ಆ್ಯಪ್ನಗರ

Shiv Puran: ಸಂತೋಷ, ಸಮೃದ್ಧಿಗಾಗಿ ಇವುಗಳನ್ನು ಮಾಡಲೇಬೇಕೆನ್ನುತ್ತೆ ಶಿವ ಪುರಾಣ..!

Shiv Puran For Happiness And Wealth: ಶಿವ ಪುರಾಣವು ಭಗವಾನ್‌ ಶಿವನ ಮಹಿಮೆಯನ್ನು ವಿವರಿಸುವ ಪವಿತ್ರ ಪುರಾಣವಾಗಿದ್ದು, ಇದು ಮನುಷ್ಯನ ಪ್ರಗತಿ ಮತ್ತು ವಿಮೋಚನೆಗೆ, ಸಂತೋಷ ಮತ್ತು ಸಮೃದ್ಧಿಯ ಜೀವನಕ್ಕೆ ಸರಳ ಮಾರ್ಗಗಳ ಕುರಿತು ಹೇಳಿದೆ. ಶಿವ ಪುರಾಣದ ಪ್ರಕಾರ, ಸಂತೋಷ ಮತ್ತು ಸಮೃದ್ದಿಯ ಜೀವನಕ್ಕಾಗಿ ನಾವು ಏನು ಮಾಡಬೇಕು ಗೊತ್ತೇ...? ಇವುಗಳನ್ನು ಮಾಡಿ ಎನ್ನುತ್ತೆ ಶಿವ ಪುರಾಣ.

Authored byಮನಿಷಾ ಆನಂದ | Vijaya Karnataka Web 15 May 2023, 6:52 am
ಪ್ರಗತಿ ಮತ್ತು ವಿಮೋಚನೆಯ ಬಗೆಗಿನ ಮಾರ್ಗವನ್ನು ಶಿವಪುರಾಣದಲ್ಲಿ ವಿವರವಾಗಿ ಹೇಳಲಾಗಿದೆ. ಇದರಲ್ಲಿ ಭೋಲೇನಾಥನ ಅವತಾರ ಮತ್ತು ಮಹಿಮೆಯ ವಿವರಣೆಯನ್ನು ನಾವು ನೋಡಬಹುದು ಅಥವಾ ಓದಬಹುದು. ಮನುಷ್ಯನ ಸಂತೋಷ ಮತ್ತು ಸಮೃದ್ಧಿಯ ಕುರಿತು ಶಿವ ಪುರಾಣದಲ್ಲಿ ಹೇಳಲಾಗಿದೆ. ಶಿವ ಪುರಾಣದ ಪ್ರಕಾರ, ಮನುಷ್ಯನ ಸಮೃದ್ಧಿಗೆ ಈ ಎಲ್ಲಾ ವಿಚಾರಗಳು ಬಹಳ ಮುಖ್ಯವೆಂದು ಹೇಳಲಾಗಿದೆ. ಅವುಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
Vijaya Karnataka Web shiv puran says that follow these easy steps to get happiness and wealth in your life
Shiv Puran: ಸಂತೋಷ, ಸಮೃದ್ಧಿಗಾಗಿ ಇವುಗಳನ್ನು ಮಾಡಲೇಬೇಕೆನ್ನುತ್ತೆ ಶಿವ ಪುರಾಣ..!


​ಬಾಂಧವ್ಯದ ತ್ಯಾಗ -​

ಸತಿ ದೇವಿಯು ಅಗ್ನಿಕುಂಡದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿದಾಗ, ಶಿವನು ಅವಳ ದೇಹವನ್ನು ತೆಗೆದುಕೊಂಡು ಭೂಮಿಯ ಮೇಲೆ ಕ್ರೋಧದಿಂದ ತಿರುಗಾಡಲು ಪ್ರಾರಂಭಿಸಿದನು, ಈ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಸಾಕಷ್ಟು ಕೋಲಾಹಲ ಉಂಟಾಯಿತು. ಇದರಿಂದ ಶಿವನನ್ನು ಹೊರತರಲು ಭಗವಾನ್ ವಿಷ್ಣು ಸತಿಯ ದೇಹವನ್ನು ಛೇದಿಸುವ ಮೂಲಕ ಶಿವನ ಪ್ರೀತಿಯನ್ನು ಚೂರಾಗಿಸಿದನು. ಪ್ರಪಂಚದ ಯಾವುದೇ ವಸ್ತು ಅಥವಾ ಜನರೊಂದಿಗಿನ ಬಾಂಧವ್ಯವು ಮನುಷ್ಯನನ್ನು ದುಃಖ ಮತ್ತು ವೈಫಲ್ಯದ ಕಡೆಗೆ ಕೊಂಡೊಯ್ಯುತ್ತದೆ ಎಂದು ಶಿವ ಪುರಾಣ ಹೇಳುತ್ತದೆ.
Vrish Sankranti 2023: ವೃಷಭ ಸಂಕ್ರಾಂತಿ 2023 ರ ಶುಭ ಸಮಯ, ಪೂಜೆ ವಿಧಾನ, ಮಹತ್ವ ಹೀಗಿದೆ ನೋಡಿ..!

ತಪಸ್ಸು -

ಶಿವ ಪುರಾಣದ ಪ್ರಕಾರ, ಗುರಿಯನ್ನು ಸಾಧಿಸಲು ತಪಸ್ಸು ಒಂದೇ ಮಾರ್ಗವಾಗಿದೆ. ಪಾರ್ವತಿ ದೇವಿಯು ಶಿವನನ್ನು ಪಡೆಯಲು ವರ್ಷಗಳ ಕಾಲ ತಪಸ್ಸು ಮಾಡಿದಳು. ಅವಳ ಉದ್ದೇಶಗಳು ಎಷ್ಟು ಬಲವಾಗಿದ್ದವು ಎಂದರೆ ಅವಳು ಎಂತಹುದ್ದೇ ಸಂದರ್ಭ ಎದುರಾದರೂ ತಾನು ತಪಸ್ಸು ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಹೋಗಲಿಲ್ಲ. ಗುರಿಯೆಡೆಗಿನ ನಿಮ್ಮ ಉತ್ಸಾಹ ಮತ್ತು ಉದ್ದೇಶಗಳು ದೃಢವಾಗಿದ್ದರೆ ಯಾವುದೇ ಅಡೆತಡೆಗಳು ಅಥವಾ ದುರಾಸೆಗಳು ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ.

PC: Facebook

ಕೋಪದ ತ್ಯಾಗ -​

ಶಿವ ಪುರಾಣದ ಪ್ರಕಾರ, ನೀವು ಭೋಲೆನಾಥನನ್ನು ಮೆಚ್ಚಿಸಲು ಬಯಸಿದರೆ, ನೀವು ನಿಮ್ಮ ಅಹಂಕಾರ ಮತ್ತು ಕೋಪವನ್ನು ತ್ಯಾಗ ಮಾಡಬೇಕು. ಇವೆರಡೂ ಯಶಸ್ಸಿನ ಹಾದಿಯಲ್ಲಿ ನಮಗೆ ಎದುರಾಗುವ ದೊಡ್ಡ ಅಡೆತಡೆಗಳು. ಕೋಪವು ಆತ್ಮಸಾಕ್ಷಿಯನ್ನು ನಾಶಪಡಿಸುತ್ತದೆ ಮತ್ತು ಕೆಲಸವನ್ನು ಹಾಳು ಮಾಡುತ್ತದೆ ಎಂದು ಶಿವ ಪುರಾಣ ಹೇಳುತ್ತದೆ.
PC: Pexel

Maha Shiva Purana: ಒಮ್ಮೆ ನೀವು ಶಿವ ಪುರಾಣವನ್ನು ಓದಿದರೂ ಹೀಗೆಲ್ಲಾ ಆಗುತ್ತೆ..!

ಹಣದ ಬಳಕೆ -​

ಧರ್ಮವನ್ನು ಅಂದರೆ ನಾವು ಮಾಡುವ ಕಾರ್ಯವನ್ನು ಯಾವಾಗಲೂ ಹಣಕ್ಕಿಂತ ಒಂದು ಕೈ ಮೇಲಿಡಬೇಕು. ಶಿವ ಪುರಾಣದ ಪ್ರಕಾರ, ಸರಿಯಾಗಿ ಗಳಿಸಿದ ಆದಾಯವನ್ನು ಯಾವಾಗಲೂ ಮೂರು ಭಾಗಗಳಾಗಿ ವಿಂಗಡಿಸಬೇಕು. ಒಂದು ಭಾಗವನ್ನು ಹೂಡಿಕೆಯಲ್ಲಿ, ಎರಡನೇ ಭಾಗವನ್ನು ಖರ್ಚು ಮಾಡುವಲ್ಲಿ ಮತ್ತು ಮೂರನೇ ಭಾಗವನ್ನು ಧರ್ಮದ ಕೆಲಸಕ್ಕೆ ಬಳಸಿಕೊಳ್ಳಬೇಕು. ಈ ರೀತಿಯಾಗಿ ಹಣದ ಬಳಕೆಯಿಂದ ಜೀವನವು ಸಂತೋಷ ಮತ್ತು ಯಶಸ್ವಿಯಾಗುತ್ತದೆ.

PC: Pixabay

ಪ್ರದೋಷ ಕಾಲ -

ಶಿವ ಪುರಾಣದ ಪ್ರಕಾರ, ಪ್ರದೋಷ ಕಾಲವನ್ನು ಶಿವನನ್ನು ಪೂಜಿಸಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಮತ್ತು ಸ್ಮಶಾನವನ್ನು ಶಿವನ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಮಾತನಾಡಬಾರದು ಎಂದು ಹೇಳಲಾಗುತ್ತದೆ. ಯಾರ ಬಗ್ಗೆಯೂ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತರಬೇಡಿ. ಹೀಗೆ ಮಾಡುವುದರಿಂದ ನೀವು ಪಾಪದ ಪಾಲುದಾರರಾಗುತ್ತೀರಿ.
PC: Facebook

ಶಿವ ಪುರಾಣವನ್ನೇಕೆ ಕೇಳಬೇಕು ಅಥವಾ ಪಠಿಸಬೇಕು..? ಮರೆತು ಈ ತಪ್ಪುಗಳನ್ನು ಮಾಡದಿರಿ..!

ಗೌರವ -​

ಶಿವ ಪುರಾಣದ ಪ್ರಕಾರ, ಗುರು ಮತ್ತು ಹಿರಿಯರನ್ನು ಗೌರವಿಸುವವನು ಸಮಾಜದಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆಯುತ್ತಾನೆ. ಗುರುವಿಲ್ಲದೆ ಶಿಷ್ಯನೊಬ್ಬನೇ ದೋಣಿ ದಾಟಲು ಸಾಧ್ಯವಿಲ್ಲ ಮತ್ತು ಹಿರಿಯರ ಆಶೀರ್ವಾದದಿಂದ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ನಿಮ್ಮ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಗೌರವವನ್ನು ಪಡೆಯಲು, ಒಬ್ಬರು ಮೊದಲು ಇತರರಿಗೆ ಗೌರವವನ್ನು ನೀಡಬೇಕು.
PC: Pexel

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ