ಆ್ಯಪ್ನಗರ

ಸೋಮವಾರದ ವಿಶೇಷ: ಶಿವನನ್ನು ಪೂಜಿಸುತ್ತಿದ್ದೀರಾ..? ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ..!

ಸೋಮವಾರ ಶಿವನನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸಿದರೆ ನಮ್ಮೆಲ್ಲಾ ಆಸೆಯನ್ನು ಪೂರೈಸುತ್ತಾನೆ ಎನ್ನುವ ನಂಬಿಕೆಯಿದೆ. ಸೋಮವಾರ ಮನೆಯ್ಲಲೇ ಶಿವನನ್ನು ಪೂಜಿಸುವುದು ಹೇಗೆ..? ಶಿವ ಪೂಜೆಯಲ್ಲಿ ನಾವು ಯಾವೆಲ್ಲಾ ವಿಷಯಗಳನ್ನು ಗಮದಲ್ಲಿಟ್ಟುಕೊಳ್ಳಬೇಕು..? ಸೋಮವಾರದ ಸರಳ ಪರಿಹಾರಗಳಿವು..!

Vijaya Karnataka Web 27 Sep 2021, 9:11 am
ಶಿವನ ಪೂಜೆಗೆ ಸೋಮವಾರವನ್ನು ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಭಕ್ತರು ಈ ದಿನ ಶಿವನನ್ನು ಪೂಜಿಸುತ್ತಾರೆ. ಇದನ್ನು ಮಾಡುವುದರಿಂದ ಶಿವನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಹೆಚ್ಚಿನ ಶಿವ ಭಕ್ತರು ಸೋಮವಾರ ಉಪವಾಸ ಮಾಡುತ್ತಾರೆ. ಈ ದಿನ ಶಿವನನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸಿದರೆ, ಶಂಕರನು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ಎನ್ನುವ ನಂಬಿಕೆಯಿದೆ. ಇನ್ನೂ ಜ್ಯೋತಿಷ್ಯದ ಪ್ರಕಾರ, ಸೋಮ ಅಂದರೆ ಚಂದ್ರನ ದಿನ ಎಂದು ಹೇಳಲಾಗಿದೆ. ಮತ್ತು ಶಿವನು ತನ್ನ ತಲೆಯ ಮೇಲೆ ಚಂದ್ರನನ್ನು ಹಿಡಿದಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ದಿನ ಬೆಳಿಗ್ಗೆ ಎದ್ದ ನಂತರ, ಶಿವ ದರ್ಶನವನ್ನು ಪಡೆದುಕೊಳ್ಳಬೇಕು. ನಂತರ ಶಿವ ಚಾಲೀಸಾ ಅಥವಾ ಶಿವಾಷ್ಟಕವನ್ನು ಪಠಿಸಬೇಕು. ಸೋಮವಾರದ ಶಿವ ಪೂಜೆ ಹೇಗೆ ತಿಳಿಯೋಣ...
Vijaya Karnataka Web monday special here are the important rules for worshipping lord shiva on monday
ಸೋಮವಾರದ ವಿಶೇಷ: ಶಿವನನ್ನು ಪೂಜಿಸುತ್ತಿದ್ದೀರಾ..? ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ..!


​ಸೋಮವಾರ ಈ ವಿಷಯಗಳನ್ನು ನೆನಪಿಡಿ

- ಕೇದಿಗೆ ಹೂವನ್ನು ಎಂದಿಗೂ ಶಿವನಿಗೆ ಅರ್ಪಿಸಬಾರದು.

- ಇದರ ಹೊರತಾಗಿ, ತುಳಸಿ ಎಲೆಗಳು ಅಥವಾ ಶಂಖದ ಚಿಪ್ಪುಗಳಿಂದ ಶಿವನಿಗೆ ನೀರನ್ನು ನೀಡಬೇಡಿ.

- ಶಿವನ ಪೂಜೆಯಲ್ಲಿ ಅರಿಶಿನ ಮತ್ತು ಕುಂಕುಮವನ್ನು ಅರ್ಪಿಸಬೇಡಿ.

ಹಿಂದೂ ಧರ್ಮಆಚಾರ್ಯ ಚಾಣಕ್ಯನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..! ಯಾರೀ ಚಾಣಕ್ಯ.?

- ಇದನ್ನು ಹೊರತುಪಡಿಸಿ, ಹಳೆಯ ಅಥವಾ ಈಗಾಗಲೇ ಪೂಜೆಯಲ್ಲಿ ಬಳಸಿದ ಹೂವುಗಳನ್ನು ಎಂದಿಗೂ ಭಗವಾನ್ ಶಂಕರನಿಗೆ ಅರ್ಪಿಸಬೇಡಿ.

ಗಣೇಶನು ಇಲಿಯ ಮೇಲೇಕೇ ಸವಾರಿ ಮಾಡುತ್ತಾನೆ..? ಕ್ರೌಂಚನ ಅಹಂ ಮುರಿದ ಗಣೇಶ..!

​ಭಗವಾನ್ ಶಿವನು ಇವುಗಳನ್ನು ಪ್ರೀತಿಸುತ್ತಾನೆ

- ಪೂಜೆಯ ಸಮಯದಲ್ಲಿ ಶಿವನಿಗೆ ಅನ್ನವನ್ನು ಅರ್ಪಿಸಿ.

- ಶಿವನಿಗೆ ಅರ್ಪಿಸುವ ಧಾನ್ಯಗಳು ತುಂಡಾಗಿರಬಾರದು ಅಥವಾ ಹಾಳಾಗಿರಬಾರದು.

- ಪೂಜಿಸುವಾಗ ಕಪ್ಪು ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ, ನೀವು ಹಸಿರು ಬಟ್ಟೆಗಳನ್ನು ಧರಿಸಿ ಪೂಜಿಸಬಹುದು.

- ಪೂಜೆಯ ಸಮಯದಲ್ಲಿ ನೀವು ಕೇಸರಿ, ಹಳದಿ, ಕೆಂಪು ಮತ್ತು ಬಿಳಿ ಬಟ್ಟೆಗಳನ್ನು ಧರಿಸಬಹುದು.

ಶನಿ ಹಿಮ್ಮುಖ ಚಲಿಸುವಾಗ ಯಾವ ಮಂತ್ರ ಪಠಿಸಬೇಕು..? ಇದರ ಪ್ರಯೋಜನವೇನು..?

​ಶಿವ ಪೂಜೆ ಮಾಡುವುದು ಹೇಗೆ..?

- ಪೂಜೆಯ ಸಮಯದಲ್ಲಿ ಭಗವಾನ್ ಭೋಲೆನಾಥನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ.

- ಇದಲ್ಲದೇ, ಸೋಮವಾರ ಬೆಳಿಗ್ಗೆ ಯಾವುದೇ ದೇವಸ್ಥಾನಕ್ಕೆ ಹೋಗಿ ಶಿವಲಿಂಗದ ಮೇಲೆ ತಾಮ್ರದ ಪಾತ್ರೆಯಿಂದ ಹಾಲನ್ನು ಅರ್ಪಿಸಿ.

ಹಿಂದೂ ಧರ್ಮಶನಿವಾರದ ವಿಶೇಷ: ಈ ತಪ್ಪುಗಳನ್ನು ಮಾಡದಿದ್ದರೆ ರಾಜಸುಖ..! ಇವುಗಳನ್ನು

- ಶಿವನ ಆಶೀರ್ವಾದ ಪಡೆಯಲು ಶಿವ ದೇವಸ್ಥಾನಕ್ಕೆ ಹೋಗಿ ''ಓಂ ಧನದಾಯ ಸ್ವಾಹಾ'' ಈ ಮಂತ್ರವನ್ನು ರುದ್ರಾಕ್ಷಿ ಮಾಲೆಯನ್ನು ಹಿಡಿದು ಸಂಪೂರ್ಣ 11 ಸುತ್ತು ಪಠಿಸಿ. ಈ ಮಂತ್ರವನ್ನು ಪಠಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.

ಹಿಂದೂ ಧರ್ಮಸತ್ತ ವ್ಯಕ್ತಿಯ ಬಟ್ಟೆಗಳನ್ನು ನಾವೇಕೇ ಧರಿಸಬಾರದು..? ಧರಿಸಿದರೆ ಏನಾಗುತ್ತೆ..?

​ಸೋಮವಾರ ಶಿವನ ಈ ಪರಿಹಾರಗಳನ್ನು ಮಾಡಿ

- ಸೋಮವಾರ ಶಿವನಿಗೆ ಶ್ರೀಗಂಧ, ಅಕ್ಷತೆ, ಬಿಲ್ವ ಎಲೆಗಳು, ಧಾತುರ ಅಥವಾ ಎಕ್ಕದ ಹೂವುಗಳು, ಹಾಲು, ಗಂಗಾಜಲವನ್ನು ಅರ್ಪಿಸಿ. ಭೋಲೆನಾಥನಿಗೆ ಇವುಗಳನ್ನು ಅರ್ಪಿಸುವ ಮೂಲಕ ಸಂತೋಷವಾಗುತ್ತದೆ ಎಂದು ನಂಬಲಾಗಿದೆ.

- ಸೋಮವಾರ ಶಿವನಿಗೆ ತುಪ್ಪ, ಸಕ್ಕರೆ, ಗೋಧಿ ಹಿಟ್ಟಿನಿಂದ ಮಾಡಿದ ನೈವೇದ್ಯವನ್ನು ಅರ್ಪಿಸಿದ ನಂತರ, ಧೂಪ, ದೀಪದೊಂದಿಗೆ ಆರತಿ ಮಾಡುವ ಮೂಲಕ ಎಲ್ಲರಿಗೂ ಪ್ರಸಾದವನ್ನು ಅರ್ಪಿಸಿ.

ಮೂಢನಂಬಿಕೆವಿಶ್ವ ಕನಸಿನ ದಿನ 2021: ಈ ಕನಸುಗಳು ಬಿದ್ದರೆ ಧನಾಗಮನ, ಸಂಪತ್ತು ಹೆಚ್ಚಾಗೋದು ಖಂಡಿತ..!

- ಸೋಮವಾರದ ಉದ್ದಕ್ಕೂ ನಿಮ್ಮ ಮನಸ್ಸಿನಲ್ಲಿ 'ನಮಃ ಶಿವಾಯ ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುತ್ತಿರಿ.

- ಮನಸ್ಸಿನ ಆಸೆಗಳನ್ನು ಈಡೇರಿಸಲು ಮತ್ತು ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕಲು, ಸೋಮವಾರ ಸ್ನಾನ ಮಾಡಿದ ನಂತರವೇ ಶಿವನನ್ನು ಪೂಜಿಸಿ.

- ಸೋಮವಾರ, ಶಿವನ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ಭೋಲೇನಾಥನ ವಿಶೇಷ ಆಶೀರ್ವಾದ ದೊರೆಯುತ್ತದೆ ಎನ್ನುವ ನಂಬಿಕೆಯಿದೆ.

ಹಿಂದೂ ಧರ್ಮಈ ಕಾರಣಗಳಿಂದ ಆಯಸ್ಸು ಕಡಿಮೆಯಾಗುತ್ತದೆ ಎನ್ನುತ್ತಾನೆ ವಿದುರ..! ಆ ಕಾರಣಗಳಾವುವು..?

​ಶಿವನನ್ನು ಮೆಚ್ಚಿಸಲು ಶಿವ ಪುರಾಣದ ಪರಿಹಾರಗಳು

- ಶಿವನಿಗೆ ಅನ್ನವನ್ನು ಅರ್ಪಿಸುವುದರಿಂದ ಸಂಪತ್ತು ಬರುತ್ತದೆ.

- ಭೋಲೆನಾಥನಿಗೆ ಎಳ್ಳನ್ನು ಅರ್ಪಿಸುವುದರಿಂದ ಪಾಪಗಳು ನಾಶವಾಗುತ್ತವೆ.

- ಶಂಕರನಿಗೆ ಬಾರ್ಲಿಯನ್ನು ನೀಡುವುದು ಸಂತೋಷವನ್ನು ಹೆಚ್ಚಿಸುತ್ತದೆ.

- ಶಿವನಿಗೆ ಹೆಸರು ಬೇಳೆಯನ್ನು ಅರ್ಪಿಸುವುದರಿಂದ ಸಂತಾನ ವೃದ್ಧಿಯಾಗುತ್ತದೆ.

ಹಿಂದೂ ಧರ್ಮಈ 10 ವಿಷಯಗಳಲ್ಲಿ ಯಶಸ್ಸಿನ ರಹಸ್ಯ ಅಡಗಿದೆ ಎನ್ನುತ್ತಾನೆ ಚಾಣಕ್ಯ..! ಅವುಗಳು ಯಾವುವು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ