ಆ್ಯಪ್ನಗರ

2021 ರ ಕೊನೆಯ ಸೂರ್ಯಗ್ರಹಣ: ಯಾವ ಮಂತ್ರ ಪಠಿಸಬೇಕು..? ಈ ನಿಯಮಗಳನ್ನೇ ಪಾಲಿಸಿ..!

2021 ರ ಡಿಸೆಂಬರ್‌ 4 ರಂದು ಶನಿವಾರ ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಸಂಭವಿಸಲಿದ್ದು, ಈ ದಿನವೇ ಶನಿ ಅಮಾವಾಸ್ಯೆಯು ಇರುವುದರಿಂದ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಯಾವ ಮಂತ್ರವನ್ನು ಪಠಿಸಬೇಕು..? ಸೂರ್ಯಗ್ರಹಣದ ವೇಳೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ..

Vijaya Karnataka Web 30 Nov 2021, 2:58 pm
2021 ರ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರ ಶನಿವಾರದಂದು ಸಂಭವಿಸುತ್ತದೆ, ಇದು ಭಾಗಶಃ ಅಥವಾ ಪೆನಂಬ್ರಲ್ ಗ್ರಹಣವಾಗಿರುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಈ ಕಾರಣದಿಂದಾಗಿ ಗ್ರಹಣದ ಸೂತಕ ಕಾಲ ಇಲ್ಲಿ ಮಾನ್ಯವಾಗುವುದಿಲ್ಲ. ಅದೇನೇ ಇರಲಿ, ಈ ಗ್ರಹಣ ಛಾಯಾಗ್ರಹಣವಾಗಲಿದೆ. ಸಂಪೂರ್ಣ ಗ್ರಹಣ ಇದ್ದಾಗ ಮಾತ್ರ ಸೂತಕ ಕಾಲ ಮಾನ್ಯವಾಗಿರುತ್ತದೆ. ಸೂತಕ ಅವಧಿಯು ಸೂರ್ಯಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಬಾರಿ ಶನಿ ಅಮಾವಾಸ್ಯೆಯ ದಿನದಂದೇ ಸೂರ್ಯಗ್ರಹಣವು ಸಂಭವಿಸಲಿದೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಯಾವ ಮಂತ್ರಗಳನ್ನು ಪಠಿಸಬೇಕು..? ಸೂರ್ಯಗ್ರಹಣದ ನಿಯಮಗಳಾವುವು ನೋಡೋಣ..
Vijaya Karnataka Web 2021 last solar eclipse on december 4th chant these eclipse mantra and follow these rules
2021 ರ ಕೊನೆಯ ಸೂರ್ಯಗ್ರಹಣ: ಯಾವ ಮಂತ್ರ ಪಠಿಸಬೇಕು..? ಈ ನಿಯಮಗಳನ್ನೇ ಪಾಲಿಸಿ..!


​ಸೂರ್ಯಗ್ರಹಣ ಎಲ್ಲಿ ಗೋಚರಿಸುತ್ತದೆ.?

ಈ ವರ್ಷದ ಕೊನೆಯ ಸೂರ್ಯಗ್ರಹಣ ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಇದು ಕೇವಲ ಭಾಗಶಃ ಸೂರ್ಯಗ್ರಹಣವಾಗಿರುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಇತಿಹಾಸ, ಮಹತ್ವವೇನು ಗೊತ್ತೇ..? ತಿಳಿಯಿರಿ.

​ಸೂರ್ಯಗ್ರಹಣ ಗೋಚರಿಸುವ ಸಮಯ

ಸೂರ್ಯಗ್ರಹಣವು ಡಿಸೆಂಬರ್ 4 ರಂದು ಬೆಳಿಗ್ಗೆ 10:59 ಕ್ಕೆ ಪ್ರಾರಂಭವಾಗುತ್ತದೆ, ಅದು ಮಧ್ಯಾಹ್ನ 03:07 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣ ಸುಮಾರು ನಾಲ್ಕು ಗಂಟೆಗಳ ಕಾಲ ಇರಲಿದೆ.

ಹನುಮಾನ್‌ ಪೂಜೆಯ ನಂತರ ನೀವು ಪಠಿಸಲೇಬೇಕಾದ ಮಂತ್ರಗಳಿವು..! ಇವುಗಳ ಪ್ರಯೋಜನವೇನು..?

​ಸೂರ್ಯಗ್ರಹಣದ ಮಂತ್ರ

''ಓಂ ರಂ ರವಯೇ ನಮಃ'' ಅಥವಾ ''ಓಂ ಘೃಣೀ ಸೂರ್ಯಾಯ ನಮಃ'' ಎಂದು 108 ಬಾರಿ (1 ಜಪಮಾಲೆ) ಪಠಿಸಿ. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ ಅಥವಾ ಗಾಯತ್ರಿ ಮಂತ್ರವನ್ನು ಕೂಡ ಈ ಸಂದರ್ಭದಲ್ಲಿ ಪಠಿಸಬಹುದು.

ಪೂಜಾ ವಿಧಿಗಳುಇಂದು ಉತ್ಪನ್ನ ಏಕಾದಶಿ: ಈ ಏಕಾದಶಿ ವ್ರತ ಮಾಡಿದರೆ ಅಶ್ವಮೇಧ ಯಾಗದ ಫಲ ಪ್ರಾಪ್ತಿ..!

​ಧನ ಪ್ರಾಪ್ತಿಗಾಗಿ ಮಂತ್ರ

''ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ

ಪ್ರಸೀದ್‌ - ಪ್ರಸೀದ್‌ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ||''

ಪೂಜಾ ವಿಧಿಗಳು2021 ಉತ್ಪನ್ನ ಏಕಾದಶಿ: ರಾಶಿಗನುಗುಣವಾಗಿ ಯಾವ ಪರಿಹಾರ ತೆಗೆದುಕೊಂಡರೆ ಶುಭ..?

​ದುಷ್ಟ ಶಕ್ತಿ ನಿಗ್ರಹ ಮಂತ್ರ

''ವಿಧುಂತುದ್‌ ನಮಸ್ತುಭ್ಯಂ ಸಿಂಹಿಕಾನಂದನಾಚ್ಯುತ

ದಾನೇನಾನೇನ ನಾಗಸ್ಯ ರಕ್ಷ ಮಾಂ ವೇಧಜಾಭ್ದಯಾತ್‌||''

ಪೂಜಾ ವಿಧಿಗಳುಉತ್ಪನ್ನ ಏಕಾದಶಿ ದಿನದಂದು ನಿರ್ಜಲ ಉಪವಾಸ ಮಾಡಿದರೆ ಲಕ್ಷ್ಮಿ ಆಶೀರ್ವದಿಸುವಳು..!

​ಶಾಂತಿ ಪಡೆಯುವ ಮಂತ್ರ

ತಮೋಮಯ ಮಹಾಭೀಮ ಸೋಮಸೂರ್ಯವಿಮರ್ದನ|

ಹೇಮತಾರಾಪ್ರದಾನೇನ ಮಮ ಶಾಂತಿಪ್ರದೋ ಭವ||''

ಪೂಜಾ ವಿಧಿಗಳು2021 ಉತ್ಪನ್ನ ಏಕಾದಶಿ: ಈ ದಿನ ಯಾವ ಮಂತ್ರವನ್ನು ಪಠಿಸಬೇಕು..? ಪೂಜೆ ವಿಧಿ -

​ಸೂರ್ಯಗ್ರಹಣದ ನಿಯಮ

- ಕುಡಿಯುವ ನೀರಿಗೆ ತುಳಸಿ ದಳಗಳನ್ನು ಹಾಕಿ ಕುಡಿಯಿರಿ

- ಗರ್ಭಿಣಿಯರು ಗ್ರಹಣದ ದಿನ ಮನೆಯಿಂದ ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು.

- ಈ ದಿನ ಭಜನೆ, ಧ್ಯಾನ ಅಥವಾ ಪ್ರಾರ್ಥನೆಯನ್ನು ಮಾಡಬೇಕು.

- ಈ ದಿನ ಸಾಧ್ಯವಾದರೆ ಯೋಗ ಅಥವಾ ತಪಸ್ಸನ್ನು ಮಾಡಬೇಕು.

- ಈ ದಿನ ಸೂರ್ಯ ದೇವರ ಬೀಜ ಮಂತ್ರವನ್ನು ಪಠಿಸಿ.

- ಸೂರ್ಯಗ್ರಹಣದ ನಂತರ ಸಂಪೂರ್ಣ ಮನೆಯನ್ನು ನೀರಿನಿಂದ ಶುದ್ಧಗೊಳಿಸಿ.

- ಈ ದಿನ ದೇವರ ಕೋಣೆಯಲ್ಲಿರುವ ಎಲ್ಲಾ ವಿಗ್ರಹಗಳನ್ನು ಶುದ್ಧೀಕರಿಸಿ.

- ಗ್ರಹಣ ಪೂರ್ಣಗೊಂಡ ನಂತರ ಸ್ನಾನ ಮಾಡಿ ನಂತರ ಪೂಜೆಯನ್ನು ಮಾಡಿ.

ಹಬ್ಬಗಳು2021 ಉತ್ಪನ್ನ ಏಕಾದಶಿ: ಇಲ್ಲಿದೆ ಶುಭ ಮುಹೂರ್ತ, ವ್ರತ ನಿಯಮ ಮತ್ತು ವ್ರತ ಕಥೆ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ