ಆ್ಯಪ್ನಗರ

Lord Krishna And Hanuman: ಹನುಮಂತ ಮತ್ತು ಶ್ರಿಕೃಷ್ಣನಿಂದ ನಿಮಗೆ ಜೀವನ ಪಾಠ..!

ಭಗವಾನ್‌ ಹನುಮಂತನಿಂದ ಮತ್ತು ಶ್ರೀಕೃಷ್ಣನಿಂದ ನಾವು ಜೀವನದಲ್ಲಿ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಭಗವಾನ್‌ ಹನುಮಂತನಿಂದ ಮತ್ತು ಶ್ರೀಕೃಷ್ಣನಿಂದ ನಾವು ಯಾವೆಲ್ಲಾ ಜೀವನ ಪಾಠಗಳನ್ನು ಕಲಿಯಬಹುದು ಗೊತ್ತೇ..?

Authored byಮನಿಷಾ ಆನಂದ | Vijaya Karnataka Web 31 Jan 2023, 12:31 pm
ನಮ್ಮ ಭಾರತದ ಪೌರಾಣಿಕ ಸಾಹಿತ್ಯವು ದೇಶದ ಕಾರ್ಯತಂತ್ರದ ಮೌಲ್ಯವನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದನ್ನು ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ವಿದೇಶಾಂಗ ಸಚಿವರು ಹೇಳಿದ್ದಾರೆ. ಜಗತ್ತಿನ ಮಹಾನ್‌ ರಾಜತಾಂತ್ರಿಕರೆಂದರೆ ಭಗವಾನ್‌ ಹನುಮಂತ ಮತ್ತು ಶ್ರೀಕೃಷ್ಣ ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಭಗವಾನ್ ಹನುಮಂತನ ಯುಕ್ತಿಯನ್ನು, ಶಕ್ತಿಯನ್ನು ನೋಡಿದರೆ ಅವನು ರಾಜತಾಂತ್ರಿಕತೆಗೂ ಮೀರಿದ ಬುದ್ಧಿವಂತಿಕೆಯನ್ನು ಹೊಂದಿದ್ದನು ಎನ್ನಲಾಗುತ್ತದೆ.
Vijaya Karnataka Web ten life lessons from lord krishna and hanuman for you
Lord Krishna And Hanuman: ಹನುಮಂತ ಮತ್ತು ಶ್ರಿಕೃಷ್ಣನಿಂದ ನಿಮಗೆ ಜೀವನ ಪಾಠ..!


Ancient Tradition : ಊಟದೆಲೆಯ ಸುತ್ತ ನೀರು ಚಿಮುಕಿಸುವುದೇಕೆ? : ಇಲ್ಲಿದೆ ಈ ಪದ್ಧತಿಯ ಮಹತ್ವ
ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಸೀತೆಯನ್ನು ರಾಕ್ಷಸ ರಾವಣನಿಂದ ಕಾಪಾಡಿದ ಬಗೆ ಮತ್ತು ಲಂಕೆಗೆ ಬೆಂಕಿ ಹಚ್ಚಿದ ರೀತಿಯೆಂದು ಹೇಳಬಹುದು. ಇನ್ನು ಶ್ರೀಕೃಷ್ಣನ ಬಗ್ಗೆ ಹೇಳುವುದಾದರೆ, ಶ್ರೀಕೃಷ್ಣನಿಲ್ಲದಿದ್ದರೆ ಪಾಂಡವರಿಗೆ ಮಹಾಭಾರತ ಯುದ್ಧ ಗೆಲ್ಲಲು ಕಷ್ಟವಾಗುತ್ತಿತ್ತು. ಭಗವಾನ್‌ ಹನುಮಂತನಿಂದ ಮತ್ತು ಶ್ರೀಕೃಷ್ಣನಿಂದ ನಾವು ಜೀವನದಲ್ಲಿ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಭಗವಾನ್‌ ಹನುಮಂತನಿಂದ ಮತ್ತು ಶ್ರೀಕೃಷ್ಣನಿಂದ ನಾವು ಯಾವೆಲ್ಲಾ ಜೀವನ ಪಾಠಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಲೇಖನ ನಿಮಗೆ ತಿಳಿಸುತ್ತದೆ.

ಸಂವಹನ ಜ್ಞಾನ:

ಹನುಮಂತನು ಅದ್ಭುತವಾದ ಸಂವಹನ ಕೌಶಲ್ಯವನ್ನು ಹೊಂದಿದ್ದನು ಮತ್ತು ಭಗವಾನ್ ರಾಮನಿಗೆ ನಿಜವಾದ ಸಂದೇಶವಾಹಕನಾಗಿದ್ದನು. ರಾಮನ ಸೀತೆಯ ಹುಡುಕಾಟದಲ್ಲಿ ಹನುಮಂತನಿಗೆ ಯಾವುದೇ ಸಂದೇಶ ಸಿಕ್ಕಿದ್ದರು ಮೊದಲು ಅವನು ಅದನ್ನು ರಾಮನೊಂದಿಗೆ ಸಂವಹನ ಮಾಡುತ್ತಿದ್ದನು. ಸೀತೆಯನ್ನು ರಾವಣನ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ಯಾವೆಲ್ಲಾ ಯೋಜನೆಗಳನ್ನು ಮಾಡಬೇಕು ಎಂಬುದರ ಕುರಿತು ಅವನು ಯಾವಾಗಲೂ ಚರ್ಚಿಸುತ್ತಿದ್ದನು.

Garuda Purana: ಲಕ್ಷ್ಮಿ ಕೃಪೆಗಾಗಿ ಬೆಳಗ್ಗೆ ಎದ್ದಾಕ್ಷಣ ಈ ಕೆಲಸ ಮಾಡಿ ಎನ್ನುತ್ತೆ ಗರುಡ ಪುರಾಣ..!

ಹೊಂದಾಣಿಕೆ:

ಭಗವಾನ್ ಹನುಮಂತನು ಎಷ್ಟೇ ಸಮಸ್ಯೆಗಳು ಎದುರಾದರೂ ಅದರಿಂದ ಹೇಗೆ ಗೆಲುವನ್ನು ಸಾಧಿಸಬೇಕೆಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು. ಮತ್ತು ಅನೇಕರ ಜೀವಗಳನ್ನು ಉಳಿಸಿದ್ದಾನೆ. ಹೊಂದಾಣಿಕೆ ಮಾಡಿಕೊಳ್ಳುವ ಕೌಶಲ್ಯ ಹನುಮಂತನಿಗೆ ಇದ್ದುದ್ದರಿಂದ ಅವನು ಎಲ್ಲಾ ಸಮಸ್ಯೆಗಳಿಗೆ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದನು.

February 2023 Festivals: ಫೆಬ್ರವರಿಯಲ್ಲೇ ಮಹಾಶಿವರಾತ್ರಿ..! ಈ ತಿಂಗಳ ಪ್ರಮುಖ ವ್ರತಗಳಿವು..!

ನಿಷ್ಠೆ:

ಭಗವಾನ್‌ ಹನುಮಂತನು ರಾಮನಿಗೆ ಯಾವಾಗಲೂ ಅತ್ಯಂತ ನಿಷ್ಠಾವಂತ ಸಂದೇಶವಾಹಕನಾಗಿದ್ದನು. ಅವನಿಗೆ ಲಂಕೆಯ ಕುರಿತು ಯಾವುದೇ ಮಾಹಿತಿ ದೊರೆತರೂ ಅವನು ಮೊದಲು ಅದನ್ನು ತನ್ನ ಪ್ರಾಣದೇವ ರಾಮನೊಂದಿಗೆ ಹಂಚಿಕೊಳ್ಳುತ್ತಿದ್ದನು. ಭಗವಾನ್‌ ಹನುಮಂತನ ನಂಬಿಕೆ ಆತನಲ್ಲಿದ್ದ ಧರ್ಯೈದ ಮೇಲೆ ಕೇಂದ್ರೀಕೃತವಾಗಿತ್ತು. ಭಗವಾನ್‌ ರಾಮನು ಹನುಮಂತನ ಪರಮ ನಿಷ್ಠೆಗೆ ತಲೆಬಾಗಿದ್ದನು.

PC: Pixabay

Tulsi Water: ಇದಕ್ಕಾಗಿ ನೀವು ತುಳಸಿಗೆ ನೀರನ್ನು ನೀಡಿ, ಈ ಮಂತ್ರಗಳನ್ನು ಪಠಿಸಲೇಬೇಕು..!

ಸಮಸ್ಯೆಗಳಿಗೆ ತಕ್ಷಣ ಪರಿಹಾರ:

ಲಕ್ಷ್ಮಣನನ್ನು ಉಳಿಸಲು ಗಿಡಮೂಲಿಕೆಯನ್ನು ಹುಡುಕುವುದರಲ್ಲಿ ಮತ್ತು ಸೀತೆಯನ್ನು ಹುಡುಕುವುದು ಮುಂತಾದ ಪ್ರತಿಯೊಂದು ಸಮಸ್ಯೆಗೆ ಹನುಮಂತನು ಪರಿಹಾರವನ್ನು ಹೊಂದಿದ್ದನು. ಅವನ ಮುಂದೆ ಯಾವುದೇ ಸಮಸ್ಯೆಗಳು ಅಥವಾ ತೊಂದರೆಗಳು ಎದುರಾದರೂ ಅವನು ಅದರ ಬಗ್ಗೆ ಚಿಂತಿಸುತ್ತಾ ಕೂರುವ ಬದಲು ಅದಕ್ಕೆ ತಕ್ಷಣವೇ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದನು.

Saraswati Temple: ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಒಮ್ಮೆ ಈ ಸರಸ್ವತಿ ದೇಗುಲಕ್ಕೆ ಭೇಟಿ ನೀಡಿ..!

ನಾಯಕ:

ಲಂಕಾಗೆ ರಾಮ ಮತ್ತು ಆತನ ಸೇನೆಯು ತಲಿಪಬೇಕಾಗಿದ್ದರೆ ಅವನು ದೊಡ್ಡ ನೀರಿನ ಹರಿವನ್ನು ದಾಟಬೇಕಾಗಿತ್ತು. ಇಷ್ಟು ದೊಡ್ಡ ನದಿಯನ್ನು ದಾಟುವುದು ಹೇಗೆಂದು ಎಲ್ಲರೂ ಚಿಂತಿಸುತ್ತ ಕುಳಿತಾಗ ಹನುಮಂತನು ರಾಮನಿಗೆ ಮತ್ತು ಆತನ ಸೇನೆಗೆ ನದಿಯನ್ನು ದಾಟಲು ತನ್ನ ಕಪಿ ಸೇನೆಯನ್ನು ಅಯೋಜಿಸುತ್ತಾನೆ. ಹನುಮಂತನ ಮುಂದಾಳತ್ವದಲ್ಲಿ ಕಪಿ ಸೇನೆಯು ರಾಮನಿಗೆ ನದಿಯನ್ನು ದಾಟಲು ಬಲವಾದ ದೊಡ್ಡ ಸೇತುವೆಯನ್ನು ನಿರ್ಮಿಸುತ್ತವೆ. ಹನುಮಂತನಲ್ಲಿದ್ದ ಈ ನಿರ್ವಹಣಾ ಕೌಶಲ್ಯವು ರಾಮನಿಗೆ ಮತ್ತು ಆತನ ಸೈನ್ಯಕ್ಕೆ ನದಿಯನ್ನು ದಾಟಲು ಸಹಾಯ ಮಾಡಿತು.

PC: Unsplash

Jaya Ekadashi 2023 : ವಿಷ್ಣುವಿನ ಅನುಗ್ರಹ ಪ್ರಾಪ್ತಿಗೆ ಈ ಎಲ್ಲಾ ಕೈಂಕರ್ಯಗಳನ್ನು

ಕರ್ತವ್ಯವೇ ಮೊದಲು:

ಯಾವುದೇ ಸಂದರ್ಭವಿರಲಿ, ನಾವು ನಮ್ಮ ಕರ್ತವ್ಯದ ಮೇಲೆ ನಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಬೇಕು ಎಂದು ಶ್ರೀಕೃಷ್ಣನು ಮಹಾಭಾರತ ಯುದ್ಧದ ಸಮಯದಲ್ಲಿ ಹೇಳಿದ್ದಾನೆ. ಕರ್ತವ್ಯದ ಮೇಲೆ ನಂಬಿಕೆಯನ್ನಿಟ್ಟು ಕೆಲಸ ಮಾಡುವ ವ್ಯಕ್ತಿಯು ಭವಿಷ್ಯದಲ್ಲಿ ಖಂಡಿತ ಯಶಸ್ಸನ್ನು ಸಾಧಿಸುತ್ತಾನೆ. ನಮ್ಮ ಮುಂದೆ ಯಾವುದೇ ಸನ್ನಿವೇಶಗಳಿದ್ದರೂ ಕರ್ತವ್ಯಕ್ಕೆ ಮೊದಲು ಆದ್ಯತೆ ನೀಡಬೇಕೆಂದು ಶ್ರೀಕೃಷ್ಣನು ಹೇಳಿದ್ದಾನೆ.
PC: Pexel

Jaya Ekadashi 2023 : ಜಯ ಏಕಾದಶಿಯಂದು ಏನು ಮಾಡಬೇಕು? ಏನ

ಎಂದಿಗೂ ಅರ್ಧಕ್ಕೆ ಬಿಟ್ಟುಕೊಡದಿರಿ:

ನಿಮ್ಮ ಮನಸ್ಸಿಗೆ ಇಷ್ಟವಾದುದ್ದನ್ನು ಪಡೆದುಕೊಳ್ಳುವಲ್ಲಿ ಮತ್ತು ನೀವು ಅದನ್ನು ಸಾಧಿಸುವವರೆಗೂ ನೀವು ಹಿಡಿದ ಕಾರ್ಯವನ್ನು ಅರ್ಧಕ್ಕೆ ಬಿಟ್ಟುಕೊಡದಿರಿ ಎಂಬುದು ಶ್ರೀಕೃಷ್ಣನ ಕಿವಿ ಮಾತು. ನಾವು ಯಾವುದೇ ಕೆಲಸವನ್ನು ಮಾಡಬೇಕೆಂದುಕೊಂಡರೂ ಅದರಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದರೆ, ನಾವು ಆ ಸಮಸ್ಯೆಗೆಳಿಗೆ ಭಯಬೀಳದೆ, ಆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಕೊಡದೆ ಮುನ್ನಗ್ಗುವುದು ತುಂಬಾನೇ ಮುಖ್ಯ. ಯಶಸ್ಸು ಸಿಗುವವರೆಗೆ ನಾವು ಒಮ್ಮೆ ಹಿಡಿದ ಕಾರ್ಯವನ್ನು ಅರ್ಧಕ್ಕೆ ಬಿಟ್ಟು ಕೊಡಬಾರದು.

PC: Pexel

Puja Asan: ಆಸನಗಳ ಮೇಲೇ ಕುಳಿತು ನಾವೇಕೆ ಪೂಜೆ ಮಾಡಬೇಕು..? ಮಹತ್ವವೇನು..?

ಸದ್ಭಾವನೆಗೆ ತಕ್ಕ ಪ್ರತಿಫಲ:

ನೀವು ಸರಿಯಾದ ಮಾರ್ಗದಲ್ಲಿದ್ದರೆ ಅಥವಾ ಸರಿಯಾದ ಮಾರ್ಗದಲ್ಲಿ ನೀವು ಹಿಡಿದ ಕಾರ್ಯವನ್ನು ಮುನ್ನಡೆಸುತ್ತಿದ್ದರೆ ಹಾಗೂ ಕರ್ತವ್ಯವನ್ನು ಯಥಾವತ್ತಾಗಿ ಅನುಸರಿಸುವ ವ್ಯಕ್ತಿಯನ್ನು ಭಗವಂತನು ಯಾವಾಗಲೂ ರಕ್ಷಿಸುತ್ತಾನೆ. ಮತ್ತು ಆತನ ಕಾರ್ಯಕ್ಕೆ ತಕ್ಕ ಫಲವನ್ನು ನೀಡುತ್ತಾನೆ. ಆದರೆ, ನಮ್ಮ ಕಾರ್ಯ ಪೂರ್ಣಗೊಳಿಸಿಕೊಳ್ಳುವುದಕ್ಕಾಗಿ ಯಾವುದೇ ಅಡ್ಡ ದಾರಿಯನ್ನು ಹಿಡಿಯಬಾರದು. ನಾವು ಮಾಡಲು ಹೊರಟ ಕೆಲಸ ಇತರರಿಗೆ ಸಮಸ್ಯೆಯನ್ನಾಗಲಿ ಅಥವಾ ನೋವನ್ನಾಗಲಿ ನೀಡಬಾರದು.

PC: Pexel

First Night Rituals: ಮದುವೆಯ ಮೊದಲ ರಾತ್ರಿಯಲ್ಲಿ ಈ 5 ಕಾರ್ಯಗಳು ನಡೆಯಲೇಬೇಕು..!

ಕೆಲಸ ಯಾವುದಾದರೂ ಕೆಲಸವೇ:

ಭಗವಾನ್‌ ಶ್ರೀಕೃಷ್ಣನು ಹೇಳುವ ಪ್ರಕಾರ, ಉದ್ಯೋಗವು ಒಂದು ರೀತಿಯ ಕೆಲಸ. ನಾವು ಮಾಡುವ ಕೆಲಸ ಯಾವುದೂ ದೊಡ್ಡದಲ್ಲ, ಯಾವುದೂ ಚಿಕ್ಕದಲ್ಲ. ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ನೀವು ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ನಾವು ಮಾಡುವ ಕೆಲಸದ ಬಗ್ಗೆ ನಮ್ಮ ಮನಸ್ಸಿನಲ್ಲಿ ಗೌರವವಿರಬೇಕು. ಹಾಗೂ ಕೆಲಸವನ್ನು ಎಂದಿಗೂ ಗೌರವುಸಬೇಕು. ಹಾಗಿದ್ದಾಗ ಮಾತ್ರ, ನಾವು ನಮ್ಮ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು.

PC: Pixabay

Gayatri Mantra : ಶುಭವ ತರುವ ಗಾಯತ್ರಿ ಮಂತ್ರ ಜಪಿಸಲು ಯಾವ ಸಮಯ ಉತ್ತಮ?

ಏನೇ ಆದರೂ ಅದು ಒಳ್ಳೆಯದೇ ಆಗುತ್ತದೆ:

ಶ್ರೀಕೃಷ್ಣನ ಪ್ರಕಾರ, ನಮ್ಮ ಜೀವನದಲ್ಲಿ ಪ್ರತಿನಿತ್ಯ ನಡೆಯುವ ಎಲ್ಲಾ ಘಟನೆಗಳು ಒಂದಲ್ಲ ಒಂದು ಕಾರಣಕ್ಕಾಗಿ ನಡೆಯುತ್ತದೆ. ಮತ್ತು ಆ ಘಟನೆಗಳಿಂದ ನಾವು ಏನನ್ನು ಪಡೆದುಕೊಳ್ಳುತ್ತೇವೆಯೋ ಅದು ಒಳ್ಳೆಯದೇ ಆಗಿರುತ್ತದೆ. ಆ ಘಟನೆಗಳು ನಮ್ಮ ಜೀವನಕ್ಕೆ ಕಹಿಯಾಗಿರಲಿ ಅಥವಾ ಸಿಹಿಯಾಗಿರಲಿ ಅದನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವ ನಿರ್ಧಾರ ನಮ್ಮದಾಗಿರುತ್ತದೆ.

PC: Pixabay

Jaya Ekadashi 2023: ಜಯ ಏಕಾದಶಿ 2023 ರ ಶುಭ ಮುಹೂರ್ತ, ಪೂಜೆ ವಿಧಾನ,

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ