ಆ್ಯಪ್ನಗರ

2021 ಮೋಕ್ಷದ ಏಕಾದಶಿ: ಈ ಎಲ್ಲಾ ಪರಿಹಾರ ಕ್ರಮಗಳು ನಿಮ್ಮನ್ನು ಪಾಪದಿಂದ ಮುಕ್ತಗೊಳಿಸುವುದು..!

ಈ ಬಾರಿ ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿ ಒಂದೇ ದಿನ ಬಂದಿರುವುದರಿಂದ ಈ ಪರಿಹಾರ ಕ್ರಮಗಳನ್ನು ತೆಗೆದುಕೊಂಡರೆ ಜೀವನದಲ್ಲಿನ ಸಮಸ್ಯೆಗಳೆಲ್ಲವೂ ದೂರಾಗಿ ಜೀವನವು ಸಮೃದ್ಧಿಯಿಂದ ಕೂಡಿರುತ್ತದೆ. ಹಾಗೂ ಅದೃಷ್ಟದ ಬೆಂಬಲವೂ ನಿಮಗೆ ಸಿಗುತ್ತದೆ. ಮೋಕ್ಷದ ಏಕಾದಶಿ ದಿನದಂದು ಯಾವ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು..?

Vijaya Karnataka Web 13 Dec 2021, 4:58 pm
ಡಿಸೆಂಬರ್ 14 ರಂದು ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿಯನ್ನು ಆಚರಿಸಲಾಗುವುದು. ಈ ಹಬ್ಬವನ್ನು ಪ್ರತಿ ವರ್ಷ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಪಾಪಗಳೆಲ್ಲ ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಬಾರಿ ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿ ಒಂದೇ ದಿನ ಬಂದಿದೆ. ಈ ದಿನವೇ ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೆಯ ಉಪದೇಶವನ್ನು ನೀಡಿದನು. ಈ ದಿನದ ಪ್ರಯೋಜನವನ್ನು ಪಡೆಯಲು ಶಾಸ್ತ್ರಗಳಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ, ಈ ಕ್ರಮಗಳನ್ನು ಮಾಡುವುದರಿಂದ ಜೀವನದಲ್ಲಿ ಸಮೃದ್ಧಿಯು ಉಳಿಯುತ್ತದೆ ಮತ್ತು ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆಯುವಿರಿ.. ಆ ಪರಿಹಾರ ಕ್ರಮಗಳಾವುವು ತಿಳಿಯೋಣ.
Vijaya Karnataka Web do these remedies on mokshada ekadashi it will remove your all sins
2021 ಮೋಕ್ಷದ ಏಕಾದಶಿ: ಈ ಎಲ್ಲಾ ಪರಿಹಾರ ಕ್ರಮಗಳು ನಿಮ್ಮನ್ನು ಪಾಪದಿಂದ ಮುಕ್ತಗೊಳಿಸುವುದು..!



​ಇಷ್ಟಾರ್ಥಗಳನ್ನು ಈಡೇರಿಸಲು ಈ ಪರಿಹಾರವನ್ನು ಮಾಡಿ

ಧರ್ಮಗ್ರಂಥಗಳ ಪ್ರಕಾರ, ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿಯನ್ನು ಒಂದೇ ದಿನ ಆಚರಿಸಲಾಗುವುದು. ಆದುದರಿಂದ ಈ ದಿನ 11ನೇ ವಿಶ್ವರೂಪ ದರ್ಶನ ಯೋಗ ಮತ್ತು 18ನೇ ಅಧ್ಯಾಯದ ಮೋಕ್ಷ ಸನ್ಯಾಸಿ ಯೋಗವನ್ನು ಪಠಿಸಬೇಕು. ಅವುಗಳನ್ನು ಪಠಿಸುವುದರಿಂದ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.

ಹೇಗಿದೆ ಗೊತ್ತಾ ಹೊಸ ಕಾಶಿ ವಿಶ್ವನಾಥ ದೇವಾಲಯ..? ಯಾವೆಲ್ಲಾ ಸೌಲಭ್ಯಗಳಿವೆ..?

​ಈ ಪರಿಹಾರವು ಎಲ್ಲಾ ಚಿಂತೆಗಳನ್ನು ನಿವಾರಿಸುತ್ತದೆ

ಭಗವಾನ್ ವಿಷ್ಣುವಿನ ಅವತಾರಗಳನ್ನು ಪೂಜಿಸುವುದು ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದು ಈ ಶುಭ ದಿನದಂದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ಜೀವನದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಮತ್ತು ವ್ಯಕ್ತಿಯು ತನ್ನ ಗುರಿಯತ್ತ ಗಮನಹರಿಸುತ್ತಾನೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಇದು ಕುಟುಂಬದ ಎಲ್ಲಾ ಚಿಂತೆಗಳನ್ನು ತೊಡೆದುಹಾಕುತ್ತದೆ ಮತ್ತು ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ.

2021 ವೈಕುಂಠ ಏಕಾದಶಿ: ಈ ದಿನದಂದು ವಿಷ್ಣುವಿನ ಯಾವ ಮಂತ್ರವನ್ನು ಪಠಿಸಬೇಕು..?

​ಈ ಪರಿಹಾರದಿಂದ, ಮನೆಯಲ್ಲಿ ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ

ಪುರಾಣಗಳ ಪ್ರಕಾರ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯುಳ್ಳವರು ಈ ಶುಭ ದಿನದಂದು ಶ್ರೀಮದ್ಭಗವದ್ಗೀತೆ ಪುಸ್ತಕವನ್ನು ದಾನ ಮಾಡಬೇಕು. ದಾನ ಮಾಡುವಾಗ ಯಾವಾಗಲೂ 5, 9, 11, 21 ಈ ರೀತಿ ಬೆಸ ಸಂಖ್ಯೆಗಳಲ್ಲಿ ಪುಸ್ತಕಗಳನ್ನು ದಾನ ಮಾಡಬೇಕು. ನಿಮ್ಮ ಬಳಿ ಹೆಚ್ಚು ಪುಸ್ತಕಗಳನ್ನು ದಾನ ಮಾಡಲು ಸಾಧ್ಯವಾಗದಿದ್ದರೆ, ನೀವು ಕೇವಲ ಒಂದು ಭಗವದ್ಗೀತೆ ಪುಸ್ತಕವನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಉಳಿಯುತ್ತದೆ ಮತ್ತು ಕುಟುಂಬ ಸದಸ್ಯರ ನಡುವೆ ಪ್ರೀತಿ ಉಳಿಯುತ್ತದೆ.

ಪೂಜಾ ವಿಧಿಗಳು2021 ಮೋಕ್ಷದ ಏಕಾದಶಿಯಂದೇ ಗೀತಾ ಜಯಂತಿ: ಪೂಜೆ ಮಾಡುವುದು ಹೇಗೆ..? ಇಲ್ಲಿದೆ

​ಈ ಉಪಾಯದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ

ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೆಯನ್ನು ಉಪದೇಶಿಸುತ್ತಿರುವ ಶ್ರೀಕೃಷ್ಣನ ಚಿತ್ರವನ್ನು ಮುಂದೆ ಇಟ್ಟುಕೊಂಡು ಅಥವಾ ಈ ದೇವರ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀಕೃಷ್ಣನನ್ನು ಪೂಜಿಸಿ. ದೇವರ ಪೂಜೆಯ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ಅನ್ನದಾನ ಮಾಡಬೇಕು. ಹೀಗೆ ಮಾಡುವುದರಿಂದ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಅಲ್ಲದೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

ಪೂಜಾ ವಿಧಿಗಳುಸೋಮವಾರ ಶಿವನನ್ನು ಹೀಗೆ ಪೂಜಿಸಿದರೆ ಬಹುಬೇಗ ಒಲಿಯುತ್ತಾನೆ..!

​ಅದೃಷ್ಟವನ್ನು ಪಡೆಯಲು

ಮೋಕ್ಷದ ಏಕಾದಶಿ ಮತ್ತು ಗೀತಾ ಜಯಂತಿಯ ದಿನದಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗದಂತಹ ಅತ್ಯಂತ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, ಆದ್ದರಿಂದ ಈ ದಿನದ ಉಪವಾಸವನ್ನು ಅತ್ಯಂತ ಪುಣ್ಯವೆಂದು ಪರಿಗಣಿಸಲಾಗಿದೆ. ಇದರಿಂದ ನಿಮ್ಮ ಜೀವನವು ಸುಖಕರವಾಗಿರುವುದು ಮಾತ್ರವಲ್ಲದೆ, ಮರಣಾನಂತರದ ಜೀವನದಲ್ಲಿ ತೊಂದರೆಯಲ್ಲಿರುವವರನ್ನು ಸಹ ನೀವು ಉಳಿಸುತ್ತೀರಿ. ಅದೇ ಸಮಯದಲ್ಲಿ, ನಿಮ್ಮ ಅದೃಷ್ಟವು ಹೆಚ್ಚಾಗುತ್ತದೆ ಮತ್ತು ನಿಮ್ಮ ಪ್ರಗತಿಗೆ ಯಾವುದೇ ಅಡಚಣೆಗಳು ಎದುರಾಗುವುದಿಲ್ಲ.

ಹಿಂದೂ ಧರ್ಮಈ 22 ಅಭ್ಯಾಸಗಳಿದ್ದರೆ ಶನಿ ಎಂದಿಗೂ ತೊಂದರೆ ಕೊಡಲಾರ..! ನಿಮ್ಮಲ್ಲಿದೆಯೇ ಈ ಅಭ್ಯಾಸ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ