊರೆಯುವ ಸಂಪತ್ತಿನತ್ತ ಅಥವಾ ಹಣದತ್ತ ಎಂದಿಗೂ ಆಕರ್ಷಿತರಾಗಬಾರದು.

ಹನುಮಂತನು ಜನಿಸಿದ್ದು ಎಲ್ಲಿ ಗೊತ್ತಾ..? ಅಂಜನಿಯೊಂದಿಗೆ ಪುತ್ರನನ್ನು ನೋಡಬಹುದು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ