ಆ್ಯಪ್ನಗರ

ಶಿವ ಮತ್ತು ಅನ್ನಪೂರ್ಣೆಯ ಈ ಕಥೆ ನಿಮಗೆ ಗೊತ್ತೇ..? ಅನ್ನಪೂರ್ಣ ಪೂಜೆಯ ಪ್ರಯೋಜನವಿದು..!

ಅನ್ನಪೂರ್ಣೇಶ್ವರಿ ದೇವಿಯನ್ನು ಪಾರ್ವತಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿಯ ಫೋಟೋವನ್ನು ಯಾಕೆ ಹಾಕಬೇಕು ಗೊತ್ತಾ..? ಶಿವನು ಭಿಕ್ಷುಕನ ರೂಪವನ್ನು ಮತ್ತು ಪಾರ್ವತಿ ದೇವೊಯು ಅನ್ನಪೂರ್ಣೆಯ ರೂಪವನ್ನು ಹಾಕಲು ಕಾರಣವೇನು..?

Agencies 20 Jun 2022, 4:34 pm

ಹೈಲೈಟ್ಸ್‌:

ಹೈಲೈಟ್ಸ್‌:
  • ಅನ್ನಪೂರ್ಣೇಶ್ವರಿ ದೇವಿ
  • ಅನ್ನಪೂರ್ಣೇಶ್ವರಿ ದೇವಿ ಪೂಜೆ
  • ಅನ್ನಪೂರ್ಣೇಶ್ವರಿ ಪೂಜೆ ಪ್ರಯೋಜನ
  • ಅನ್ನಪೂರ್ಣೇಶ್ವರಿ ದೇವಿ ಫೋಟೋ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Lord Shiva
ಶಿವ
ಭೋಲೇನಾಥನಿಗೆ ಭಿಕ್ಷೆ ನೀಡುತ್ತಿರುವ ಫೋಟೋವನ್ನು ಅಡುಗೆ ಮನೆಯಲ್ಲಿ ಎಂಬುದನ್ನು ನಾವೀಗಾಗಲೇ ನಿಮಗೆ ಹೇಳಿದ್ದೇವೆ. ಜಗತ್ತನ್ನೇ ರಕ್ಷಿಸುವ ಶಿವನಿಗೆ ತಾಯಿ ಅನ್ನಪೂರ್ಣೆಯು ದಾನ ನೀಡಿದ್ದೇಕೇ..? ಈ ಫೋಟೋವನ್ನು ಅಡುಗೆ ಮನೆಯಲ್ಲಿ ಹಾಕುವುದರ ಪ್ರಯೋಜನವೇನು..? ಅನ್ನಪೂರ್ಣ ದೇವಿಯನ್ನು ಆಹಾರದ ದೇವತೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಅಡುಗೆ ಮಾಡುವ ಮುನ್ನ ಅಡುಗೆ ಮನೆಯನ್ನು ಶುಚಿಯಾಗಿಟ್ಟುಕೊಂಡು ಗಂಗಾಜಲವನ್ನು ಚಿಮುಕಿಸಿ ಮನೆಯನ್ನು ಶುದ್ಧಿಗೊಳಿಸಬೇಕು. ತಾಯಿ ಅನ್ನಪೂರ್ಣೇಶ್ವರಿ ಮತ್ತು ಶಿವನಿಗೆ ಸಂಬಂಧಿಸಿದ ಈ ಕಥೆಯನ್ನು ತಿಳಿದುಕೊಳ್ಳಿ.

ಶಿವ


ಪೂಜಾ ವಿಧಿಗಳುನಾವು ಪೂಜೆಯಲ್ಲಿ ಮರೆಯದೇ ಈ 4 ಬಣ್ಣಗಳನ್ನು ಬಳಸಲೇಬೇಕಂತೆ..! ಯಾಕೆ ಗೊತ್ತಾ..?
ಶಿವ ಮತ್ತು ಅನ್ನಪೂರ್ಣೇಶ್ವರಿ ಕಥೆ:
ಭೂಮಿಯ ಮೇಲೆ ನೀರು ಮತ್ತು ಆಹಾರ ಖಾಲಿಯಾಗಲು ಪ್ರಾರಂಭಿಸಿದಾಗ, ಎಲ್ಲೆಡೆ ಜೀವಿಗಳ ನೋವಿನ ಕೂಗು ಕೇಳಿಸತೊಡಗಿತು. ಆಗ ಮಾನವರು ಆಹಾರದ ಸಮಸ್ಯೆಯನ್ನು ಹೋಗಲಾಡಿಸಲು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪೂಜಿಸಿದರು. ನಂತರ ಶಿವನು ಭೂಮಿಯನ್ನು ಸುತ್ತಿದನು ಮತ್ತು ನಂತರ ಪಾರ್ವತಿ ದೇವಿಯು ತಾಯಿ ಅನ್ನಪೂರ್ಣೆಯ ರೂಪವನ್ನು ಪಡೆದಳು ಮತ್ತು ಶಿವನು ಸನ್ಯಾಸಿಯ ರೂಪವನ್ನು ಪಡೆದುಕೊಂಡನು. ಭಗವಾನ್ ಶಿವನು ತಾಯಿ ಅನ್ನಪೂರ್ಣೆಯಿಂದ ಭಿಕ್ಷೆಯನ್ನು ತೆಗೆದುಕೊಂಡು ಭೂಮಿಯಲ್ಲಿ ವಾಸಿಸುವ ಜನರಿಗೆ ಹಂಚಿದನು. ಅಂದಿನಿಂದ, ಎಲ್ಲಾ ದೇವರುಗಳ ಜೊತೆಗೆ, ಮಾನವರು ಸಹ ತಾಯಿ ಅನ್ನಪೂರ್ಣೆಯನ್ನು ಪೂಜಿಸಲು ಪ್ರಾರಂಭಿಸಿದರು.

ಹಿಂದೂ ಧರ್ಮಮಹಿಳೆಯರು ಈ 2 ಕೆಲಸಗಳನ್ನು ಮಾಡುವಾಗ ಪುರುಷರು ನೋಡಿದರೆ ನರಕಯಾತನೆ ಗ್ಯಾರೆಂಟಿ..!
ಪರಿಪೂರ್ಣ ಧಾರ್ಮಿಕ ನಗರವಾದ ಕಾಶಿಯಲ್ಲಿ ಆಹಾರದ ಕೊರತೆಯಿಂದ ಸೃಷ್ಟಿಯಾದ ಭೀಕರ ಪರಿಸ್ಥಿತಿಯಿಂದ ವಿಚಲಿತನಾದ ಶಿವನು ಅನ್ನಪೂರ್ಣ ದೇವಿಯ ಬಳಿ ಭಿಕ್ಷೆಯನ್ನು ಸ್ವೀಕರಿಸುವ ಮೂಲಕ ವರವನ್ನು ಪಡೆದನು ಎಂದು ನಂಬಲಾಗಿದೆ. ಇದಾದ ಮೇಲೆ ಭಗವತಿ ಅನ್ನಪೂರ್ಣೆಯು ಶಿವನಿಗೆ ಯಾರು ನನ್ನನ್ನು ಆಹಾರ ಮತ್ತು ಸಂಪತ್ತಿಗಾಗಿ ಬೇಡಿ ಬರುತ್ತಾರೋ ಅವರಿಗೆ ಎಂದಿಗೂ ವಂಚನೆಯನ್ನು ಮಾಡುವುದಿಲ್ಲವೆಂದು ಭರವಸೆಯನ್ನು ನೀಡಿದಳು.

ಅನ್ನಪೂರ್ಣೇಶ್ವರಿ


ತಾಯಿ ಅನ್ನಪೂರ್ಣ ತಾಯಿ ಪಾರ್ವತಿಯ ರೂಪ ಎಂದು ಹೇಳಲಾಗುತ್ತದೆ. ಪೌರಾಣಿಕ ಹಿಂದೂ ಗ್ರಂಥಗಳ ಪ್ರಕಾರ, ಕೆಲವು ಕಾರಣಗಳಿಂದ ಪ್ರಾಚೀನ ಕಾಲದಲ್ಲಿ ಭೂಮಿಯು ಬಂಜರು ಭೂಮಿಯಾಯಿತು. ಇದರಿಂದಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ, ಆಹಾರ ಪದಾರ್ಥಗಳು ಭೂಮಿಯಲ್ಲಿ ಖಾಲಿಯಾಗಲಾರಂಭಿಸಿದವು, ಇದರಿಂದಾಗಿ ಭೂಮಿಯ ಜನರ ಕಳವಳ ಹೆಚ್ಚಾಯಿತು. ವಿಚಲಿತರಾದ ಅವರು ಬ್ರಹ್ಮ ದೇವನನ್ನು ಮತ್ತು ಶ್ರೀ ಹರಿವಿಷ್ಣುವಿನ ಸಹಾಯವನ್ನು ಕೋರಿ ಹೋದರು ಮತ್ತು ಅವರನ್ನು ತಲುಪಿದ ನಂತರ ಈ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡರು.

ಪೂಜಾ ವಿಧಿಗಳುಸೋಮವಾರ ಈ ಶಿವ ಮಂತ್ರಗಳನ್ನು ಪಠಿಸಿದರೆ ಇಷ್ಟಾರ್ಥಗಳೆಲ್ಲಾ ಈಡೇರುವುದು.
ಇದರ ನಂತರ ಬ್ರಹ್ಮ ಮತ್ತು ಶ್ರೀ ಹರಿವಿಷ್ಣು ಭೂಲೋಕದ ಜನರ ಕಳವಳವನ್ನು ಹೋಗಲಾಡಿಸುವಂತೆ ಭಗವಾನ್‌ ಶಿವನ ಬಳಿ ಹೋಗಿ ಹೇಳಿದರು. ಬ್ರಹ್ಮ ಮತ್ತು ಶ್ರೀಹರಿಯ ಮಾತನ್ನು ಕೇಳಿದ ನಂತರ ಶಿವನು ಪೃಥ್ವಿ ಲೋಕಕ್ಕೆ ಹೋಗಿ ಆಳವಾಗಿ ಪರಿಶೀಲನೆಯನ್ನು ನಡೆಸಿದನು.

ಇದಾದ ನಂತರ ಭಗವಾನ್ ಶಿವನು ಭಿಕ್ಷುಕನ ರೂಪವನ್ನು ತಾಳಿದನು ಮತ್ತು ತಾಯಿ ಪಾರ್ವತಿಯು ಭೂಲೋಕದ ಜನರ ಚಿಂತೆಗಳನ್ನು ಹೋಗಲಾಡಿಸಲು ತಾಯಿ ಅನ್ನಪೂರ್ಣೆಯ ರೂಪವನ್ನು ಧರಿಸಿದಳು. ಭಿಕ್ಷುಕನ ರೂಪದಲ್ಲಿದ್ದ ಶಿವನು ಭೂಲೋಕಕ್ಕೆ ತೆರಳಿದ ಮೇಲೆ, ಅಲ್ಲಿ ಅನ್ನಪೂರ್ಣೇಶ್ವರಿ ದೇವಿ ರೂಪದಲ್ಲಿರುವ ಪಾರ್ವತಿ ದೇವಿಯ ಬಳಿ ಭಿಕ್ಷೆಯನ್ನು ಬೇಡಿ ಭೂಲೋಕದ ಜನರಿಗೆ ಹಂಚುವ ಮೂಲಕ ಅವರ ಆಹಾರದ ಸಮಸ್ಯೆಯನ್ನು ಅಥವಾ ಕೊರತೆಯನ್ನು ನೀಗಿಸಿದನು ಎಂದು ಕಥೆಯು ಹೇಳುತ್ತದೆ.

ಅನ್ನಪೂರ್ಣೇಶ್ವರಿ


ಹಿಂದೂ ಧರ್ಮಬ್ರಾಹ್ಮೀ ಮುಹೂರ್ತವೆಂದರೆ ಯಾವ ಸಮಯ..? ಈ ಸಮಯದಲ್ಲಿ ನಾವೇಕೇ
ಅನ್ನಪೂರ್ಣೇಶ್ವರಿ ಫೋಟೋವನ್ನು ಅಡುಗೆ ಮನೆಯಲ್ಲಿ ಹಾಕುವುದರ ಪ್ರಯೋಜನ:
- ಯಾವಾಗಲೂ ನಿಮ್ಮ ಮನೆ ಆಹಾರ, ಧಾನ್ಯಗಳಿಂದ ತುಂಬಿರುತ್ತದೆ ಮತ್ತು ಎಂದಿಗೂ ಆಹಾರಕ್ಕೆ ಕೊರತೆ ಎದುರಾಗುವುದಿಲ್ಲ.
- ಆಹಾರದಲ್ಲಿ ಸಾತ್ವಿಕತೆ ಮತ್ತು ಶುದ್ಧತೆ ಹೆಚ್ಚಾಗುತ್ತದೆ.
- ಆಹಾರವನ್ನು ತಯಾರಿಸುವಾಗ ಅಶುದ್ಧ ಆಲೋಚನೆ ಮತ್ತು ಕೋಪ ಬರುವುದಿಲ್ಲ.
- ತಿನ್ನುವ ಆಹಾರವನ್ನು ಶುದ್ಧ ಮನಸ್ಸಿನಿಂದ ಮಾಡಬೇಕು. ಈ ಚಿತ್ರವನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನಸ್ಸು ಶಾಂತಿಯಿದ್ದರೆ ತಯಾರಿಸುವ ಆಹಾರದಲ್ಲೂ ಅದೇ ಶಾಂತಿ ಇರುತ್ತದೆ.

ಹಿಂದೂ ಧರ್ಮಹನುಮಂತನನ್ನು ಹೊರತುಪಡಿಸಿ ಇವರುಗಳ ಬಳಿಯೂ ಗದೆಗಳಿದ್ದವು..!
- ದೇವಿಯ ಆಶೀರ್ವಾದವೂ ನಿಮ್ಮ ಮೇಲಿರುತ್ತದೆ ಮತ್ತು ಈ ಚಿತ್ರವು ಮನೆಯಲ್ಲಿ ಹಣದ ಸಮೃದ್ಧಿಯನ್ನು ಹೆಚ್ಚಿಸುತ್ತದೆ.
- ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಮಾದುರ್ಯ ಹೆಚ್ಚಾಗುತ್ತದೆ.
- ಪ್ರೀತಿ, ಹಣದ ಪ್ರಗತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
- ಈ ಚಿತ್ರವು ಅಡುಗೆಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.

ಹಿಂದೂ ಧರ್ಮ2022 ವಿಶ್ವ ಅಪ್ಪನ ದಿನ: ಮಕ್ಕಳಿಗಾಗಿ ಜೀವವನ್ನೇ ತ್ಯಾಗ ಮಾಡಿದ ತಂದೆಯಂದಿರಿವರು..!
ಸಾಮಾನ್ಯವಾಗಿ ಹೆಚ್ಚಿನ ಹಿಂದೂ ಮನೆಯ ಅಡುಗೆ ಕೋಣೆಯಲ್ಲಿ ನಾವು ಅನ್ನಪೂರ್ಣ ಅಥವಾ ಅನ್ನಪೂರ್ಣೇಶ್ವರಿ ದೇವಿಯ ಫೋಟೋ ಇರುವುದನ್ನು ನೋಡಬಹುದು. ಈ ದೇವಿಯ ಫೋಟೋವನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಂಡಿರಲ್ಲವೇ..? ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿಯ ಫೋಟೋ ಇಲ್ಲದಿದ್ದರೆ ಇಂದೇ ದೇವಿಯ ಫೋಟೋವನ್ನು ಹಾಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ