ಆ್ಯಪ್ನಗರ

ಗುರುವಾರದ ವಿಶೇಷ: ಲಕ್ಷ್ಮಿ ಪೂಜೆ ಮಾಡಿದರೆ ಸಂತೋಷ, ಸಮೃದ್ಧಿ ಹುಡುಕಿ ಬರುವುದು..!

ಸಾಮಾನ್ಯವಾಗಿ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಆದರೆ, ಮಾರ್ಗಶೀರ್ಷ ಮಾಸದಲ್ಲಿ ಗುರುವಾರದಂದು ಕೂಡ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಮಾರ್ಗಶೀರ್ಷ ಗುರುವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಹೇಗೆ..? ಮಾರ್ಗಶೀರ್ಷ ಗುರುವಾರದ ಮಹತ್ವವನ್ನು ತಿಳಿದುಕೊಳ್ಳಿ..

Vijaya Karnataka Web 8 Dec 2021, 5:30 pm
ಕಾರ್ತಿಕ ಅಮಾವಾಸ್ಯೆ ಅಥವಾ ಶನಿ ಅಮಾವಾಸ್ಯೆಯ ನಂತರ 2021 ರ ಮಾರ್ಗಶೀರ್ಷ ಮಾಸವು ಪ್ರಾರಂಭವಾಗಿದೆ. ಇದನ್ನು ಅಘನ ಮಾಸ ಎಂದೂ ಕರೆಯುತ್ತಾರೆ. ಈ ತಿಂಗಳ ಮೊದಲ ಗುರುವಾರ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಈ ದಿನ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಘನ ಮಾಸದ ಪ್ರತಿ ಗುರುವಾರದಂದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಬನ್ನಿ ಲಕ್ಷ್ಮಿ ಪೂಜೆಯ ಮಹತ್ವವೇನು ಎಂದು ತಿಳಿಯೋಣ...
Vijaya Karnataka Web margashirsha thursday special lakshmi puja will bring you happiness and wealth
ಗುರುವಾರದ ವಿಶೇಷ: ಲಕ್ಷ್ಮಿ ಪೂಜೆ ಮಾಡಿದರೆ ಸಂತೋಷ, ಸಮೃದ್ಧಿ ಹುಡುಕಿ ಬರುವುದು..!


​ಹೀಗಿದ್ದರೆ ಲಕ್ಷ್ಮಿ ಬರುತ್ತಾಳೆ

ನಂಬಿಕೆಯ ಪ್ರಕಾರ, ಲಕ್ಷ್ಮಿ ದೇವಿಯು ಈ ತಿಂಗಳಲ್ಲಿ ಭೂಮಿಗೆ ಬರುತ್ತಾಳೆ ಎನ್ನುವ ನಂಬಿಕೆಯಿದೆ. ಪೌರಾಣಿಕ ನಂಬಿಕೆಯ ಪ್ರಕಾರ, ಈ ತಿಂಗಳ ಗುರುವಾರದಂದು, ಯಾವ ವ್ಯಕ್ತಿಯು ತಮ್ಮ ಮನೆಗಳಲ್ಲಿ ಸ್ವಚ್ಛತೆ, ಅಲಂಕಾರದ ಜೊತೆಗೆ ಶುದ್ಧತೆ, ಸಂತೋಷ ಮತ್ತು ಸಾತ್ವಿಕತೆಯ ವಾತಾವರಣವನ್ನು ಕಾಪಾಡಿಕೊಂಡಿರುತ್ತಾನೋ ಅವರ ಮನೆಗೆ ಲಕ್ಷ್ಮಿ ದೇವಿಯ ಆಗಮನವಾಗುತ್ತದೆ ಎನ್ನುವ ನಂಬಿಕೆಯಿದೆ.

ಹಣ ಗಳಿಸಲು, ಶ್ರೀಮಂತರಾಗಲು ಹೀಗೇ ಮಾಡಬೇಕು ಎನ್ನುತ್ತಾನೆ ಚಾಣಕ್ಯ..!

​ಗುರುವಾರ ಲಕ್ಷ್ಮಿ ಪೂಜೆ

ಹಿಂದೂ ಧರ್ಮದ ಈ ಪವಿತ್ರ ತಿಂಗಳಲ್ಲಿ ಗುರುವಾರಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಭಗವಾನ್ ವಿಷ್ಣು ಮತ್ತು ಲಕ್ಷ್ಮಿಯ ಆರಾಧನೆಯು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ತಿಂಗಳು 4 ಗುರುವಾರಗಳನ್ನು ಹೊಂದಿದ್ದು, ಪ್ರತೀ ಗುರುವಾರದಲ್ಲೂ ಲಕ್ಷ್ಮಿ ದೇವಿಯನ್ನು ಆರಾಧಿಸಲಾಗುತ್ತದೆ.

ಮಣ್ಣಿನ ಗಣಪತಿಯನ್ನು ಯಾವ ದಿಕ್ಕಿನಲ್ಲಿಡಬೇಕು..? ಯಾವ ಗಣಪತಿಯನ್ನು ಪೂಜಿಸಬೇಕು..?

​ಬುಧವಾರದಿಂದಲೇ ಹೀಗೆ ಮಾಡಬೇಕು

ಕೆಲವೊಂದು ನಂಬಿಕೆಯ ಪ್ರಕಾರ, ಬುಧವಾರದಿಂದಲೇ ತಮ್ಮ ಮನೆಯ ಅಂಗಳನ್ನು ಮತ್ತು ಬಾಗಿಲನ್ನು ರಂಗೋಲಿಯಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಸಿದ್ಧತೆಗಳನ್ನು ಮಾಡಲಾಗುತ್ತದೆ. ಪೂಜಾ ಸ್ಥಳದವರೆಗೆ ದೇವಿಯ ಪಾದ ಚಿಹ್ನೆಗಳನ್ನು ಮಾಡಿದ ನಂತರ, ಅವುಗಳನ್ನು ಗುರುವಾರ ಮುಂಜಾನೆ ಆವಾಹನೆ ಮಾಡಲಾಗುತ್ತದೆ.

ಪೂಜಾ ವಿಧಿಗಳುಬುಧವಾರದ ವಿಶೇಷ: ವಿಘ್ನಹರ್ತ ಗಣಪತಿಯ ಆಶೀರ್ವಾದಕ್ಕಾಗಿ ಇವುಗಳನ್ನು ಮಾಡಲೇಬೇಕು..!

​ಲಕ್ಷ್ಮಿ ದೇವಿಗೆ ಭೋಗ

ಗುರುವಾರದಂದು, ಲಕ್ಷ್ಮಿ ದೇವಿಯನ್ನು ಸರಿಯಾಗಿ ಪೂಜಿಸಿ ಮತ್ತು ಆರತಿ ಮಾಡಿದ ನಂತರ, ಅವಳಿಗೆ ಭೋಗವನ್ನು ಅರ್ಪಿಸಿ. ಲಕ್ಷ್ಮಿ ದೇವಿಗೆ ಪ್ರಿಯವಾದ ಭೋಗವನ್ನು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿ ನೀಡಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಕೂರಿಸುವ ಪೀಠವನ್ನು ಮಾವು, ನೆಲ್ಲಿಕಾಯಿ ಮತ್ತು ಭತ್ತದ ಮಾಲೆಗಳಿಂದ ಅಲಂಕರಿಸಲಾಗುತ್ತದೆ ಮತ್ತು ಕಲಶವನ್ನು ಸ್ಥಾಪಿಸಿದ ನಂತರ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ವಿಶೇಷ ಭಕ್ಷ್ಯಗಳನ್ನು ಆಕೆಗೆ ಅರ್ಪಿಸಲಾಗುತ್ತದೆ.

ಪೂಜಾ ವಿಧಿಗಳುಇಂದು ವಿವಾಹ ಪಂಚಮಿ: ರಾಶಿಗನುಗುಣವಾಗಿ ರಾಮ ಸೀತೆಯನ್ನು ಪೂಜಿಸುವುದು

​ಲಕ್ಷ್ಮಿ ದೇವಿಯು ಇವುಗಳನ್ನು ಕರುಣಿಸುವಳು

ಲಕ್ಷ್ಮಿ ದೇವಿಯನ್ನು ಈ ರೀತಿ ಸ್ವಾಗತಿಸುವ ಮೂಲಕ ಮತ್ತು ವಿಧಿ - ವಿಧಾನಗಳ ಪ್ರಕಾರ ಅವಳನ್ನು ಪೂಜಿಸುವ ಮೂಲಕ, ಅವಳು ಭಕ್ತನ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ವರವನ್ನು ನೀಡುತ್ತಾಳೆ. ಲಕ್ಷ್ಮಿಯನ್ನು ಪೂಜಿಸುವುದರ ಜೊತೆಗೆ, ವಿಷ್ಣುವನ್ನು ಪೂಜಿಸುವುದು ಸಹ ಅಗತ್ಯವಾಗಿದೆ ಏಕೆಂದರೆ ಈ ಇಡೀ ತಿಂಗಳು ವಿಷ್ಣುವಿನ ಭಕ್ತಿ ಮತ್ತು ಆರಾಧನೆಗೆಂದೇ ಮೀಸಲಿರಿಸಲಾಗುತ್ತದೆ.

ಪೂಜಾ ವಿಧಿಗಳುಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ರಾಜಯೋಗ ಗ್ಯಾರೆಂಟಿ..! ಮಂಗಳವಾರ ಇದನ್ನೇ ಮಾಡಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ