ಆ್ಯಪ್ನಗರ

ಗುರುವಾರ ವಿಧೇಯರಾದರೆ ಲಕ್ಷ್ಮಿ, ಗುರು ಒಲಿಯುವರು..! ಗುರುವಾರ ಇದನ್ನೇ ಮಾಡಿ

ಗುರುವಾರವೆಂದರೆ ಭಗವಾನ್‌ ವಿಷ್ಣುವಿನ ದಿನ.. ಮತ್ತು ಗ್ರಹಗಳಲ್ಲಿ ಬೃಹಸ್ಪತಿ ಅಥವಾ ಗುರು ಗ್ರಹದ ದಿನ.. ಆದರೆ ನಾವೀದಿನ ಲಕ್ಷ್ಮಿಯನ್ನು ಪೂಜಿಸುವುದರ ಪ್ರಯೋಜನವೇನು..? ಇವುಗಳನ್ನು ಗುರುವಾರ ಮಾಡದಿರಿ..

Vijaya Karnataka Web 27 Jan 2021, 3:12 pm
ದೇವಗುರು ಬೃಹಸ್ಪತಿ ಅಥವಾ ಗುರುವು ಜ್ಞಾನವನ್ನು ನೀಡುವ ಶಿಕ್ಷಕ. ಹಳದಿ ಬಣ್ಣವು ಬೃಹಸ್ಪತಿಗೆ ಬಲು ಪ್ರಿಯವಾದ ಬಣ್ಣವಾಗಿದೆ. ಲಕ್ಷ್ಮಿ ದೇವಿಗೂ ಕೂಡ ಹಳದಿ ಬಣ್ಣವೆಂದರೆ ಅತ್ಯಂತ ಪ್ರಿಯ. ಜ್ಞಾನದ ಸಂವಹನವು ಯಾವ ಸ್ಥಳದಲ್ಲಿ ಹಚ್ಚಾಗಿರುತ್ತದೆಯೋ ಆ ಸ್ಥಳದಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾಳೆ. ಪ್ರತೀ ಗುರುವಾರದಂದು ನೀವು ಹೀಗೆ ಮಾಡುವುದರಿಂದ ಚಿನ್ನದ ಧಾನ್ಯವನ್ನು ದಾನ ಮಾಡಿದಷ್ಟು ಪುಣ್ಯವನ್ನು ಪಡೆಯಬಹುದೆನ್ನುವ ಉಲ್ಲೇಖವಿದೆ. ಹಾಗಾದರೆ, ಶುಭ ಗುರುವಾರದಂದು ನಾವು ಏನು ಮಾಡಬೇಕು..? ಏನು ಮಾಡಬಾರದು..? ಲಕ್ಷ್ಮಿ ದೇವಿಯನ್ನು ಗುರುವಾರವೂ ಪೂಜಿಸುವುದರಿಂದಾಗುವ ಪ್ರಯೋಜನವೇನು..?
Vijaya Karnataka Web ಗುರುವಾರ ವಿಧೇಯರಾದರೆ ಲಕ್ಷ್ಮಿ, ಗುರು ಒಲಿಯುವರು..! ಗುರುವಾರ ಇದನ್ನೇ ಮಾಡಿ


ಗುರುವಾರ ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಒಲಿಯುವಳು:
ಪ್ರತೀ ಗುರುವಾರ ಮತ್ತು ಶುಕ್ರವಾರದ ದಿನದಂದು ತಪ್ಪದೇ ತುಪ್ಪದ ದೀಪವನ್ನು ಲಕ್ಷ್ಮಿ ಮೂರ್ತಿಯ ಬಳಿ ಅಥವಾ ಚಿತ್ರದ ಬಳಿ ಹಚ್ಚಿಬೇಕು. ನಂತರ ಪ್ರತಿ ಗುರುವಾರ ಬಾಳೆ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚಿಡಿ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕರುಣೆಯನ್ನು ತೋರುತ್ತಾಳೆ. ಗುರುವಾರದ ದಿನದಂದು ತುಪ್ಪ, ಹಳದಿ ಬಣ್ಣದ ಧಾನ್ಯ ಸೇರಿದಂತೆ ಇನ್ನಿತರ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಲಕ್ಷ್ಮಿಯ ಅನುಗ್ರಹವನ್ನು ನೀವು ಪಡೆದುಕೊಳ್ಳಬಹುದು.

ದೇವರ ಕೋಣೆ ದೊಡ್ಡದಾದರೆ ಏನಾಗುತ್ತೇ ಗೊತ್ತಾ..? ಪೂಜೆ ಕೋಣೆ ನಿಯಮಗಳಿವು

ಉದಾರ ಗುಣ ಮತ್ತು ವಿಧೇಯತೆಯಲ್ಲಿ ಲಕ್ಷ್ಮಿ ಇರುತ್ತಾಳೆ:

ಪ್ರತಿಯೊಬ್ಬ ವ್ಯಕ್ತಿಯ ಉದಾರ ಗುಣದಲ್ಲಿ ಮತ್ತು ವಿಧೇಯತೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಸ್ವಯಂಚಾಲಿತವಾಗಿ ಅಡಕವಾಗಿರುತ್ತದೆ. ಆದ್ದರಿಂದ ಈ ಗುಣಗಳನ್ನು ನಿಮ್ಮಲ್ಲಿ ಮೊದಲು ರೂಢಿಸಿಕೊಳ್ಳಿ. ಗುರುವಾರದಂದು, ನಿಮ್ಮ ಪ್ರೀತಿಪಾತ್ರರೊಂದಿಗೆ ಹಿರಿಯರನ್ನು ಗೌರವಿಸಿ. ದೇವಾಲಯಗಳಲ್ಲಿ ಹಳದಿ ವಸ್ತುಗಳನ್ನು ದೇವರಿಗೆ ಅರ್ಪಿಸಿ ಮತ್ತು ಹಳದಿ ಬಣ್ಣದ ವಸ್ತುಗಳನ್ನಾಗಲಿ ಅಥವಾ ಹಳದಿ ಬಣ್ಣದ ಆಹಾರವಾಗಲಿ ಉದಾರ ಮನೋಭಾವದಿಂದ ದಾನ ಮಾಡುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಿ.

ಮಂಗಳವಾರ ಹನುಮನ ಸಿಂಧೂರ ಹಚ್ಚಿದರೆ ಸರ್ವ ಸಮಸ್ಯೆಯೂ ದೂರ..!

ಇದರಿಂದ ಲಕ್ಷ್ಮಿಯ ಅನುಗ್ರಹ ಸಿಗುವುದು:
ಪ್ರತಿ ಗುರುವಾರದಂದು ಬೆಳಗ್ಗೆ ಮಾಡಿದ ರೊಟ್ಟಿಯನ್ನು ಯಾರು ತಿನ್ನದೇ ಮೊದಲು ಋಷಿಮುನಿಗಳಿಗೆ ಪ್ರಿಯವಾದ ಕಾಮಧೇನು ಎಂದರೆ ಹಸುವಿಗೆ ವಿಶೇಷವಾಗಿ ನೀಡಬೇಕು. ಈ ಸಣ್ಣ ಕ್ರಮಗಳಿಂದ ಲಕ್ಷ್ಮಿಯ ದೊಡ್ಡ ಅನುಗ್ರಹವು ನಿಮಗೆ ಪ್ರಾಪ್ತವಾಗುತ್ತದೆ. ಈ ಅಭ್ಯಾಸ ನಿಮ್ಮಲ್ಲಿ ಇಲ್ಲವಾದರೆ ಈ ವಾರದ ಗುರುವಾರದಿಂದಲೇ ಮನೆಯಲ್ಲಿ ರೊಟ್ಟಿಯನ್ನು ತಯಾರಿಸಿ ಅದನ್ನು ಯಾರಾದರೂ ತಿನ್ನುವ ಮುನ್ನ ಹಸುಗಳಿಗೆ ನೀಡಿ ನಂತರ ನೀವು ತಿನ್ನಬೇಕು.

ಹೇಗೆ ಕುಳಿತುಕೊಳ್ಳಬೇಕು ಗೊತ್ತಾ..? ಮರೆತೂ ಇವುಗಳತ್ತ ಕಾಲು ಚಾಚದಿರಿ..!

ಗುರುವಾರ ಈ ಕೆಲಸಗಳನ್ನು ಮಾಡದಿರಿ:

ಗುರುವಾರದಂದು ಕೂದಲು ಕತ್ತರಿಸುವುದಾಗಲಿ, ಯಂತ್ರಗಳ ಪ್ರಯೋಗ ಮುಂತಾದ ಶಸ್ತ್ರಾಸ್ತ್ರಗಳ ಬಳಕೆಯನ್ನು ತಪ್ಪಿಸಲು ಪ್ರಯತ್ನಿಸಿ. ಗುರು ಗ್ರಹವು ಯಂತ್ರ, ಶಸ್ತ್ರಾಸ್ತ್ರಗಳ ಪ್ರತಿನಿಧಿ. ಆದ್ದರಿಂದ ಉದ್ಯಮಿಗಳು ಗುರುವಾರದ ದಿನದಂದು ಯಂತ್ರೋಪಕರಣಗಳ ರಿಪೇರಿ ಕೆಲಸದಲ್ಲಿ ಕೈಹಾಕಬಾರದು. ಒಂದು ವೇಳೆ ಗುರುವಾರದಂದು ಯಂತ್ರೋಪಕರಣ ರಿಪೇರಿಯಲ್ಲಿ ತೊಡಗಿದರೆ ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆಯಿದೆ. ಮಹಾಲಕ್ಷ್ಮಿಯನ್ನು ಚಿನ್ನದ ದೇವತೆಯೆಂದು ಪರಿಗಣಿಸಲಾಗುತ್ತದೆ. ಚಿನ್ನವು ಗುರು ಗ್ರಹಕ್ಕೂ ಸಂಬಂಧಿಸಿದೆ. ಗುರುವಾರ ಚಿನ್ನ ಧರಿಸಿ ದಾನ ಮಾಡುವುದು ಅತ್ಯಂತ ಶುಭವಾಗಿರುತ್ತದೆ.

ತುಳಸಿದಳವನ್ನು ನೆಲದ ಮೇಲಿಟ್ಟರೆ ತಪ್ಪಿದ್ದಲ್ಲ ಕಂಟಕ..! ಭಗವದ್ಗೀತೆಯೇ ಸಾಕ್ಷಿ

ಗುರುವಾರದಮದು ನಾವು ಈ ಕ್ರಮಗಳನ್ನು ಅನುಸರಿಸುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಗುರುವಾರ ನಾವು ಹೀಗೆ ಮಾಡುವುದರಿಂದ ನಮ್ಮ ವ್ಯಾಪಾರ, ವ್ಯವಹಾರವು ಲಾಭದ ಮಾರ್ಗವನ್ನು ಹಿಡಿಯುತ್ತದೆ. ಎಲ್ಲಾ ಕೆಲಸಗಳನ್ನು ಲಾಭವನ್ನು ಪಡೆಯಬಹುದಾಗಿದೆ. ನೀವೂ ಗುರುವಾರದಂದು ಈ ವಿಶೇಷ ಕ್ರಮಗಳನ್ನು ಪಾಲಿಸಿ, ಲಕ್ಷ್ಮಿ ದೇವಿ ಆಶೀರ್ವಾದವನ್ನು ಪಡೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ