ಆ್ಯಪ್ನಗರ

2021 ಮಂತ್ರ: ರಾಶಿಗನುಗುಣವಾಗಿ ಯಾವ ಮಂತ್ರ ಪಠಿಸಿದರೆ ಶುಭ..!

2021 ರ ಹೊಸ ವರ್ಷದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸುವುದು ಹೇಗೆ ಗೊತ್ತಾ..? ಈ ವರ್ಷ ಯಾವ ರಾಶಿಯವರು ಯಾವ ಮಂತ್ರ ಪಠಿಸಿದರೆ ಶುಭ..? ಯಾವ ರಾಶಿಯವರು ಯಾವ ವಸ್ತುವನ್ನು ದಾನ ಮಾಡಿದರೆ ಶುಭ..? ನಿಮ್ಮ ರಾಶಿಗನುಗುಣವಾಗಿ ಈ ಮಂತ್ರವನ್ನೇ ಪಠಿಸಿ..

Vijaya Karnataka Web 23 Jan 2021, 9:36 am
2020 ವರ್ಷವನ್ನು ಕೆಲವರು ಸಂತೋಷದಿಂದ ಕಳೆದರೆ ಇನ್ನು ಕೆಲವರು ದುಃಖದಲ್ಲಿ, ಸಮಸ್ಯೆಗಳ ಸುಳಿಯಲ್ಲಿ ಕಳೆದಿದ್ದಾರೆ. ಇನ್ನೂ ಕೆಲವರು ಕೊರೊನಾ ಮಹಾಮಾರಿಯ ಭಯದಲ್ಲೇ ಕಳೆದಿದ್ದಾರೆ. ನಾವೀಗ 2021 ರ ನೂತನ ವರ್ಷದಲ್ಲಿದ್ದೇವೆ. ಸಮಸ್ಯೆಗಳೆಲ್ಲವೂ ದೂರಾಗುವುದು, ದುಃಖಗಳೆಲ್ಲವೂ ದೂರಾಗುವುದು ಎನ್ನುವ ಹೊಸ ಆಶಾಕಿರಣವನ್ನುಟ್ಟುಕೊಂಡು 2021ನ್ನು ಸ್ವಾಗತಿಸಿದ್ದೇವೆ. ಎಷ್ಟೇ ಹೊಸ ವರ್ಷ ಬಂದರೂ ಸಮಸ್ಯೆಗಳು ಮನುಷ್ಯನನ್ನು ಬಿಡಲಾರದು. 2021 ರಲ್ಲಿ ಅಂದರೆ ಈ ವರ್ಷ ಎದುರಾಗುವ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲು ರಾಶಿಗನುಗುಣವಾಗಿ ಈ ಮಂತ್ರವನ್ನು ಪಠಿಸಬಹುದು. ರಾಶಿಗನುಗುಣವಾಗಿ ಮಂತ್ರವನ್ನು ಪಠಿಸುವುದರೊಂದಿಗೆ ಈ ಪರಿಹಾರವನ್ನು ತೆಗೆದುಕೊಳ್ಳುವುದರಿಂದ ವರ್ಷದುದ್ದಕ್ಕೂ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸುತ್ತೀರಿ. 2021 ರಲ್ಲಿ ರಾಶಿಗನುಗುಣವಾಗಿ ಯಾವ ಮಂತ್ರವನ್ನು ಪಠಿಸಬೇಕು..? ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಬೇಕು..? ತಪ್ಪದೇ ತಿಳಿದುಕೊಳ್ಳಿ..
Vijaya Karnataka Web if you chant these mantra as per your zodiac sign in 2021 you will get wealth success and happiness
2021 ಮಂತ್ರ: ರಾಶಿಗನುಗುಣವಾಗಿ ಯಾವ ಮಂತ್ರ ಪಠಿಸಿದರೆ ಶುಭ..!


​ಮೇಷ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮೇಷ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಸೋಮವಾರ, ಶುದ್ಧ ಜೇನುತುಪ್ಪವನ್ನು ಮಣ್ಣಿನ ಪಾತ್ರೆಗಳಲ್ಲಿ ತುಂಬಿಸಿ ಟೆರೇಸ್ ಅಥವಾ ಬಾಲ್ಕನಿಯಲ್ಲಿ ಇರಿಸಿ. ಮಂಗಳವಾರ ಅದನ್ನು ಯಾಋಇಗೂ ತಿಳಿಯದಂತೆ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಹಾಕಿ ಬನ್ನಿ. ನಾಯಿಗಳಿಗೆ 43 ದಿನಗಳವರೆಗೆ ಸಿಹಿ ತಿಂಡಿಯನ್ನು ಅಥವಾ ಬಿಟ್ಕೇಟ್‌ನ್ನು ನೀಡಿ.

ಯಶಸ್ಸಿನ ಮಂತ್ರ - ಓಂ ಹ್ರೈಂ ಜೂಂ ಸಃ

ಗ್ರಹ ಮಂತ್ರ - ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ

ಶುಭ ಬಣ್ಣ - ಕೆಂಪು

ಶುಭ ಸಂಖ್ಯೆ - 9

ಶುಭ ಗ್ರಹಗಳು - ಸೂರ್ಯ, ಬೃಹಸ್ಪತಿ

ಶುಭ ದಿಕ್ಕು - ದಕ್ಷಿಣ

ಗಂಗಾ ಸ್ನಾನದಿಂದ ಸ್ವರ್ಗ ಸೇರುತ್ತಾರೆಯೇ..? ಶಿವ ಪಾರ್ವತಿಯ ಪರೀಕ್ಷೆಯಿದು..!

ವೃಷಭ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಷಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಕರಗಿದ ಬೆಣ್ಣೆ, ಮೊಸರು, ಪಾಯಸ, ಸುಗಂಧ ದ್ರವ್ಯ, ಬಟ್ಟೆ, ಬೆಳ್ಳಿ, ಅಕ್ಕಿ ಮುಂತಾದ ವಸ್ತುಗಳನ್ನು ಶುಕ್ರವಾರದಂದು ದಾನ ಮಾಡಬೇಕು

ಯಶಸ್ಸಿಗೆ ಮಂತ್ರ - ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ ಊರ್ವರೂಕಮೀವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌||

ಗ್ರಹ ಮಂತ್ರ - ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ|

ಶುಭ ಬಣ್ಣ - ಬಿಳಿ, ಹಸಿರು

ಶುಭ ಸಂಖ್ಯೆ - 5,6

ಶುಭ ಗ್ರಹಗಳು - ಶುಕ್ರ, ಬುಧ

ಶುಭ ದಿಕ್ಕು - ಪಶ್ಚಿಮ

ಸೂರ್ಯಾಸ್ತದಲ್ಲಿ ಸಾಲ ನೀಡಿದರೆ ಬರ್ಬಾತ್‌ ಆಗೋದು ಗ್ಯಾರೆಂಟಿ..! ಇವುಗಳನ್ನು ನೀಡದಿರಿ

ಮಿಥುನ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮಿಥುನ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ: ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ಧ್ವಜವನ್ನು ಸ್ಥಾಪಿಸಿ.

ಯಶಸ್ಸಿಗೆ ಮಂತ್ರ - ಓಂ ಏಂ ಶ್ರೀ ಕ್ಲೀಂ ಪ್ರಾಣ ವಲ್ಲಭಾಯ ಸೌಃ ಸೌಭಾಗ್ಯದಾಯ ಶ್ರೀ ಕೃಷ್ಣಾಯ ಸ್ವಾಹಾ|

ಗ್ರಹ ಮಂತ್ರ - ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ

ಶುಭ ಬಣ್ಣ - ಹಸಿರು, ಬಿಳಿ

ಶುಭ ಸಂಖ್ಯೆ - 5, 6

ಶುಭ ಗ್ರಹಗಳು - ಶುಕ್ರ, ಬುಧ

ಉತ್ತಮ ದಿಕ್ಕು - ಪಶ್ಚಿಮ

ಪ್ರತನಿತ್ಯ ತುಳಸಿಗೆ ತುಪ್ಪದ ದೀಪ ಬೆಳಗಿದರೆ ಸಂಪತ್ತು ಗ್ಯಾರೆಂಟಿ..! ಇಲ್ಲಿದೆ ಸರಳ ಉಪಾಯ

ಕಟಕ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕಟಕ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಹುಣ್ಣಿಮೆಯ ದಿನದಂದು ಪಾಯಸವನ್ನು ದಾನ ಮಾಡಬೇಕು. ಇದರಿಂದ ಲಕ್ಷ್ಮಿ ದೇವಿಯು ಸಂತಸಗೊಳ್ಳುವಳು.

ಯಶಸ್ಸಿನ ಮಂತ್ರ - ಓಂ ಹಸ್ತುಪಿಶಾಚಿಲಿಖೇ ಸ್ವಾಹಾ|

ಗ್ರಹ ಮಂತ್ರ - ಓಂ ಸೋಂ ಸೋಮಾಯ ನಮಃ |

ಶುಭ ಬಣ್ಣ - ಹಳದಿ, ಬಿಳಿ

ಶುಭ ಸಂಖ್ಯೆ - 1,3,6

ಶುಭ ಗ್ರಹಗಳು - ಶುಕ್ರ, ಮಂಗಳ, ಗುರು

ಶುಭ ದಿಕ್ಕು - ಈಶಾನ್ಯ

ಕೇಶಾಲಂಕಾರ ಮಾಡಿಕೊಳ್ಳುವುದು ಹೇಗೆ..? ತಲೆ ಕೂದಲನ್ನು ಬಿಚ್ಚಿ ಮಲಗದಿರಿ..!

​ಸಿಂಹ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಸಿಂಹ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಬೆಲ್ಲ, ಮಸೂರ, ಬಾದಾಮಿ, ಜೇನುತುಪ್ಪ, ತೆಂಗಿನಕಾಯಿ ಮತ್ತು ಸಾಸಿವೆ ಎಣ್ಣೆಯನ್ನು ಭಾನುವಾರ ದಾನ ಮಾಡಿ. ಇದರಿಂದ ಸೂರ್ಯ ದೇವನಿಗೆ ಸಂತೋಷವಾಗುತ್ತದೆ.

ಯಶಸ್ಸಿನ ಮಂತ್ರ - ಓಂ ಹ್ರೀಂ ಶ್ರೀಂ ಸೌಂಃ

ಗ್ರಹ ಮಂತ್ರ - ಓಂ ಹ್ರೀಂ ಘೃಣಿಃ ಸೂರ್ಯ ಆದಿತ್ಯಃ ಕ್ಲೀಂ ಓಂ

ಶುಭ ಬಣ್ಣ - ಕೆಂಪು, ಹಳದಿ, ಹಸಿರು

ಶುಭ ಸಂಖ್ಯೆ - 1, 5

ಶುಭ ಗ್ರಹಗಳು - ಬುಧ, ಸೂರ್ಯ

ಶುಭ ದಿಕ್ಕು - ಪೂರ್ವ, ಉತ್ತರ

ಅಪ್ಪಿತಪ್ಪಿಯೂ ರಾತ್ರಿ ಮೊಸರು ತಿನ್ನದಿರಿ..! ತಿಂದರೆ ನರಕ ತಪ್ಪಿದ್ದಲ್ಲ

ಕನ್ಯಾ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕನ್ಯಾ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ: ಕಾಗೆಗಳಿಗೆ ಸಿಹಿ ಅನ್ನ ಮತ್ತು ಹಸುವಿಗೆ ಹಸಿರು ಮೇವನ್ನು ನೀಡಿ. ಇದು ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತದೆ.

ಯಶಸ್ಸಿನ ಮಂತ್ರ - ಓಂ ಶ್ರೀಂ ಏಂ ಓಂ|

ಗ್ರಹ ಮಂತ್ರ- ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ|

ಶುಭ ಬಣ್ಣ - ಹಸಿರು, ಬಿಳಿ

ಶುಭ ಸಂಖ್ಯೆ - 5,6

ಶುಭ ಗ್ರಹ - ಶುಕ್ರ

ಉತ್ತಮ ದಿಕ್ಕು - ಪಶ್ಚಿಮ

ಈ ಮಂತ್ರ ಪಠಿಸಿದರೆ ಸಾಡೇಸಾತಿ ಶಾನಿದೋಷವೇ ಬಾರದು..! ಅಲ್ಲಗಳೆಯದಿರಿ

​ತುಲಾ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ತುಲಾ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಕೊಳಕು ಅಥವಾ ಹರಿದ ಹಳೆಯ ಬಟ್ಟೆಗಳನ್ನು ಧರಿಸಬೇಡಿ. ಸುಗಂಧ ದ್ರವ್ಯ ಅಥವಾ ಪರ್ಪ್ಯುಮ್‌ ಬಳಸಿ. ಇದರಿಂದ ಲಕ್ಷ್ಮಿ ದೇವಿ ಆಶೀರ್ವಾದ ನೀಡುವಳು.

ಯಶಸ್ಸಿನ ಮಂತ್ರ - ಓಂ ಏಂ ಹ್ರೀಂ ಶಿವ ಗೌರೀಮಯ, ಹ್ರೀಂ ಏಂ ಓಂಃ. ಇದು ಲಕ್ಷ್ಮಿ ಮಂತ್ರ.

ಗ್ರಹ ಮಂತ್ರ - ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ

ಶುಭ ಬಣ್ಣ- ಬಿಳಿ

ಶುಭ ಸಂಖ್ಯೆ - 6

ಶುಭ ಗ್ರಹಗಳು - ಬುಧ, ಶುಕ್ರ

ಶುಭ ದಿಕ್ಕು - ಪಶ್ಚಿಮ

ಭೀಷ್ಮ ಕರ್ಣನಿಗೆ ಯುದ್ಧ ಮಾಡಲು ಯಾಕೆ ಬಿಡಲಿಲ್ಲ..? ಇದು ಮಹಾಭಾರತದ ರಹಸ್ಯ..!

​ವೃಶ್ಚಿಕ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಶ್ಚಿಕ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ನಿರ್ಗತಿಕರಿಗೆ ಬಡವರಿಗೆ ಸಿಹಿ ಆಹಾರವನ್ನು ನೀಡಿ ಆದರೆ ನೀವು ಆ ಆಹಾರವನ್ನು ಸೇವಿಸಬೇಡಿ. ಜೇನುತುಪ್ಪ ಮತ್ತು ಸಿಂಧೂರವನ್ನು ಮಣ್ಣಿನ ಪಾತ್ರೆಗಳಲ್ಲಿ ಹಾಕಿ ಮನೆಯಲ್ಲಿ ಇಟ್ಟುಕೊಳ್ಳಿ. ಕೆಂಪು ಗುಲಾಬಿಯನ್ನು ನದಿಯಲ್ಲಿ ಹರಿಬಿಡಿ.

ಯಶಸ್ಸಿನ ಮಂತ್ರ - ಓಂ ನಾರಾಯಣಾಯ ಸುರಸಿಂಹಾಯ ನಮಃ

ಗ್ರಹ ಮಂತ್ರ - ಓಂ ಅಂ ಅಂಗಾರಕಾಯ ನಮಃ

ಶುಭ ಬಣ್ಣ - ಕೇಸರಿ

ಶುಭ ಸಂಖ್ಯೆ - 9

ಶುಭ ಗ್ರಹಗಳು - ಸೂರ್ಯ, ಮಂಗಳ

ಶುಭ ದಿಕ್ಕು - ದಕ್ಷಿಣ

ಮುಂಜಾನೆ ಈ ವಸ್ತುಗಳನ್ನು ನೋಡಿದರೆ ಅದೃಷ್ಟ..! ದಿನದ ಆರಂಭ ಹೀಗಿರಲಿ

ಧನು ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಧನು ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ದೇವಾಲಯದಲ್ಲಿ ಅರಳಿ ಗಿಡವನ್ನು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರು ಹಾಕಿ. ಅಲ್ಲದೆ, ಹಣೆಗೆ, ಹೊಕ್ಕುಳಿಗೆ ಮತ್ತು ನಾಲಿಗೆಗೆ ಕೇಸರಿ ಮಿಶ್ರ ನೀರನ್ನು ಹಚ್ಚಿ.

ಯಶಸ್ಸಿಗೆ ಮಂತ್ರ - ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ

ಗ್ರಹ ಮಂತ್ರ- ಓಂ ಏಂ ಶ್ರಿಂ ಬೃಹಸ್ಪತಯೇ ನಮಃ

ಶುಭ ಬಣ್ಣ - ಕೆಂಪು, ಹಳದಿ, ಚಿನ್ನ

ಶುಭ ಬಣ್ಣ - 3, 9

ಶುಭ ಗ್ರಹಗಳು - ಸೂರ್ಯ, ಚಂದ್ರ

ಶುಭ ದಿಕ್ಕು - ಈಶಾನ್ಯ

ಮಾಟ - ಮಂತ್ರಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ..? ಕಂಡುಹಿಡಿಯೋದು ಹೇಗೆ..?

ಮಕರ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮಕರ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಎರಡು ಬಾಳೆಗಿಡವನ್ನು ನೆಟ್ಟು ಅದನ್ನು ಪೋಷಣೆ ಮಾಡಿ. ಮತ್ತು ಯಾವಾಗಲೂ ಆ ಬಾಳೆಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿಡಿ. ಪ್ರತಿನಿತ್ಯ ಇದು ಸಾಧ್ಯವಾಗದಿದ್ದರೆ ಗುರುವಾರದಂದು ತಪ್ಪದೇ ಮಾಡಬೇಕು. ಇದರಿಂದ ವಿಷ್ಣು ನಿಮ್ಮನ್ನು ಆಶೀರ್ವದಿಸುತ್ತಾನೆ.

ಯಶಸ್ಸಿನ ಮಂತ್ರ - ಓಂ ಶ್ರೀಂ ಹ್ರೀಂ ಶ್ರೀಂ ನಮಃ |

ಗ್ರಹ ಮಂತ್ರ - ಓಂ ಶ್ರೀಂ ಪ್ರಾಂ ಪ್ರೀಂ ಪ್ರೌಂ ಸಃ ಶಃ ಶನೇಶ್ಚರಾಯ ನಮಃ|

ಶುಭ ಬಣ್ಣ - ಹಸಿರು, ಕಂದು

ಶುಭ ಸಂಖ್ಯೆ - 4, 6

ಶುಭ ಗ್ರಹಗಳು - ಶುಕ್ರ, ಬುಧ, ರಾಹು

ಶುಭ ದಿಕ್ಕು - ಪೂರ್ವ

ಈ ಕನಸುಗಳು ಬಿದ್ದರೆ ಬರ್ಬಾತ್‌ ಆಗೋದು ಗ್ಯಾರೆಂಟಿ..! ಅಶುಭ ಕನಸಿದು

​ಕುಂಭ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕುಂಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಯಾವಾಗಲೂ ಬೆಳ್ಳಿಯ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಸಾಸಿವೆ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಹಸುಗಳಿಗೆ ನೀಡಿ.

ಯಶಸ್ಸಿನ ಮಂತ್ರ - ಓಂ ಶ್ರೀಂ ಹ್ರೀಂ ಕ್ಲೀಂ ಹ್ರೀಂ ಶ್ರೀ ನಮಃ

ಗ್ರಹ ಮಂತ್ರ - ಓಂ ಶ್ರೀಂ ಪ್ರಾಂ ಪ್ರೀಂ ಪ್ರೌಂ ಸಃ ಶಂ ಶನೇಶ್ಚರಾಯ ನಮಃ

ಶುಭ ಬಣ್ಣ - ಹಸಿರು, ಬಿಳಿ

ಶುಭ ಸಂಖ್ಯೆ - 5, 6

ಶುಭ ಗ್ರಹಗಳು - ಬುಧ, ಶುಕ್ರ

ಶುಭ ದಿಕ್ಕು - ಈಶಾನ್ಯ

ಪತ್ನಿ ಸತ್ತಂತೆ ಕನಸು ಬಿದ್ದರೆ ಏನರ್ಥ ಗೊತ್ತಾ..? ನಿಮಗೂ ಈ ಕನಸು ಬೀಳಬಹುದು..!

ಮೀನ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮೀನ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ - ಹಣೆಗೆ, ಹೊಕ್ಕುಳಿಗೆ ಮತ್ತು ನಾಲಿಗೆಗೆ ಕೇಸರಿ ಮಿಶ್ರ ನೀರನ್ನು ಹಚ್ಚಿ ಮತ್ತು ಮಸೂರ ಬೇಳೆಯನ್ನು ದಾನ ಮಾಡಿ.

ಯಶಸ್ಸಿನ ಮಂತ್ರ- ಓಂ ಹ್ರೀಂ ಕ್ಲೀಂ ಶ್ರೀಂ ಶ್ರೀಯೇ ನಮಃ

ಗ್ರಹ ಮಂತ್ರ - ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ

ಶುಭ ಬಣ್ಣ - ಕೆಂಪು, ಗುಲಾಬಿ, ಮರೂನ್, ಹಳದಿ

ಶುಭ ಸಂಖ್ಯೆ - 3, 9

ಶುಭ ಗ್ರಹಗಳು - ಸೂರ್ಯ, ಚಂದ್ರ

ಶುಭ ದಿಕ್ಕು - ಈಶಾನ್ಯ

ಮಹಾಭಾರತ ಯುದ್ಧ ಸ್ಥಳದ ಮಣ್ಣು ಇಂದಿಗೂ ಕೆಂಪು..! ಯುದ್ಧ ಭೂಮಿ ಎಲ್ಲಿದೆ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ