ಆ್ಯಪ್ನಗರ

Hanuman Names For Baby Boy: ಹನುಮಂತನ ಕೃಪೆಗಾಗಿ ಮಗನಿಗೆ ಈ ಹೆಸರುಗಳನ್ನೇ ಇಡಿ..!

Baby Boy Names on Hanuman: ಹನುಮಂತನನ್ನು ಹಿಂದೂ ಧರ್ಮದ ಅತ್ಯಂತ ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ದೇವರುಗಳಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚಿನವರು ತಮ್ಮ ಗಂಡು ಮಕ್ಕಳಿಗೆ ಹನುಮಂತನ ಹೆಸರುಗಳನ್ನು ಇಡಲು ಇಷ್ಟ ಪಡುತ್ತಾರೆ. ಗಂಡು ಮಗುವಿಗೆ ಹನುಮಂತನ ಯಾವ ಹೆಸರುಗಳನ್ನು ಇಡುವುದು ಉತ್ತಮ..? ಹನುಮಂತನ ಈ 21 ಹೆಸರುಗಳಲ್ಲಿ ಯಾವ ಹೆಸರನ್ನು ಕೂಡ ಹನುಮಂತನಿಗೆ ಇಡಬಹುದು.

Authored byಮನಿಷಾ ಆನಂದ | Agencies 30 Apr 2023, 9:10 am

ಹೈಲೈಟ್ಸ್‌:

ಹೈಲೈಟ್ಸ್‌:
  • ಗಂಡು ಮಕ್ಕಳಿಗೆ ಹನುಮಂತನ ಹೆಸರುಗಳು
  • ಮಕ್ಕಳಿಗೆ ಹನುಮಂತನ ಹೆಸರುಗಳು
  • ಗಂಡು ಮಗುವಿಗೆ ಹೆಸರುಗಳು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Hanuman Names For Baby
ಮಕ್ಕಳಿಗೆ ಹನುಮಂತನ ಹೆಸರುಗಳು - PC: Pexel, Lord Hanuman Facebook
ಪೋಷಕರು ತಮ್ಮ ನಂಬಿಕೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿರುವ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡಲು ಇಷ್ಟಪಡುತ್ತಾರೆ. ಹೆಚ್ಚಾಗಿ ಎಲ್ಲಾ ಹಿಂದೂ ದೇವರುಗಳನ್ನು ವಿವಿದ ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದೂ ಹೆಸರುಗಳು ವಿಶಿಷ್ಟ ಮತ್ತು ಆಳವಾದ ಅರ್ಥವನ್ನು ಹೊಂದಿದೆ. ಅದೇ ರೀತಿ ಹನುಮಂತನ ಹೆಸರೂ ಇದೆ. ರಾಮಾಯಣದ ನಾಯಕ ಮತ್ತು ಅತ್ಯಂತ ಪ್ರೀತಿಯ ದೇವರುಗಳಲ್ಲಿ ಒಬ್ಬನಾದ ಹನುಮಂತನು ಹಲವಾರು ವಿಭಿನ್ನ ಹೆಸರುಗಳನ್ನು ಹೊಂದಿದ್ದು, ಅದು ಅವನ ಎಲ್ಲಾ ಅಸಾಧಾರಣ ಸಾಮರ್ಥ್ಯಗಳನ್ನು ಉಲ್ಲೇಖಿಸುತ್ತದೆ.
Hindu Shastra: ತಪ್ಪಿಯೂ ಮನೆಯಲ್ಲಿ ಚಪ್ಪಲಿ, ಶೂಗಳನ್ನು ಉಲ್ಟಾ ಇಡಲೇಬೇಡಿ..!

ಹನುಮಂತ - Lord Hanuman Facebook

ಭಗವಾನ್ ರಾಮನ ಮೇಲಿನ ಹನುಮಂನ ನಿಷ್ಠೆ, ಭಕ್ತಿ ಮತ್ತು ಸಮರ್ಪಣೆಯಿಂದಾಗಿ ಹನುಮಂತನು ಹೆಚ್ಚು ಭಕ್ತರನ್ನು ಹೊಂದಿದ್ದಾನೆ. ಕೇಸರಿ ಮತ್ತು ಅಂಜನಾದೇವಿಯ ಮಗನನ್ನು ಗೌರವಿಸುವ ಹೆಸರನ್ನು ಮಕ್ಕಳಿಗೆ ಇಡುವುದು ಹೆಚ್ಚು ಸೂಕ್ತವಾಗಿದೆ. ವಾಯುದೇವನಾದ ವಾಯುವಿನಿಂದ ಆಶೀರ್ವಾದ ಪಡೆದ ವಾನರ ದೇವರು ಹನುಮಂತನು ಹಲವಾರು ಸದ್ಗುಣಗಳ ವ್ಯಕ್ತಿತ್ವವಾಗಿದೆ. ಭಗವಾನ್ ವಿಷ್ಣುವಿನ ದ್ಯೋತಕವಾದ ಭಗವಾನ್ ಹನುಮಂತನ ನಾಮವನ್ನು ಜಪಿಸುವುದರಿಂದ ಎಲ್ಲಾ ರೀತಿಯ ದುಷ್ಟತನವನ್ನು ದೂರವಿಡುತ್ತದೆ ಎಂದು ಭಾವಿಸಲಾಗಿದೆ. ಹನುಮಂತನಿಂದ ಪ್ರೇರಿತವಾದ ಗಂಡು ಮಕ್ಕಳ ಹೆಸರುಗಳು ಈ ಲೇಖನದಲ್ಲಿದೆ.

Baby Boy Ganesha Names: ಗಣೇಶನ ಅನುಗ್ರಹಕ್ಕಾಗಿ ಮಕ್ಕಳಿಗೆ ಈ ಹೆಸರುಗಳನ್ನಿಡಿ..!
ನಿಮ್ಮ ಗಂಡು ಮಗುವಿಗೆ ಇಡಬಹುದಾದ ಟಾಪ್‌ 21 ಹನುಮಂತನ ಹೆಸರುಗಳಿವು:
1. ಅಮಿತ ವಿಕ್ರಮ: ಮಿತಿಯಿಲ್ಲದ, ಅಪಾರ.
2. ಅನಿಲ್: ಗಾಳಿ, ಶುದ್ಧವಾದ ಹಾಗೂ ತಂಪಾದ ಗಾಳಿ.
3. ಬಜರಂಗಿ: ದೇವರ ಸಲುವಾಗಿ ಹೋರಾಡುವ ಹೋರಾಟಗಾರ.
4. ಭಕ್ತವತ್ಸಲ: ತನ್ನ ಭಕ್ತರ ರಕ್ಷಕ.
5. ಚಿರಂಜೀವಿ: ಅಮರ.

ಹನುಮಂತನ ಹೆಸರುಗಳು - PC: Lord Hanuman Facebook

6. ಧ್ಯಾನಾಂಜನೇಯ: ಧ್ಯಾನ ಚಿತ್ತ.
7. ಜ್ಞಾನಸಾಗರ: ಸಾಗರದಷ್ಟು ಜ್ಞಾನ ಉಳ್ಳವನು.
8. ಹನುಮಾನ್: ದೈವಿಕ ಕೋತಿ, ದೇವರು.
9. ಇರಾಜ್: ಗಾಳಿಯಿಂದ ಹುಟ್ಟಿದ.
10. ಜಿತೇಂದ್ರಿಯ: ಇಂದ್ರಿಯಗಳನ್ನು ಗೆದ್ದವನು.
11. ಕಲಾನಾಭ: ಸಮಯವನ್ನು ನಿಯಂತ್ರಿಸುವ ಮತ್ತು ಸಂಘಟಿಸುವವನು.
12. ಮಹಾತೇಜಸ್: ಅಪಾರ ತೇಜಸ್ಸನ್ನು ಹೊಂದಿರುವವನು.
13. ಮಹಾವೀರ: ಕೆಚ್ಚೆದೆಯ ಧೈರ್ಯಶಾಲಿ.

Mythological Baby Names: ನಿಮ್ಮ ಮಗುವಿಗೆ ತಪ್ಪಿಯೂ ಈ ಪೌರಾಣಿಕ ಹೆಸರುಗಳನ್ನು
14. ಪ್ರತಾಪವತ: ವೈಭವ, ಹುರುಪು.
15. ರುದ್ರಾಂಶ: ಶಿವನ ಒಂದು ಭಾಗ.
16. ಸಂಜು: ವಿಜಯೋತ್ಸವ.
17. ಶೌರ್ಯ: ನಿರ್ಭೀತ, ಪರಾಕ್ರಮಿ, ಧೈರ್ಯಶಾಲಿ.
18. ತೇಜಸ್: ಅತ್ಯಂತ ಪ್ರಕಾಶಮಾನ.
19. ಉರ್ಜಿತ: ಶಕ್ತಿ ತುಂಬಿದ.
20. ವಿಶ್ವೇಶ: ಪರಮ ಜೀವಿ.
21. ವಾಯುನಂದನ: ವಾಯುವಿನ ಮಗ, ಗಾಳಿ ದೇವರ ಮಗ.

ನಿಮ್ಮ ಮಗನಿಗೆ ಹನುಮಂತನ ಈ ಹೆಸರುಗಳನ್ನು ಮಾತ್ರವಲ್ಲ. ಇನ್ನು ಅನೇಕ ಹೆಸರುಗಳಿವೆ, ಅವುಗಳನ್ನು ಕೂಡ ನೀವು ನಿಮ್ಮ ಮಗನಿಗೆ ಇಡಬಹುದು. ಹನುಮಂತನ ಹೆಸರುಗಳನ್ನು ಮಕ್ಕಳಿಗೆ ಇಡುವುದರಿಂದ ಅವರ ಮೇಲೆ ಹನುಮಂತನ ಅನುಗ್ರಹ ಇರುವುದು.
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ