ಆ್ಯಪ್ನಗರ

ಮಾಘ ಪೂರ್ಣಿಮಾದಂದು ಸ್ನಾನ, ದಾನ ಮತ್ತು ತರ್ಪಣ ಮಾಡುವುದರ ಪ್ರಯೋಜನವೇನು..?

2022 ರ ಮಾಘ ಪೂರ್ಣಿಮಾದಂದು ರವಿದಾಸ ಜಯಂತಿ, ಶ್ರೀ ಲಲಿತ ಮತ್ತು ಶ್ರೀ ಭೈರವ ಜಯಂತಿಯನ್ನು ಆಚರಿಸಲಾಗುವುದು. ಮಾಘ ಪೂರ್ಣಿಮಾ ದಿನದಂದು ಸ್ನಾನ, ದಾನ ಮತ್ತು ತರ್ಪಣ ಮಾಡುವುದರ ಪ್ರಯೋಜನವೇನು..?

Agencies 15 Feb 2022, 4:02 pm

ಹೈಲೈಟ್ಸ್‌:

ಹೈಲೈಟ್ಸ್:
  • ಮಾಘ ಪೂರ್ಣಿಮಾದಂದು ಸ್ನಾನ ಮಾಡುವುದರ ಪ್ರಯೋಜನ
  • ಮಾಘ ಪೂರ್ಣಿಮಾದಂದು ದಾನ ಮಾಡುವುದರ ಪ್ರಯೋಜನ
  • ಮಾಘ ಪೂರ್ಣಿಮಾದಂದು ತರ್ಪಣ ನೀಡುವುದರ ಪ್ರಯೋಜನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web magh purnima 2022 special know the benefits of snan daan and tarpana
ಮಾಘ ಪೂರ್ಣಿಮಾದಂದು ಸ್ನಾನ, ದಾನ ಮತ್ತು ತರ್ಪಣ ಮಾಡುವುದರ ಪ್ರಯೋಜನವೇನು..?
2022 ರ ಫೆಬ್ರವರಿ 16 ರಂದು ಬುಧವಾರ ಮಾಘ ಪೂರ್ಣಿಮಾ ದಿನ. ಸಂತ ರವಿದಾಸ ಜಯಂತಿ, ಶ್ರೀ ಲಲಿತ ಮತ್ತು ಶ್ರೀ ಭೈರವ ಜಯಂತಿಯನ್ನು ಮಾಘ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಮಾಘ ಪೂರ್ಣಿಮೆಯ ದಿನದಂದು ಈ ಕೆಳಗಿನ 5 ಕೆಲಸಗಳನ್ನು ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಮತ್ತು ಧನ ಪ್ರಾಪ್ತಿಯಾಗುತ್ತದೆ. ಸ್ನಾನ ಮತ್ತು ದಾನದ ಮಹತ್ವವೇನು ತಿಳಿಯೋಣ.
ಮಂಗಳವಾರ ಹನುಮಂತನನ್ನು ಹೀಗೆ ಪೂಜಿಸಿದರೆ ಮಂಗಳ ದೋಷವೇ ಮಾಯ..!

ಸ್ನಾನ


ಹನುಮಂತನ ಆಶೀರ್ವಾದಕ್ಕಾಗಿ ಮಂಗಳವಾರ ಈ ಕೆಲಸ ಮಾಡಿ..! ಆದರೆ ಈ ತಪ್ಪಾಗದಿರಲಿ.
1. ಸ್ನಾನದ ಮಹತ್ವ:
ಮಾಘ ಪೂರ್ಣಿಮೆಯ ದಿನದಂದು ಎಲ್ಲಾ ದೇವರುಗಳು ಸ್ವರ್ಗದಿಂದ ಇಳಿದು ಪ್ರಯಾಗದಲ್ಲಿ ಗಂಗಾಸ್ನಾನ ಮಾಡುತ್ತಾರೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಮಾಘ ಮಾಸ ಅಥವಾ ಮಾಘ ಪೂರ್ಣಿಮೆಯಂದು ಸಂಗಮದಲ್ಲಿ ಈ ದಿನ ಸ್ನಾನ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಸಂಗಮವಿಲ್ಲದಿದ್ದರೆ ಗಂಗಾ, ಗೋದಾವರಿ, ಕಾವೇರಿ, ನರ್ಮದಾ, ಕೃಷ್ಣಾ, ಕ್ಷಿಪ್ರ, ಸಿಂಧು, ಸರಸ್ವತಿ, ಬ್ರಹ್ಮಪುತ್ರ ಮೊದಲಾದ ಪುಣ್ಯ ನದಿಗಳಲ್ಲಿ ಸ್ನಾನ ಮಾಡಬೇಕು.

ಪೂಜಾ ವಿಧಿಗಳುಮಾಘ ಪೂರ್ಣಿಮಾದಂದು ಈ 10 ತಪ್ಪುಗಳನ್ನು ಮಾಡಿದರೆ ನಷ್ಟ ಗ್ಯಾರೆಂಟಿ..!
2. ದಾನದ ಮಹತ್ವ:
ಈ ದಿನ ದಾನ-ದಕ್ಷಿಣೆ ಮಾಡುವುದರಿಂದ ಮೂವತ್ತೆರಡು ಪಟ್ಟು ಫಲ ಸಿಗುತ್ತದೆ. ಆದುದರಿಂದ ಮಾಘ ಪೂರ್ಣಿಮೆಯಲ್ಲದೆ ಬತ್ತಿಸೀ ಪೂರ್ಣಿಮಾ ಎಂದೂ ಕರೆಯುತ್ತಾರೆ.

ಪೂಜಾ ವಿಧಿಗಳು2022 ಮಾಘ ಪೂರ್ಣಿಮಾ: ಈ ಪರಿಹಾರ ಕ್ರಮಗಳಿಂದ ಐಶ್ವರ್ಯವಂತರಾಗೋದು ಗ್ಯಾರೆಂಟಿ.!

ದಾನ


ದೇವಾಲಯಗಳುಪ್ರೇಮಿಗಳು ಈ ದೇವಾಲಯಗಳಿಗೆ ಭೇಟಿ ನೀಡಿದರೆ ಇಷ್ಟಾರ್ಥಗಳೆಲ್ಲಾ ಈಡೇರುವುದು..!
3. ತರ್ಪಣದ ಮಹತ್ವ:
ಮಾಘ ಪೂರ್ಣಿಮೆಯಂದು ಗಂಗಾ ಮತ್ತು ಇತರ ಪವಿತ್ರ ನದಿಗಳು ಮತ್ತು ಸರೋವರಗಳ ದಡದಲ್ಲಿ ಸ್ನಾನ ಮಾಡಿದ ನಂತರ, ಪಿತೃ ತರ್ಪಣವನ್ನು ನೀಡಬೇಕು.

ಮಾಘ ಪೂರ್ಣಿಮಾದ ಸ್ನಾನ, ದಾನ ಮತ್ತು ತರ್ಪಣದ 5 ವಿಧದ ಪ್ರಯೋಜನಗಳು:
1. ಸ್ನಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ದೂರವಾಗುತ್ತವೆ.

ಹಬ್ಬಗಳು2022 ಮಾಘ ಪೂರ್ಣಿಮಾ: ಇಲ್ಲಿದೆ ಹುಣ್ಣಿಮೆ ಶುಭ ಮುಹೂರ್ತ, ಮಹತ್ವ ಮತ್ತು ಸ್ನಾನ
2. ದಾನ ಮಾಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ಮಾಯವಾಗುತ್ತವೆ ಮತ್ತು ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ.

3. ಪುರಾಣಗಳ ಪ್ರಕಾರ, ಮಾಘ ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣುವು ಸ್ವತಃ ಗಂಗಾಜಲದಲ್ಲಿ ನೆಲೆಸುತ್ತಾನೆ. ಈ ದಿನ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಇದರೊಂದಿಗೆ ಸಂಪತ್ತು ಮತ್ತು ಸಮೃದ್ಧಿ, ಲಕ್ಷ್ಮಿ, ಕೀರ್ತಿ, ಸಂತೋಷ, ಅದೃಷ್ಟ ಮತ್ತು ಉತ್ತಮ ಸಂತಾನವನ್ನು ತರುತ್ತದೆ.

ಪೂಜಾ ವಿಧಿಗಳು2022 ಪ್ರೇಮಿಗಳ ದಿನ: ಪ್ರೇಮ ಸಂಬಂಧದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಈ ದೇವರನ್ನು

ತರ್ಪಣ


ಪೂಜಾ ವಿಧಿಗಳುಸೋಮವಾರ ಹೀಗೆ ಮಾಡಿದರೆ ವೈವಾಹಿಕ ಸಮಸ್ಯೆಗಳಿಂದ ಹಿಡಿದು ಹಣದ ಸಮಸ್ಯೆಗಳೂ ದೂರ..!
4. ಹುಣ್ಣಿಮೆಯಂದು ಮಾತಾ ಲಕ್ಷ್ಮಿಯ ಮಂತ್ರಗಳನ್ನು ಜಪಿಸಬೇಕು. ಇದು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಈ ದಿನ ಲಕ್ಷ್ಮಿ ದೇವಿಗೆ ಹಳದಿ ಮತ್ತು ಕೆಂಪು ಬಣ್ಣದ ವಸ್ತುಗಳನ್ನು ಅರ್ಪಿಸಿದರೆ ಲಕ್ಷ್ಮಿಯು ಸಂತಸಪಡುತ್ತಾಳೆ.

5. ಮಾಘ ಪೂರ್ಣಿಮೆಯಂದು ಚಂದ್ರನಿಗೆ ಪಾಯಸವನ್ನು ಅರ್ಪಿಸಿದರೆ ಚಂದ್ರದೇವನ ಆಶೀರ್ವಾದ ಸಿಗುತ್ತದೆ.

ಹಬ್ಬಗಳುಇಂದು ಸೋಮ ಪ್ರದೋಷ: ಇಲ್ಲಿದೆ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಪೂಜೆ ಸಾಮಾಗ್ರಿ..!
ಮಾಘ ಪೂರ್ಣಿಮಾ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ, ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವುದರಿಂದ ಹಾಗೂ ತರ್ಪಣ ನೀಡುವುದರಿಂದ ಈ ಮೇಲಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ