ಆ್ಯಪ್ನಗರ

Clay Idols And Things: ಇಂದೇ ಮನೆಗೆ ಈ ಮಣ್ಣಿನ ವಿಗ್ರಹಗಳನ್ನು, ವಸ್ತುಗಳನ್ನು ತನ್ನಿ..!

ಮನೆಯಲ್ಲಿ ಕೆಲವು ಮಣ್ಣಿನ ವಸ್ತುಗಳನ್ನು, ಕೆಲವು ಮಣ್ಣಿನ ದೇವರ ವಿಗ್ರಹಗಳನ್ನು ಇಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಯಾವ ರೀತಿಯ ಮಣ್ಣಿನ ವಿಗ್ರಹಗಳನ್ನು ಇಡಬೇಕು ಗೊತ್ತೇ..?

Authored byಮನಿಷಾ ಆನಂದ | Vijaya Karnataka Web 15 Dec 2022, 12:13 pm
ಮನೆಯಲ್ಲಿ ಕೆಲವು ಮಣ್ಣಿನ ವಸ್ತುಗಳನ್ನು ಇಡುವುದರಿಂದ ಶುಕ್ರನ ಬಲವು ಹೆಚ್ಚಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯೂ ಹೆಚ್ಚಾಗುತ್ತದೆ. ಶುಕ್ರನ ಬಲದಿಂದ ಚಂದ್ರ ದೇವನಿಗೆ ಮತ್ತು ಶನಿ ದೇವನಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಕೆಲವು ಮಣ್ಣಿನ ವಸ್ತುಗಳನ್ನು, ಕೆಲವು ಮಣ್ಣಿನ ದೇವರ ವಿಗ್ರಹಗಳನ್ನು ಇಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಯಾವ ರೀತಿಯ ಮಣ್ಣಿನ ವಿಗ್ರಹಗಳನ್ನು ಇಡಬೇಕು ಗೊತ್ತೇ..?
Vijaya Karnataka Web you should bring these types of clay idols and things to home
Clay Idols And Things: ಇಂದೇ ಮನೆಗೆ ಈ ಮಣ್ಣಿನ ವಿಗ್ರಹಗಳನ್ನು, ವಸ್ತುಗಳನ್ನು ತನ್ನಿ..!



​ಮಣ್ಣಿನ ವಿಗ್ರಹ:

ಮನೆಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಮಣ್ಣಿನ ವಿಗ್ರಹವನ್ನು ಇಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಹೆಚ್ಚಾಗುತ್ತದೆ. ಲಕ್ಷ್ಮಿ ದೇವಿ ಮತ್ತು ಗಣೇಶನ ಅನುಗ್ರಹವು ಪ್ರಾಪ್ತವಾಗುತ್ತದೆ. ಇಂತಹ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ತುಂಬಾನೇ ಮಂಗಳಕರ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ.

Mahabharat And Ramayan: ಮಹಾಭಾರತ ಯುದ್ಧದಲ್ಲಿ ಯೋಧರನ್ನು ಹೀಗೆ ವಿಂಗಡಿಸಿದ್ದರು..!

​ಮಣ್ಣಿನ ದೀಪ:

ತುಳಸಿ ಮಾತೆಯ ಬಳಿ ಮಣ್ಣಿನ ದೀಪವನ್ನು ಬೆಳಗಿಸುವುದರಿಂದ ಧನಾತ್ಮಕ ಶಕ್ತಿಯು ಹರಡುತ್ತದೆ. ಇದು ಪಂಚಭೂತಗಳ ಸಂಕೇತವೂ ಹೌದು. ಇದು ದೇವರುಗಳಿಗೆ ಮತ್ತು ದೇವತೆಗಳಿಗೆ ಸಂತೋಷವನ್ನು ನೀಡುತ್ತದೆ. ಇದರೊಂದಿಗೆ ದಾಂಪತ್ಯ ಜೀವನವನ್ನು ಸುಖವಾಗಿ ಕಳೆಯಬಹುದಾಗಿದೆ.

Dhanu Sankranti 2022: ಧನು ಸಂಕ್ರಾಂತಿಯಂದು ಇವುಗಳನ್ನು ದಾನ ಮಾಡುವುದೇ ಪುಣ್ಯ..!

​ಮಣ್ಣಿನ ಮಡಕೆ:

ಮಣ್ಣಿನ ಮಡಕೆಯಲ್ಲಿ ಅಥವಾ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಇಡುವುದರಿಂದ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲಾಗುತ್ತದೆ. ಈ ಹೂಜಿಯಲ್ಲಿ ಯಾವಾಗಲೂ ನೀರನ್ನು ತುಂಬಿಸಿ ಮತ್ತು ಅದನ್ನು ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಮಾತ್ರ ಇರಿಸಿ.

Angkor Wat Temple: ಭಾರತದಿಂದ ಈ ವಿದೇಶಿ ದೇವಾಲಯದ ನವೀಕರಣ..!

​ಮಣ್ಣಿನ ಪಾಟ್‌:

ಮನೆಯ ಗಿಡಗಳನ್ನು ಪ್ಲಾಸ್ಟಿಕ್ ಕುಂಡದಲ್ಲಿ ಇಡಬಾರದು, ಮಣ್ಣಿನ ಕುಂಡದಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಮನೆಗೆ ಬರುವುದಿಲ್ಲ ಮತ್ತು ಇದರಿಂದ ನಿಮ್ಮ ಸುತ್ತಲಿನ ಪರಿಸರವೂ ಪರಿಶುದ್ಧವಾಗುತ್ತದೆ.

Chanakya Niti: ನಿಮ್ಮಿಂದ ತಪ್ಪಾಗಬಾರದೆಂದು ಬಯಸಿದರೆ ಹೀಗೆ ಮಾಡಿ ಎನ್ನುತ್ತಾರೆ ಚಾಣಕ್ಯ..!

​ಮಣ್ಣಿನ ಮನೆ:

ದೀಪಾವಳಿಯ ದಿನ ಮಣ್ಣಿನ ಮನೆ ಅಥವಾ ಸಿದ್ಧ ಮನೆಯನ್ನು ಮಾರುಕಟ್ಟೆಯಿಂದ ಖರೀದಿಸಿ ಪೂಜಿಸಲಾಗುತ್ತದೆ. ಮಣ್ಣಿನ ಮನೆಯನ್ನು ಮಾಡುವ ಸಂಪ್ರದಾಯ ಬಹಳ ಪ್ರಾಚೀನವಾದ ಸಂಪ್ರದಾಯವಾಗಿದೆ. ಮಣ್ಣಿನ ಮನೆಯನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಬಳಿ ನಿಮ್ಮದೇ ಆದ ಸ್ವಂತ ಮನೆ ಇಲ್ಲದಿದ್ದರೆ ಖಂಡಿತವಾಗಿಯೂ ಮಣ್ಣಿನ ಮನೆಯನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ.

Dhanurmas 2022 - 23: ಖಾರ್ಮಾಸದಲ್ಲಿ ಈ ಶುಭ ಕಾರ್ಯಗಳು ಕಡ್ಡಾಯವಾಗಿ ನಿಷಿ

​ಮಣ್ಣಿನ ಲೋಟ ಅಥವಾ ಮಣ್ಣಿನ ತಟ್ಟೆ:

ಮಣ್ಣಿನ ಲೋಟವನ್ನು ಮನೆಯಲ್ಲಿಯೂ ಇಟ್ಟುಕೊಳ್ಳಬೇಕು. ಮಣ್ಣಿನ ಲೋಟದಲ್ಲಿ ಅಥವಾ ಮಣ್ಣಿನ ತಟ್ಟೆಯಲ್ಲಿ ನೀರನ್ನು ತುಂಬಿಸಿ ಮತ್ತು ಬಾಯಾರಿದ ಪಕ್ಷಿಗಳಿಗಾಗಿ ಅದನ್ನು ನಿಮ್ಮ ಛಾವಣಿಯ ಮೇಲೆ ಇರಿಸಿ. ಇದು ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮಣ್ಣಿನ ಲೋಟದಲ್ಲಿ ನೀರು ಕುಡಿಯುವುದರಿಂದ ಮಂಗಳ ಮತ್ತು ಶನಿಗೆ ಸಂಬಂಧಿಸಿದ ಸಮಸ್ಯೆಗಳೂ ಪರಿಹಾರವಾಗುತ್ತವೆ.

Dhanu Sankranti 2022: ಧನು ಸಂಕ್ರಾಂತಿ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಮಹತ್ವ..!

​ಮಣ್ಣಿನ ಆಟಿಕೆಗಳು:

ಡ್ರಾಯಿಂಗ್ ರೂಂನಲ್ಲಿ ಮಣ್ಣಿನಿಂದ ಮಾಡಿದ ವಿವಿಧ ವಸ್ತುಗಳು ಅಥವಾ ಆಟಿಕೆಗಳನ್ನು ಬಳಸುವುದರಿಂದ ಹಣದ ಒಳಹರಿವು ಹೆಚ್ಚಾಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಣ್ಣಿನ ಆಟಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ಅದರಲ್ಲೂ ಇವುಗಳನ್ನು ಡ್ರಾಯಿಂಗ್‌ ರೂಂನಲ್ಲಿ ಇಟ್ಟುಕೊಳ್ಳುವುದು ನಿಮಗೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತದೆ.

Radha Krishna: ರಾಧಾ - ಕೃಷ್ಣ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರೂ ವಿವಾಹವಾಗದಿರಲು

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ