ಆ್ಯಪ್ನಗರ

Indian Kingdoms: ಭಾರತದಲ್ಲಿ ಆಳ್ವಿಕೆ ಮಾಡಿದ ಈ 11 ಸಾಮ್ರಾಜ್ಯಗಳ ಬಗ್ಗೆ ಗೊತ್ತೇ..?

Popular Kingdoms Of India: ಪ್ರಾಚೀನ ಭಾರತದ ಇತಿಹಾಸದ ಕುರಿತು ನಮಗೆ ತಿಳಿದುಕೊಳ್ಳಲು ಸಾಕಷ್ಟು ವಿಚಾರಗಳಿವೆ. ಅವುಗಳಲ್ಲಿ ನಾವಿಂದು ಪ್ರಾಚೀನ ಭಾರತದ ರಾಜ ಮನೆತನಗಳ ಕುರಿತು ತಿಳಿದುಕೊಳ್ಳೋಣ. ಪ್ರಾಚೀನ ಭಾರತದ ಪ್ರಮುಖ ಸಾಮ್ರಾಜ್ಯಗಳಾವುವು ಗೊತ್ತೇ..?

Authored byಮನಿಷಾ ಆನಂದ | Vijaya Karnataka Web 31 Jul 2023, 12:36 pm
ಪ್ರಾಚೀನ ಭಾರತವು ಸಮೃದ್ಧ ಮತ್ತು ಶಕ್ತಿಯುತ ಭಾರತವಾಗಿತ್ತು. ಆ ಅವಧಿಯಲ್ಲಿ ಭಾರತವು ಪ್ರಪಂಚದ ಸಂಪೂರ್ಣ ವ್ಯಾಪಾರ ಮತ್ತು ರಾಜಕೀಯದ ಕೇಂದ್ರವಾಗಿತ್ತು. ಆಗ ಭಾರತದ ಗಡಿಗಳು ಹಿಂದೂಕುಶ ಪರ್ವತ ಶ್ರೇಣಿಯಿಂದ ಅರುಣಾಚಲ ಪರ್ವತ ಶ್ರೇಣಿಯವರೆಗೆ ಮತ್ತು ಕೈಲಾಸ ಪರ್ವತದಿಂದ ಕನ್ಯಾ ಕುಮಾರಿಯ ಆಚೆ ಸಮುದ್ರದವರೆಗೆ ವಿಸ್ತರಿಸಿದ್ದವು. ಈ ಅವಧಿಯಲ್ಲಿ ಸಾಕಷ್ಟು ಸಾಮ್ರಾಜ್ಯಗಳು ಭಾರತದಲ್ಲಿ ಆಳ್ವಿಕೆಯನ್ನು ನಡೆಸಿದ್ದವು. ಅವುಗಳಲ್ಲಿ 11 ಭಾರತದ ಶ್ರೀಮಂತ ಮತ್ತು ಶಕ್ತಿಶಾಲಿ ಸಾಮ್ರಾಜ್ಯಗಳ ಕುರಿತು ನಾವಿಂದು ತಿಳಿದುಕೊಳ್ಳೋಣ.
Vijaya Karnataka Web here are the 11 most powerful kingdoms of india
Indian Kingdoms: ಭಾರತದಲ್ಲಿ ಆಳ್ವಿಕೆ ಮಾಡಿದ ಈ 11 ಸಾಮ್ರಾಜ್ಯಗಳ ಬಗ್ಗೆ ಗೊತ್ತೇ..?


ವಿಕ್ರಮಾದಿತ್ಯನ ಸಾಮ್ರಾಜ್ಯ:​

ವಿಕ್ರಮಾದಿತ್ಯನು ತನ್ನ ಬುದ್ಧಿವಂತಿಕೆ, ಶೌರ್ಯ ಮತ್ತು ಔದಾರ್ಯಕ್ಕೆ ಪ್ರಸಿದ್ಧನಾಗಿದ್ದನು. ಒಂಬತ್ತು ರತ್ನಗಳನ್ನು ಇಡುವ ಸಂಪ್ರದಾಯವು ಈ ಸಾಮ್ರಾಜ್ಯದಿಂದ ಪ್ರಾರಂಭವಾಯಿತು. ಮಹಾಕವಿ ಕಾಳಿದಾಸನ ಪುಸ್ತಕ ಜ್ಯೋತಿರ್ವಿದಾಭರಣದ ಪ್ರಕಾರ, ಅವರು 30 ಮಿಲಿಯನ್ ಸೈನಿಕರು, 100 ಮಿಲಿಯನ್ ವಿವಿಧ ವಾಹನಗಳು, 25 ಸಾವಿರ ಆನೆಗಳು ಮತ್ತು 400 ಸಾವಿರ ಸಮುದ್ರ ಹಡಗುಗಳನ್ನು ಹೊಂದಿದ್ದರು. ಭಾರತದಲ್ಲಿ ಪಾಲಿಸುವ ವಿಕ್ರಮ ಸಂವತ್ಸರ ಕೂಡ ವಿಕ್ರಮಾದಿತ್ಯನ ಹೆಸರಿನಿಂದ ಪ್ರಾರಂಭವಾಗಿದೆ.

PC: NehalDaveND wikipedia

Adhik Purnima 2023: ಅಧಿಕ ಪೂರ್ಣಿಮಾದಂದು ಈ ಮಂತ್ರಗಳನ್ನು ಪಠಿಸೋದರ ಪ್ರಯೋಜನವೇನು..?

​ಮೌರ್ಯ ಸಾಮ್ರಾಜ್ಯ:​

ಮೌರ್ಯ ಸಾಮ್ರಾಜ್ಯದ ಆಡಳಿತಗಾರರಲ್ಲಿ ಚಕ್ರವರ್ತಿ ಚಂದ್ರಗುಪ್ತ ಮೌರ್ಯನು ಪ್ರಮುಖನು. ಈತನನ್ನು ಚಂದ್ರಗುಪ್ತ ದಿ ಗ್ರೇಟ್‌ ಎಂದು ಕರೆಯಲಾಗುತ್ತಿತ್ತು. ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಗುರು ಚಾಣಕ್ಯ. ಚಂದ್ರಗುಪ್ತನ ಪತ್ನಿಯರಲ್ಲಿ ಭಾರತೀಯ ಪತ್ನಿ ದುರ್ಧರಳೂ ಒಬ್ಬಳು. ಇವರಿಬ್ಬರಿಗೆ ಜನಿಸಿದ ಮಗನೇ ಬಿಂದುಸಾರ. ಚಂದ್ರಗುಪ್ತನು ತನ್ನ ಮಗ ಬಿಂದುಸಾರನಿಗೆ ಸಿಂಹಾಸನವನ್ನು ಹಸ್ತಾಂತರಿಸಿದನು. ಬಿಂದುಸಾರನ ಕಾಲದಲ್ಲಿ ಚಾಣಕ್ಯ ಅವನ ಪ್ರಧಾನ ಮಂತ್ರಿಯಾಗಿದ್ದನು.

PC: Bpilgrim (talk · contribs) wikipedia

ಗುಪ್ತ ಸಾಮ್ರಾಜ್ಯ:​

ಮೊದಲನೇ ಸಮುದ್ರಗುಪ್ತ ಮತ್ತು ಎರಡನೇ ಚಂದ್ರಗುಪ್ತರು ಗುಪ್ತ ಸಾಮ್ರಾಜ್ಯದ ಪ್ರಮುಖ ಆಡಳಿತಗಾರರು. ಸುಂಗ ರಾಜವಂಶದ ಅವನತಿಯ ನಂತರ ಸನಾತನ ಸಂಸ್ಕೃತಿಯ ಏಕತೆಯನ್ನು ಮತ್ತೆ ಒಂದುಗೂಡಿಸಿದ ಕೀರ್ತಿ ಗುಪ್ತ ವಂಶದ ಜನರಿಗೆ ಸಲ್ಲುತ್ತದೆ. ಗುಪ್ತ ರಾಜವಂಶವು ಕ್ರಿ.ಶ 320 ರ ಸುಮಾರಿಗೆ ಚಂದ್ರಗುಪ್ತ I ನಿಂದ ಸ್ಥಾಪಿಸಲ್ಪಟ್ಟಿತು ಮತ್ತು ಕ್ರಿ.ಶ. 510 ರವರೆಗೆ ಅಧಿಕಾರದಲ್ಲಿತ್ತು. ಶ್ರೀಗುಪ್ತ, ಘಟೋತ್ಕಚ, ಒಂದನೇ ಚಂದ್ರಗುಪ್ತ , ಸಮುದ್ರಗುಪ್ತ, ರಾಮಗುಪ್ತ, ಎರಡನೇ ಚಂದ್ರಗುಪ್ತ, ಒಂದನೇ ಕುಮಾರಗುಪ್ತ ಮತ್ತು ಸ್ಕಂದಗುಪ್ತ ಗುಪ್ತ ರಾಜವಂಶದ ಪ್ರಮುಖ ಚಕ್ರವರ್ತಿಗಳು.

PC: I, PHGCOM wikipedia

Adhik Purnima 2023: ಅಧಿಕ ಪೂರ್ಣಿಮಾ 2023 ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ..!

ಹರ್ಷ ಸಾಮ್ರಾಜ್ಯ:​

ಗುಪ್ತರ ಸಾಮ್ರಾಜ್ಯದ ಪತನದ ನಂತರ ಉತ್ತರ ಭಾರತದಲ್ಲಿ ಅರಾಜಕತೆಯ ಸ್ಥಿತಿ ಉಂಟಾಯಿತು. ಇಂತಹ ಪರಿಸ್ಥಿತಿಯಲ್ಲಿ ಹರ್ಷವರ್ಧನನ ಆಡಳಿತ ರಾಜಕೀಯ ಸ್ಥಿರತೆಯನ್ನು ಒದಗಿಸಿತು. ಕವಿ ಬಾಣಭಟ್ಟರು ತಮ್ಮ ಜೀವನಚರಿತ್ರೆ 'ಹರ್ಷಚರಿತ' ದಲ್ಲಿ 'ಚತುಃ ಸಮುದ್ರಾಧಿಪತಿ' ಮತ್ತು 'ಸರ್ವಚಕ್ರವರ್ತಿನಂ ಧೀರಯೇ' ಇತ್ಯಾದಿ ಬಿರುದುಗಳನ್ನು ಹರ್ಷವರ್ಧನನಿಗೆ ನೀಡಿದ್ದಾರೆ.

PC: Viraat Kothare wikipedia

​ಚಾಲುಕ್ಯ ಸಾಮ್ರಾಜ್ಯ:​

ಎರಡನೇ ಪುಲಿಕೇಶಿಯು ಚಾಲುಕ್ಯ ರಾಜವಂಶದ ಅತ್ಯಂತ ಶಕ್ತಿಶಾಲಿ ಆಡಳಿತಗಾರ. ಪುಲಿಕೇಶಿಯು ಕ್ರಿ.ಶ 609-642 ರ ನಡುವೆ ಆಳ್ವಿಕೆಯನ್ನು ನಡೆಸಿದ್ದನು ಎಂದು ಹೇಳಲಾಗುತ್ತದೆ. ಪುಲಿಕೇಶಿಯು ಅಂತರ್ಯುದ್ಧದಲ್ಲಿ ಚಿಕ್ಕಪ್ಪ ಮಂಗಲೇಶನನ್ನು ಗೆದ್ದು ಅಧಿಕಾರವನ್ನು ವಶಪಡಿಸಿಕೊಂಡನು ಎಂದು ಹೇಳಲಾಗುತ್ತದೆ. ಅವರು ಶ್ರೀ ಪೃಥ್ವಿ ವಲ್ಲಭ ಸತ್ಯಾಶ್ರಯ ಎಂಬ ಬಿರುದನ್ನು ಪಡೆದುಕೊಂಡಿದ್ದರು. ಪಲ್ಲವ ರಾಜ ಮಹೇಂದ್ರವರ್ಮನನ್ನು ಸೋಲಿಸಿ ಕಂಚಿಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದನು. ಈ ಕಾರಣಕ್ಕಾಗಿ ಚೇರ, ಚೋಳ ಮತ್ತು ಪಾಂಡ್ಯ ರಾಜರು ಹೆದರಿ ತಮ್ಮ ಸಾಮ್ರಾಜ್ಯವನ್ನು ಪುಲಿಕೇಶಿಯ ಅಧೀನಕ್ಕೆ ಒಳಪಡಿಸಿದರು.

PC: 5 photographed by Daderot. Drawing: Dudley, Ambrose fl. 1920s wikipedia

August 2023 Festivals List: 2023 ರ ನಾಗರಪಂಚಮಿ, ವರಮಹಾಲಕ್ಷ್ಮಿ ವ್ರತ, ರಕ್ಷಾ ಬಂಧ

​ಚೋಳ ಸಾಮ್ರಾಜ್ಯ:​

ಈ ಚೋಳ ರಾಜವಂಶದ ಸ್ಥಾಪಕ ವಿಜಯಾಲಯ. ರಾಜರಾಜ ಚೋಳ ಮತ್ತು ಅವನ ಮಗ ರಾಜೇಂದ್ರ ಚೋಳರ ಆಳ್ವಿಕೆಯಲ್ಲಿ ಚೋಳ ಸಾಮ್ರಾಜ್ಯವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ರಾಜ ರಾಜನು ತಮಿಳುನಾಡಿನ ತಂಜಾವೂರಿನಲ್ಲಿ ನಿರ್ಮಿಸಿದ್ದ ಬೃಹದೀಶ್ವರ ದೇವಾಲಯವು ಈ ಸಾಮ್ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿಯುತ್ತದೆ. ತಮಿಳು ಚೋಳ ದೊರೆಗಳು 9 ನೇ ಶತಮಾನದಿಂದ 13 ನೇ ಶತಮಾನದವರೆಗೆ ಅತ್ಯಂತ ಶಕ್ತಿಶಾಲಿ ಹಿಂದೂ ಸಾಮ್ರಾಜ್ಯವನ್ನು ರಚಿಸಿದವರಾಗಿದ್ದಾರೆ.

PC: Rajaraja_mural.jpg wikipedia

​ಪಲ್ಲವ ಸಾಮ್ರಾಜ್ಯ:​

ಪಲ್ಲವರು ಸ್ವತಂತ್ರ ರಾಜ್ಯವನ್ನು ಸ್ಥಾಪಿಸುವ ಮೊದಲು, ಅವರು ಶಾತವಾಹನರ ರಾಜರ ಸೇನಾಪತಿಗಳಾಗಿದ್ದರು ಎನ್ನುವ ನಂಬಿಕೆಯಿದೆ. ಪಲ್ಲವರ ಆಳ್ವಿಕೆಯು ಕಂಚಿಯಿಂದಲೇ ಪ್ರಾರಂಭವಾಗಿದ್ದು, ಕಾಂಚಿ ಅಂದರೆ, ತಮಿಳುನಾಡಿನ ಕಾಂಚಿಪುರಣ ಅವರ ರಾಜಧಾನಿಯಾಗಿತ್ತು. ಪಲ್ಲವರ ಸಾಮಂತ ದೊರೆಯೆಂದು ಗುರುತಿಸಿಕೊಂಡ ಮೊದಲನೇ ಆದಿತ್ಯನು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ಕ್ರಿ.ಶ.893 ರ ಸುಮಾರಿಗೆ ಅಪರಾಜಿತನನ್ನು ಸೋಲಿಸುವ ಮೂಲಕ ಪಲ್ಲವ ರಾಜ್ಯವನ್ನು ಚೋಳ ಸಾಮ್ರಾಜ್ಯದೊಂದಿಗೆ ವಿಲೀನಗೊಳಿಸಿದನು.

PC: Vrraghy wikipedia

Dhoop In Home: ಮನೆಯಲ್ಲೊಮ್ಮೆ ಧೂಪ ಹಾಕಿ ನೋಡಿ.. ಎಷ್ಟೆಲ್ಲಾ

ಪಾಲ ರಾಜವಂಶ:​

ಹರ್ಷವರ್ಧನನ ನಂತರ, ಭಾರತವನ್ನು ಪಾಲ, ಪ್ರತಿಹಾರ ಮತ್ತು ರಜಪೂತರು ಆಳಿದರು. ಆದರೆ ದಕ್ಷಿಣ ಭಾಗದಲ್ಲಿ ರಾಷ್ಟ್ರಕೂಟ ರಾಜವಂಶದ ಆಳ್ವಿಕೆ ಹೆಚ್ಚಾಗಿತ್ತು. 'ಗೋಪಾಲ'ನ ಮಗ 'ಧರ್ಮಪಾಲ' ನನ್ನು ಪಾಲ ರಾಜವಂಶದ ಶ್ರೇಷ್ಠ ಚಕ್ರವರ್ತಿ ಎಂದು ಪರಿಗಣಿಸಲಾಗಿತ್ತು. ಮೊದಲ ಪ್ರತಿಹಾರ ದೊರೆ 'ವತ್ಸರಾಜ' ಧರ್ಮಪಾಲನನ್ನು ಸೋಲಿಸಿ ಕನೌಜ್ ಮೇಲೆ ತನ್ನ ಹಿಡಿತವನ್ನು ಸಾಧಿಸಿದನು.

PC: wikipedia

ಚಕ್ರವರ್ತಿ ಮಿಹಿರ ಭೋಜನ ಸಾಮ್ರಾಜ್ಯ:​

ಮೊದಲನೇ ಭೋಜ ಈ ರಾಜವಂಶದ ಅತ್ಯಂತ ಪ್ರಸಿದ್ಧ ರಾಜನಾಗಿದ್ದನು. ಈತನನ್ನು ಮಿಹಿರಭೋಜ ಎಂದೂ ಕರೆಯುತ್ತಾರೆ. ಇವನು ಎಡರನೇ ನಾಗಭಟ್ಟ ರ ಮೊಮ್ಮಗ. ಸುಮಾರು 100 ವರ್ಷಗಳ ಕಾಲ ಕನೌಜ್ ನಿಯಂತ್ರಣಕ್ಕಾಗಿ ಬಂಗಾಳದ ಪಾಳೇಗಾರರು, ಉತ್ತರ ಭಾರತದ ಪ್ರತಿಹಾರರು ಮತ್ತು ದಕ್ಷಿಣ ಭಾರತದ ರಾಷ್ಟ್ರಕೂಟ ದೊರೆಗಳ ನಡುವೆ ಹೋರಾಟ ನಡೆದಿತ್ತು, ಇದನ್ನು ಇತಿಹಾಸದಲ್ಲಿ 'ತ್ರಿಕೋನ ಹೋರಾಟ' ಎಂದು ಕರೆಯಲಾಗುತ್ತದೆ. ಮಿಹಿರ ಭೋಜನು ಕಾಬೂಲ್ ರಾಜ ಲಾಲಿಯಾ ಶಾಹಿಯನ್ನು ತುರ್ಕಿಸ್ತಾನದ ಆಕ್ರಮಣದಿಂದ ರಕ್ಷಿಸಿದನೆಂದು ಹೇಳಲಾಗುತ್ತದೆ. ಮತ್ತೊಂದೆಡೆ, ನೇಪಾಳದ ರಾಜ ರಾಘವದೇವನನ್ನು ಟಿಬೆಟ್ ಆಕ್ರಮಣಕಾರರಿಂದ ರಕ್ಷಿಸುವ ಮೂಲಕ ಇವರ ಸ್ನೇಹವನ್ನು ಪಡೆದುಕೊಂಡಿದ್ದನು. ಆದರೆ ಪಾಲ ವಂಶದ ರಾಜ ದೇವಪಾಲ ಮತ್ತು ದಕ್ಷಿಣದ ರಾಷ್ಟ್ರಕೂಡ ರಾಜ ಅಮೋಘವರ್ಷ ಮಿಹಿರ ಭೋಜನೊಂದಿಗೆ ಶತ್ರುತ್ವವನ್ನು ಬಿಡದೆ ಮುಂದುವರೆಸಿಕೊಂಡು ಬಂದರು.

PC: Dayal, Deen wikipedia

Tulsi Plant Tips: ತುಳಸಿ ಎಲೆ ನೆಲದ ಮೇಲೆ ಬಿದ್ದಿದ್ದರೆ ಹೀಗೆ ಮಾಡಲೇಬೇಡಿ ಎನ್ನುತ್ತೆ ಶಾಸ್ತ್ರ..!

ಭೋಜ ಸಾಮ್ರಾಜ್ಯ:​

ಮಹಾನ್‌ ರಾಜ ಭೋಜ ಅಥವಾ ಭೋಜದೇವನ ಆಳ್ವಿಕೆಯು ಭೋಜ ಸಾಮ್ರಾಜ್ಯದ ಪ್ರಗತಿಗೆ ಕಾರಣವಾಗಿತ್ತು. ರಾಜ ಭೋಜನು ತನ್ನ ಕಾಲದಲ್ಲಿ ಅನೇಕ ದೇವಾಲಯಗಳನ್ನು, ಭೋಪಾಲ್ ಬಳಿ ಇರುವ ಭೋಜ ಪುರವನ್ನು, ಧಾರ್‌ನ ಭೋಜಶಾಲೆಯನ್ನೂ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಭೋಜ ರಾಜನು ಈಗಿನ ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್‌ನಲ್ಲಿ ನೆಲೆಸಿದ್ದರೆಂದು ಹೇಳಲಾಗುತ್ತದೆ. ಇದನ್ನು ಮೊದಲು 'ಭೋಜ್ಪಾಲ್' ಎಂದು ಕರೆಯಲಾಗುತ್ತಿತ್ತು. ರಾಜ ಭೋಜನು ಸ್ವತಃ ವಿದ್ವಾಂಸನು, ಕಾವಿಯು ಮತ್ತು ವ್ಯಾಕರಣದ ಶ್ರೇಷ್ಠ ಅಭಿಜ್ಞರಾಗಿದ್ದರು ಮತ್ತು ಅನೇಕ ಪುಸ್ತಕಗಳನ್ನು ಬರೆದಿದ್ದರು.

PC: ​Bernard Gagnon wikipedia

ವಿಜಯನಗರ ಸಾಮ್ರಾಜ್ಯ:​

ರಾಜ ಕೃಷ್ಣ ದೇವರಾಯ ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆ. ಈತನ ತಂದೆಯ ಹೆಸರು ತಂದೆಯ ಹೆಸರು ತುಳುವ ನರಸ ನಾಯಕ್‌ ಮತ್ತು ತಾಯಿ ನಾಗಲಾ ದೇವಿ. ಈತನ ಅಣ್ಣನ ಹೆಸರು ವೀರ ನರಸಿಂಹ. ಕೃಷ್ಣದೇವರಾಯನಿಗೆ ‘ಆಂಧ್ರ ಭೋಜ’ ಎಂಬ ಬಿರುದು ಇತ್ತು. ಇದಲ್ಲದೆ, ಅವರನ್ನು 'ಅಭಿನವ ಭೋಜ' ಮತ್ತು 'ಆಂಧ್ರ ಪಿತಾಮಹ' ಎಂದೂ ಕರೆಯಲಾಗುತ್ತಿತ್ತು. ಬಾಜಿರಾಯನಂತೆ ಕೃಷ್ಣದೇವರಾಯನೂ ಅಜೇಯ ಯೋಧ ಮತ್ತು ಅತ್ಯುತ್ತಮ ಯುದ್ಧ ಪಂಡಿತ. ಈ ಮಹಾನ್ ಚಕ್ರವರ್ತಿಯ ಸಾಮ್ರಾಜ್ಯವು ಇಂದಿನ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗೋವಾ ಮತ್ತು ಒರಿಸ್ಸಾವನ್ನು ಒಳಗೊಂಡಿರುವ ಅರೇಬಿಯನ್ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೆ ಭಾರತದ ದೊಡ್ಡ ಪ್ರದೇಶದಲ್ಲಿ ಹರಡಿತ್ತು. ಈ ಸಾಮ್ರಾಜ್ಯದ ಗಡಿಗಳು ಪೂರ್ವದಲ್ಲಿ ವಿಶಾಖಪಟ್ಟಣಂ, ಪಶ್ಚಿಮದಲ್ಲಿ ಕೊಂಕಣ ಮತ್ತು ದಕ್ಷಿಣದಲ್ಲಿ ಭಾರತೀಯ ಪರ್ಯಾಯ ದ್ವೀಪದ ತುದಿಗೆ ವಿಸ್ತರಿಸಿತ್ತು ಎನ್ನುವ ಉಲ್ಲೇಖವಿದೆ.

PC: Contributions BRK at the English-language Wikipedia

​Money Problem: ಇಂತಹ ಕೆಲಸಗಳನ್ನು ಮಾಡಿದರೆ ಹಣದ ಸಮಸ್ಯೆ, ಬಡತನ ಬಾರದೇ

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ