ಆ್ಯಪ್ನಗರ

ಸೋಮವಾರದ ವಿಶೇಷ: ಶಿವನಿಗೆ ಹಾಲನ್ನು ಅರ್ಪಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?

ಸೋಮವಾರದ ದಿನದಂದು ಹಾಲಿನಿಂದ ಪರಿಹಾರಗಳನ್ನು ಮಾಡಿದರೆ, ನೀವು ಹಲವಾರು ರೀತಿಯಲ್ಲಿ ಪ್ರಯೋಜನವನ್ನು ಪಡೆಯಬಹುದು. ನಾವು ಸೋಮವಾರದಂದು ಮಾಡಬೇಕಾದ ಸರಳ ಹಾಲಿನ ಪರಿಹಾರ ಕ್ರಮಗಳಾವುವು..?

Vijaya Karnataka Web 24 Jan 2022, 10:00 am
ಹಿಂದೂ ಧರ್ಮದಲ್ಲಿ, ಸೋಮವಾರದ ದಿನವನ್ನು ಭಗವಾನ್ ಶಿವನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಪ್ರಾಮಾಣಿಕ ಹೃದಯದಿಂದ ಪೂಜಿಸುವ ವ್ಯಕ್ತಿಯ ಪ್ರತಿಯೊಂದು ಕೆಲಸವು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಇದಲ್ಲದೇ ಶಿವ ಚಾಲೀಸಾ ಮತ್ತು ಶಿವ ಮಂತ್ರಕ್ಕೆ ಹೆಚ್ಚಿನ ಶಕ್ತಿಯಿದೆ ಎಂಬ ನಂಬಿಕೆಯೂ ಇದೆ. ಪ್ರತಿದಿನ ಮಂತ್ರಗಳನ್ನು ಪಠಿಸುವುದು ಮತ್ತು ಶಿವ ಚಾಲೀಸಾವನ್ನು ಪಠಿಸುವುದು ಬಹಳ ಫಲಪ್ರದವಾಗಿದೆ. ಶಿವನ ವಿಶೇಷ ಅನುಗ್ರಹದಿಂದ, ಅಂತಹ ವ್ಯಕ್ತಿಯು ಎಲ್ಲಾ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ. ವಿಶೇಷವಾಗಿ ಸೋಮವಾರದಂದು ಶಿವನಿಗೆ ಹಾಲು ಅಥವಾ ನೀರನ್ನು ಅರ್ಪಿಸಲಾಗುತ್ತದೆ. ಮತ್ತೊಂದೆಡೆ, ನೀವು ಈ ದಿನ ಹಾಲಿನಿಂದ ಪರಿಹಾರಗಳನ್ನು ಮಾಡಿದರೆ, ನೀವು ಹಲವಾರು ರೀತಿಯಲ್ಲಿ ಪ್ರಯೋಜನವನ್ನು ಪಡೆಯಬಹುದು. ಇಂದು ನಾವು ಸೋಮವಾರದಂದು ಮಾಡಬೇಕಾದ ಕೆಲವು ಸರಳ ಹಾಲಿನ ಪರಿಹಾರಗಳ ಬಗ್ಗೆ ಹೇಳಲಿದ್ದೇವೆ, ಅದರ ಬಗ್ಗೆ ತಿಳಿಯೋಣ…
Vijaya Karnataka Web monday special what are the benefits of offering milk to lord shiva
ಸೋಮವಾರದ ವಿಶೇಷ: ಶಿವನಿಗೆ ಹಾಲನ್ನು ಅರ್ಪಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?


​ಹಣದ ಸಮಸ್ಯೆಗೆ ಪರಿಹಾರ

ಹಣಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಇದಕ್ಕಾಗಿ ಪ್ರತಿ ಸೋಮವಾರ, ಶಿವಲಿಂಗಕ್ಕೆ ಹಾಲು ಮತ್ತು ನೀರಿನ ಮಿಶ್ರಣವನ್ನು ಅರ್ಪಿಸಿ. ಇದರೊಂದಿಗೆ ರುದ್ರಾಕ್ಷಿ ಜಪಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು "ಓಂ ಸೋಮೇಶ್ವರಾಯ ನಮಃ" ಎಂಬ ಶಿವ ಮಂತ್ರವನ್ನು 108 ಬಾರಿ ಜಪಿಸಿ.

ಉದ್ಯೋಗ, ವ್ಯಾಪಾರ ಮತ್ತು ಹಣಕಾಸಿನ ಸಮಸ್ಯೆಗಳ ನಿವಾರಣೆಗೆ ಶನಿವಾರ ಹೀಗೆ ಮಾಡಿ..!

​ವ್ಯಾಪಾರದ ಬೆಳವಣಿಗೆಗೆ ಪರಿಹಾರ

ಮನೆ ಮತ್ತು ವ್ಯಾಪಾರದ ಬೆಳವಣಿಗೆಗಾಗಿ, ನೀವು ಪ್ರತಿ ಹುಣ್ಣಿಮೆಯ ದಿನ ಹಾಲು ಮತ್ತು ನೀರಿನ ಮಿಶ್ರಣದಿಂದ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಪ್ರತಿ ಹುಣ್ಣಿಮೆಯ ದಿನ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ವ್ಯತ್ಯಾಸವನ್ನು ಕಾಣಲು ಪ್ರಾರಂಭಿಸುತ್ತೀರಿ.

ಶ್ರೀಮಂತರಾಗಬೇಕಾದರೆ ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾನೆ ಚಾಣಕ್ಯ..!

​ಗ್ರಹದೋಷಕ್ಕೆ ಪರಿಹಾರ

ಸೋಮವಾರದಂದು ಶಿವಲಿಂಗಕ್ಕೆ ಹಸಿ ಹಾಲನ್ನು ಅರ್ಪಿಸುವುದರಿಂದ ಜಾತಕದಲ್ಲಿನ ಗ್ರಹದೋಷಗಳಿಂದ ಮುಕ್ತಿ ಪಡೆಯಬಹುದು. ಸತತ 7 ಸೋಮವಾರಗಳ ಕಾಲ ನೀವು ಈ ಪರಿಹಾರವನ್ನು ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

ಹಿಂದೂ ಧರ್ಮಈ 4 ದೇವರನ್ನು ನೋಡಿದರೆ ಶನಿಗೆ ಎಲ್ಲಿಲ್ಲದ ಭಯ..! ಶನಿದೋಷ ನಿವಾರಣೆಗೆ ಇವರನ್ನು ಪೂಜಿಸಿ..

​ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ

ದಂಪತಿಗಳ ಜೀವನದಲ್ಲಿನ ಸಮಸ್ಯೆಗಳು ಅಥವಾ ಜಗಳಗಳನ್ನು ತೊಡೆದುಹಾಕಲು ಮತ್ತು ದಾಂಪತ್ಯ ಜೀವನದಲ್ಲಿ ಮಾಧುರ್ಯವನ್ನು ತರಲು ಸೋಮವಾರ ಶಿವ ಮತ್ತು ಪಾರ್ವತಿ ದೇವಿಗೆ ರುದ್ರಾಕ್ಷಿಯನ್ನು ಅರ್ಪಿಸಿ.

ಹಿಂದೂ ಧರ್ಮಶಿವನಿಗೆ ಪ್ರಿಯವಾದವರ ಅಂಗೈಯಲ್ಲಿ ಈ ರೇಖೆಗಳಿರುತ್ತವೆಯಂತೆ..!

​ದೃಷ್ಟಿ ದೋಷಕ್ಕೆ ಪರಿಹಾರ

ಭಾನುವಾರ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲನ್ನು ತಲೆಯ ಕೆಳಗೆ ಇಟ್ಟುಕೊಂಡು ಮಲಗಬೇಕು. ಇದರ ನಂತರ, ಮರುದಿನ ಬೆಳಿಗ್ಗೆ, ಆ ಹಾಲನ್ನು ಎಕ್ಕದ ಮರದ ಬೇರಿಗೆ ಅರ್ಪಿಸಿ. ಇದರೊಂದಿಗೆ, ಎಲ್ಲಾ ರೀತಿಯ ದೃಷ್ಟಿ ದೋಷಗಳನ್ನು ತೆಗೆದುಹಾಕಬಹುದು.

ಪೂಜಾ ವಿಧಿಗಳುಶಂಖ ಊದಿದರೆ ಯಾವೆಲ್ಲಾ ಗ್ರಹ ದೋಷಗಳು ದೂರಾಗುವುದು ಗೊತ್ತೇ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ