ಆ್ಯಪ್ನಗರ

Hanuman Chalisa: ಹನುಮಾನ್‌ ಚಾಲೀಸಾ ಪಠಿಸುವುದರ ಜ್ಯೋತಿಷ್ಯ ಪ್ರಯೋಜನಗಳಿವು..!

Hanuman Chalisa Paath, Jai Hanuman Bhajan, Aarti in Kannada: ಹನುಮಾನ್ ಚಾಲೀಸಾದ 40 ಶ್ಲೋಕಗಳನ್ನು 40 ದಿನಗಳವರೆಗೆ ಪಠಿಸುವುದು ಮಂಗಳಕರವಾಗಿದೆ ಮತ್ತು ಭಗವಾನ್ ಹನುಮಂತನ ಆಶೀರ್ವಾದವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಹನುಮಾನ್‌ ಚಾಲೀಸಾ ಪಠಿಸುವುದರಿಂದ ಸಾಕಷ್ಟು ಜ್ಯೋತಿಷ್ಯ ಪ್ರಯೋಜನಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹನುಮಾನ್‌ ಚಾಲೀಸಾದ ಪ್ರಯೋಜನವೇನು..?

Authored byಮನಿಷಾ ಆನಂದ | Vijaya Karnataka Web 11 Feb 2023, 6:56 am
ಅತ್ಯಂತ ಪರಿಣಾಮಕಾರಿ ಸ್ತೋತ್ರಗಳಲ್ಲಿ ಒಂದಾದ ಹನುಮಾನ್‌ ಚಾಲೀಸಾವನ್ನು ಗೋಸ್ವಾಮಿ ತುಳಸಿ ದಾಸರು ಅವಧಿ ಭಾಷೆಯಲ್ಲಿ ರಚಿಸಿದ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಸ್ತೋತ್ರವಾಗಿದೆ. ಇದರ ಹೆಸರೇ ಸೂಚಿಸುವಂತೆ ಇದು ಭಗವಾನ್‌ ಹನುಮಂತನಿಗೆ ಸಮರ್ಪಿತವಾದ ಸ್ತೋತ್ರವಾಗಿದೆ. ಹನುಮಾನ್‌ ಚಾಲೀಸಾವನ್ನು ನಾವು ಪ್ರತಿನಿತ್ಯ ಪಠಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
Vijaya Karnataka Web astrological benefits of chanting hanuman chalisa daily
Hanuman Chalisa: ಹನುಮಾನ್‌ ಚಾಲೀಸಾ ಪಠಿಸುವುದರ ಜ್ಯೋತಿಷ್ಯ ಪ್ರಯೋಜನಗಳಿವು..!


Third Eye Of Lord Shiva : ಮಹಾದೇವ ತ್ರಿನೇತ್ರನಾಗಿದ್ದು ಹೇಗೆ? : ಶಿವ ದೇವರ ಮೂರನೇ ಕಣ್ಣಿನ ಕಥೆ, ಮಹತ್ವ

ಹನುಮಾನ್‌ ಚಾಲೀಸಾವನ್ನು ಶುದ್ಧ ಹೃದಯ ಮತ್ತು ಆತ್ಮದಿಂದ ಪಠಿಸಿದರೆ ಮನಸ್ಸು ಶಾಂತವಾಗುತ್ತದೆ. ಯಾವುದೇ ಅಪಾಯದ ಸಂದರ್ಭದಲ್ಲಿ ಹನುಮಾನ್‌ ಚಾಲೀಸಾವನ್ನು ಪಠಿಸಿದರೆ ಆ ಅಪಾಯದಿಂದ ಶೀಘ್ರದಲ್ಲೇ ಪಾರಾಗಬಹುದು. ಜ್ಯೋತಿಷ್ಯದಲ್ಲೂ ಹನುಮಾನ್‌ ಚಾಲೀಸಾದ ಅಸಂಖ್ಯಾತ ಪ್ರಯೋಜನಗಳನ್ನು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹನುಮಾನ್‌ ಚಾಲೀಸಾದ ಪ್ರಯೋಜನವೇನು ನೋಡಿ..

ಶನಿ ಕಾಟದಿಂದ ಮುಕ್ತಿ

ಸರಿಸುಮಾರು ನಲವತ್ತು ದಿನಗಳ ಕಾಲ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಶನಿಯ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತದೆ ಮತ್ತು ಶನುಯ ಕೋಪವನ್ನು ಸಮತೋಲನಗೊಳಿಸುತ್ತದೆ. ಶನಿ ದೋಷದಿಂದ, ಸಾಡೇಸಾತಿ ಶನಿದೋಷದಿಂದ, ಶನಿ ಮಹಾದಶದಿಂದ ಬಳಲುತ್ತಿರುವವರು ಪ್ರತೀ ಶನಿವಾರದಂದು ತಪ್ಪದೇ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು. ಇದು ನಿಮ್ಮನ್ನು ಈ ಎಲ್ಲಾ ದೋಷಗಳಿಂದ ಮುಕ್ತರನ್ನಾಗಿ ಮಾಡುತ್ತದೆ.

Nidhivan: ರಾಧಾ ಕೃಷ್ಣರ ನೃತ್ಯದ ವೇಳೆ ಗೋಪಿಯರ ರೂಪ ತಾಳುತ್ತವೆಯಂತೆ ಮರಗಳು: ನಿಧಿವನದ ಬಗೆಗೆ ಹೀಗೊಂದು

ಮಂಗಳ ದೋಷದಿಂದ ಮುಕ್ತಿ

ಯಾವ ವ್ಯಕ್ತಿಯು ತನ್ನ ಜನ್ಮ ಕುಂಡಲಿಯಲ್ಲಿ ಮಂಗಳ ದೋಷವನ್ನು ಹೊಂದಿರುತ್ತಾನೋ ಅವನು ಜೀವನದಲ್ಲಿ ಬರೀ ಸಮಸ್ಯೆಗಳನ್ನೇ ಎದುರಿಸುತ್ತಿರುತ್ತಾನೆ. ಮಂಗಳ ದೋಷವು ಆ ವ್ಯಕ್ತಿಯ ಸಮೃದ್ಧ ಜೀವನ ಮತ್ತು ಆರೋಗ್ಯದ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಹೀಗಾಗಿ, ಹನುಮಾನ್‌ ಚಾಲೀಸಾವನ್ನು ಪಠಿಸುವುದರಿಂದ ಸುಲಭವಾಗಿ ಮಂಗಳ ದೋಷದಿಂದ ಮುಕ್ತಿ ಪಡೆದುಕೊಳ್ಳಬಹುದು ಮತ್ತು ಮಂಗಳನ ದುಷ್ಪರಿಣಾಮವೂ ಕೊನೆಗೊಳ್ಳುವುದು.

PC: Wikipedia

Chanakya Niti : ವ್ಯವಹಾರ, ಉದ್ಯೋಗದಲ್ಲಿ ಯಶಸ್ಸು ಗಳಿಸಲು ಈ 3 ವಿಷಯಗಳನ್ನು

ದೇಹ ಮತ್ತು ಆತ್ಮದ ಶುದ್ಧಿ

ಹನುಮಾನ್ ಚಾಲೀಸಾವನ್ನು ದಿನದ ಆರಂಭದಲ್ಲಿ ಮತ್ತು ರಾತ್ರಿಯ ಅಂತ್ಯದ ವೇಳೆಗೆ ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದಲ್ಲದೆ, ಅದನ್ನು ಪುನರಾವರ್ತಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹನುಮಾನ್‌ ಚಾಲೀಸಾ ಪಠಿಸುವುದರಿಂದ ಯಾವುದೇ ಹಾನಿಕಾರಕ ಶಕ್ತಿಯು ನಿಮ್ಮ ಜಾಗವನ್ನು ಪ್ರವೇಶಿಸದಂತೆ ತಡೆಯುತ್ತದೆ ಮತ್ತು ವ್ಯಕ್ತಿಯ ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ.

PC: Pixabay

Garuda Purana : ಇವರಿಂದ ದೂರ ಇರದಿದ್ದರೆ ಬದುಕು ಇನ್ನಷ್ಟು ಕಷ್ಟಕರವಾಗುವುದು...!

ನಕಾರಾತ್ಮಕತೆಯನ್ನು ದೂರವಿಡುತ್ತದೆ

ಹನುಮಾನ್ ಚಾಲೀಸಾವು ತನ್ನ ಭಕ್ತರಿಗೆ ಅನಾನುಕೂಲತೆ ಹಾಗೂ ದುಃಖದ ಸಂದರ್ಭಗಳಲ್ಲಿ, ದುಷ್ಟಶಕ್ತಿಗಳು ಮತ್ತು ನಕಾರಾತ್ಮಕತೆಯನ್ನು ದೂರವಿಡಲು ಸಹಾಯ ಮಾಡುವಂತೆ ಹನುಮಂತನನ್ನು ಪ್ರಚೋಧಿಸುತ್ತದೆ.

PC: Pexel

Lucky Work: ಅದೃಷ್ಟಶಾಲಿಯಾಗಬೇಕೆಂದು ಬಯಸಿದರೆ ಈ ಕೆಲಸಗಳನ್ನು ತಪ್ಪದೇ ಮಾಡಿ..!

ದುಃಸ್ವಪ್ನಗಳೇ ಬೀಳದು

ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಹನುಮಾನ್ ಚಾಲೀಸಾವನ್ನು ಇಟ್ಟುಕೊಂಡು ಮಲಗುವುದರಿಂದ ನಿಮಗೆ ಯಾವುದೇ ರೀತಿಯ ದುಃಸ್ವಪ್ನಗಳು ಬೀಳುವುದಿಲ್ಲ. ಇದು ನಿಮ್ಮ ಉಸಿರಾಟದ ಸಮಸ್ಯೆಯನ್ನು ದೂರಾಗಿಸುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಶ್ರಾಂತಿ ಪಡೆಯಲು ನೀವು ಹನುಮಾನ್‌ ಚಾಲೀಸಾವನ್ನು ಪಠಿಸುವುದು ಉತ್ತಮ.

PC: Pexel

Garuda Purana: ಸತ್ತ ವ್ಯಕ್ತಿಯ ಈ 3 ವಸ್ತುಗಳನ್ನು ನಾವು ಬಳಸಲೇಬಾರದು ಎನ್ನುತ್ತೆ ಗರು

ಪಾಪ - ಕರ್ಮ ದೂರಾಗುವುದು

ಹನುಮಾನ್‌ ಚಾಲೀಸಾ ಪಠಿಸುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅವುಗಳಲ್ಲಿ ಪ್ರಮುಖವಾದುವೆಂದರೆ, ಹನುಮಾನ್‌ ಚಾಲೀಸಾ ಪಠಿಸುವುದರಿಂದ ನಮ್ಮ ಪಾಪ - ಕರ್ಮಗಳು ಕಳೆಯುತ್ತದೆ. ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡಿದ ತಪ್ಪುಗಳಿಂದ ಎದುರಿಸಬೇಕಾದ ಸಮಸ್ಯೆಗಳನ್ನು ತಡೆಯುತ್ತದೆ. ಪಾಪಗಳಿಂದ ಮುಕ್ತಿ ಪಡೆಯಲು ನಿತ್ಯ ಹನುಮಾನ್‌ ಚಾಲೀಸಾವನ್ನು ಪಠಿಸಿ.

Signs of Bad Time : ಇವೆಲ್ಲಾ ಭವಿಷ್ಯದ ಕೆಟ್ಟ ಸಮಯದ ಸೂಚಕಗಳಂತೆ...!

ಒತ್ತಡದಿಂದ ಮುಕ್ತಿ

ಪ್ರತಿನಿತ್ಯ ಮುಂಜಾನೆ ಹನುಮಾನ್‌ ಚಾಲೀಸಾವನ್ನು ಪಠಿಸಿದರೆ ಒತ್ತಡದಿಂದ ಮುಕ್ತಿ ದೊರೆಯುವುದು ಮತ್ತು ದಿನವನ್ನು ಹೊಸದಾಗಿ ಪ್ರಾರಂಭಿಸಲು ಸಹಕಾರಿಯಾಗಿದೆ. ಹಾಗೂ ಇದು ನಿಮ್ಮ ಜೀವನದಲ್ಲಿ ಶಾಂತಿಯನ್ನು ತರುತ್ತದೆ. ಒತ್ತಡ ಮುಕ್ತ ಜೀವನಕ್ಕಾಗಿ ನೀವು ನಿತ್ಯ ಒಮ್ಮೆಯಾದರೂ ಅಥವಾ ವಾರದಲ್ಲಿ ಒಮ್ಮೆಯಾದರೂ ಹನುಮಾನ್‌ ಚಾಲೀಸಾವನ್ನು ಪಠಿಸುವುದು ಉತ್ತಮ.

PC: Pexel

Morning Mantra: ಪ್ರತಿದಿನ ಮುಂಜಾನೆ ನೀವು ಪಠಿಸಬೇಕಾದ 4 ವೈದಿಕ ಮಂತ್ರಗಳಿವು..!

ಜ್ಞಾನ ಮತ್ತು ಶಕ್ತಿ

ಹನುಮಾನ್ ಚಾಲೀಸಾದ ಉನ್ನತ ಪಠಣದಿಂದ ಉಂಟಾಗುವ ಕಂಪನಗಳು ನಿಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿಯ ಸೆಳವನ್ನು ಸೃಷ್ಟಿಸುತ್ತವೆ. ಈ ಶಕ್ತಿಯು ದಿನವಿಡೀ ನಿಮ್ಮನ್ನು ಚೈತನ್ಯದಿಂದ ತುಂಬುತ್ತದೆ. ಇದು ಸೋಮಾರಿತನ ಮತ್ತು ಆಲಸ್ಯವನ್ನು ನಿವಾರಿಸುತ್ತದೆ. ಇದಲ್ಲದೆ, ತಲೆನೋವು, ಎದೆ ನೋವು ಮುಂತಾದ ಯಾವುದೇ ದೈಹಿಕ ಕಾಯಿಲೆಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.

PC: Pexel

Mangalsutra: ವಿವಾಹಿತ ಮಹಿಳೆಯೇಕೆ ಮಂಗಳ ಸೂತ್ರ ಧರಿಸಬೇಕು..? ಇಲ್ಲಿದೆ ಮಹತ್ವ, ಪ್ರಯೋಜನ..!

ಏಕತೆಯನ್ನು ಉತ್ತೇಜಿಸುವುದು

ಹನುಮಾನ್ ಚಾಲೀಸಾದ ನಿಯಮಿತ ಮತ್ತು ಶ್ರದ್ಧಾಪೂರ್ವಕ ಪಠಣದಿಂದ ಕುಟುಂಬದಲ್ಲಿನ ಎಲ್ಲಾ ಭಿನ್ನಾಭಿಪ್ರಾಯಗಳು, ಜಗಳಗಳು ಮತ್ತು ವಾದಗಳು ಕಣ್ಮರೆಯಾಗುತ್ತವೆ. ಇದು ಕುಟುಂಬದಲ್ಲಿ ಒಗ್ಗಟ್ಟು, ಏಕತೆ, ಸಂತೋಷ, ಶಾಂತಿ ಮತ್ತು ನೆಮ್ಮದಿಯನ್ನು ಉಂಟುಮಾಡುತ್ತದೆ. ಇದಲ್ಲದೆ, ಇದು ಕೌಟುಂಬಿಕ ಸಂಬಂಧಗಳನ್ನು ಬಲಪಡಿಸಲು ಮತ್ತು ನಿರ್ಮಿಸಲು ಸಹಾಯ ಮಾಡುತ್ತದೆ.

PC: Pexel

Hanuman Story: ಹನುಮಂತನು ಯಾವಾಗಲೂ ಯಾವುದರ ಮೇಲೆ ಸಂಚಾರ ಮಾಡುತ್ತಾನೆ..?

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ