ಆ್ಯಪ್ನಗರ

ಶಿವನಿಗೆ ಈ ಅಭಿಷೇಕ ಮಾಡಿದರೆ ಜ್ವರವೇ ಬಾರದು..! ಮಧುಮೇಹ ನಿವಾರಣೆಗೆ ಈ ಅಭಿಷೇಕ ಮಾಡಿ..

ಸೋಮವಾರವೆಂದರೆ ಶಿವನ ದಿನ. ಪರಶಿವನಿಗೆ ಈ ದಿನ ಯಾವ ಅಭಿಷೇಕ ಮಾಡಬೇಕು..? ದೀರ್ಘಾಯುಷ್ಯಕ್ಕಾಗಿ ಶಿವಲಿಂಗಕ್ಕೆ ಯಾವ ಅಭಿಷೇಕ ಮಾಡಬೇಕು..? ಉತ್ತಮ ಆರೋಗ್ಯಕ್ಕಾಗಿ ಶಿವನನ್ನು ಪೂಜಿಸುವುದು ಹೇಗೆ..? ಶಿವ ಪೂಜೆಯ ಪ್ರಯೋಜನ ತಿಳಿಯಿರಿ..

Vijaya Karnataka Web 31 May 2021, 2:17 pm
ಹಿಂದೂ ಧರ್ಮದಲ್ಲಿ, ಸೋಮವಾರವನ್ನು ಭಗವಾನ್ ಶಿವನನ್ನು ಪೂಜಿಸುವ ದಿನ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸೋಮವಾರ ಶಿವನನ್ನು ನಿಜವಾದ ಮನಸ್ಸಿನಿಂದ ಪೂಜಿಸಿದರೆ, ಎಲ್ಲಾ ಕ್ಲೇಶಗಳನ್ನು ತೊಡೆದುಹಾಕುವ ಜೊತೆಗೆ ನಮ್ಮೆಲ್ಲಾ ಆಸೆಗಳು ಕೂಡ ಈಡೇರುವುದು. ಶಿವನನ್ನು ಮೆಚ್ಚಿಸಲು, ಸೋಮವಾರ ಬೆಳಗ್ಗೆ ಎದ್ದು ಸ್ನಾನ ಮಾಡಿ ಶುದ್ಧರಾದ ನಂತರ ಶಿವನನ್ನು ಪೂಜಿಸಬೇಕು. ಈ ಸಮಯದಲ್ಲಿ, ಭಗವಾನ್ ಶಂಕರನೊಂದಿಗೆ ಪಾರ್ವತಿ ದೇವಿಯನ್ನು ಮತ್ತು ನಂದಿಗೂ ಗಂಗಾ ನೀರನ್ನು ಅರ್ಪಿಸಿ. ಅದೇ ಸಮಯದಲ್ಲಿ, ಸೋಮವಾರ ಶಿವನಿಗೆ ಶ್ರೀಗಂಧ, ಅಕ್ಷತೆ, ಬಿಲ್ವ ಪತ್ರೆ, ಧಾತುರಾ ಅಥವಾ ಯಕ್ಕದ ಹೂಗಳನ್ನು ಅರ್ಪಿಸಿ.
Vijaya Karnataka Web these shiva abhishekam will remove your health problem and give you good health
ಶಿವನಿಗೆ ಈ ಅಭಿಷೇಕ ಮಾಡಿದರೆ ಜ್ವರವೇ ಬಾರದು..! ಮಧುಮೇಹ ನಿವಾರಣೆಗೆ ಈ ಅಭಿಷೇಕ ಮಾಡಿ..



​ಸೋಮವಾರ ಶಿವನಿಗೆ ಇವುಗಳನ್ನು ಅರ್ಪಿಸಿ

ಸೋಮವಾರದಂದು ಭಗವಾನ್‌ ಶಿವನಿಗೆ ಶುದ್ಧ ಹಸುವಿನ ತುಪ್ಪ, ಸಕ್ಕರೆ, ಗೋಧಿ ಹಿಟ್ಟಿನಿಂದ ಮಾಡಿದ ಪ್ರಸಾದವನ್ನು ಅರ್ಪಿಸಬೇಕು. ಇದರ ನಂತರ, ಧೂಪ, ದೀಪದೊಂದಿಗೆ ಶಿವನ ವಿಗ್ರಹಕ್ಕೆ ಅಥವಾ ಶಿವನ ಚಿತ್ರಕ್ಕೆ ಅಥವಾ ಶಿವಲಿಂಗಕ್ಕೆ ಆರತಿಯನ್ನು ಮಾಡಿ. ಇವುಗಳು ಭಗವಾನ್‌ ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಾಗಿದ್ದು, ಆತನಿಗೆ ಇವುಗಳನ್ನು ಅರ್ಪಿಸುವ ಮೂಲಕ ಬಹುಬೇಗ ಸಂತೋಷಗೊಳ್ಳುತ್ತಾನೆ ಮತ್ತು ಶುಭವಾಗುವಂತೆ ಹಾರೈಸುತ್ತಾನೆ.

ದೇವರ ಕೋಣೆ ಹೇಗಿರಬೇಕು..? ಯಾವ ದೇವರು ಯಾವ ಭಂಗಿಯಲ್ಲಿದ್ದರೆ ಶ್ರೇಯಸ್ಸು..?

ಸೋಮವಾರ ಮಹಾಮೃತುಂಜಯ ಮಂತ್ರವನ್ನು 108 ಬಾರಿ ಜಪಿಸುವುದರ ಮೂಲಕ ಶಿವನ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳಬಹುದು. ಅಲ್ಲದೆ, ಸೋಮವಾರ ಶಿವಲಿಂಗಕ್ಕೆ ಹಸುವಿನ ಶುದ್ಧ ಹಸಿ ಹಾಲನ್ನು ಅರ್ಪಿಸುವ ಮೂಲಕ, ಶಿವನ ಅನುಗ್ರಹವು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಮತ್ತು ಈ ದಿನ "ಓಂ ನಮಃ ಶಿವಾಯ".

ಸ್ವಸ್ತಿಕವನ್ನು ಈ ದಿಕ್ಕಿನಲ್ಲಿ ಹಾಕಿದರೆ ಲಾಭವೋ ಲಾಭ..! ಸ್ವಸ್ತಿಕದ ಪ್ರಯೋಜನವೇ ಅಪಾರ..

​ಕಾಯಿಲೆಗಳಿಂದ ಮುಕ್ತಿ ಪಡೆಯಲು ಶಿವ ಪೂಜೆ

ಪರಶಿವನನ್ನು ಪೂಜಿಸುವುದರಿಂದ ಅನಾರೋಗ್ಯದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಶಿವನನ್ನು ಪೂಜಿಸುವುದರಿಂದ ಅನೇಕ ಕಾಯಿಲೆಗಳಿಂದ ಮುಕ್ತಿಯನ್ನು ಹೊಂದಬಹುದು. ಆ ಪೂಜೆ ಕ್ರಮಗಳಾವುವು..?

ಸಾವಿನ ನಂತರ ಗರುಡ ಪುರಾಣವನ್ನೇಕೇ ಪಠಿಸಬೇಕು..? ಇಲ್ಲಿದೆ ಇದರ ಪ್ರಯೋಜನ..!

​ಕಾಯಿಲೆಯಿಂದ ಸಂಪೂರ್ಣ ವಿಮೋಚನೆ

ಯಾವುದೇ ಕಾಯಿಲೆಯಿಂದ ಸಂಪೂರ್ಣ ವಿಮೋಚನೆಗಾಗಿ, ಪ್ರತಿ ಸೋಮವಾರ, ಶಿವನನ್ನು ಪೂಜಿಸಿ ಆತನಿಗೆ ಕರ್ಪೂರದ ನೀರಿನಿಂದ ಅಭಿಷೇಕ ಮಾಡಬೇಕು. ಅಭಿಷೇಕ ಮಾಡುವಾಗ, ಮಹಾಮೃತ್ಯುಂಜಯ ಮಂತ್ರವನ್ನು ನಿರಂತರವಾಗಿ ಜಪಿಸಿ.

ಪತ್ನಿ ಮಾಡುವ ಈ ಕೆಲಸಕ್ಕೆ ಪತಿಯೇ ಶತ್ರು ಎನ್ನುತ್ತಾನೆ ಚಾಣಕ್ಯ..! ನೀವೂ ಪತ್ನಿಯ

​ನಿಮ್ಮೆಲ್ಲಾ ರೋಗವು ದೂರಾಗುವುದು

ರೋಗ ತಡೆಗಟ್ಟುವಿಕೆಗಾಗಿ, ಮಹಾಮೃತುಂಜಯ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಜಪಿಸುವಾಗ ಜೇನುತುಪ್ಪದೊಂದಿಗೆ ಶಿವನನ್ನು ಅಭಿಷೇಕ ಮಾಡಬೇಕು. ಇದು ನಿಮ್ಮೆಲ್ಲಾ ರೋಗವನ್ನು ನಿವಾರಿಸುತ್ತದೆ.

ಈ 4 ರಾಶಿಯವರೆಂದರೆ ಲಕ್ಷ್ಮಿಗೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?

​ಮಧುಮೇಹ ನಿವಾರಣೆಯಾಗುವುದು

ಭಗವಾನ್‌ ಶಿವನ ಮೃತ್ಯುಂಜಯ ಮಂತ್ರವಾದ "ಓಂ ಜೂಂ ಸಃ". ಈ ಮಂತ್ರವನ್ನು ಹತ್ತು ಸಾವಿರ ಬಾರಿ ಪಠಿಸಬೇಕು. ಈ ಮಂತ್ರವನ್ನು ಪಠಿಸುವಾಗ ಶಿವಲಿಂಗಕ್ಕೆ ತುಪ್ಪದ ಅಭಿಷೇಕವನ್ನು ಮಾಡಬೇಕು. ಇದರಿಂದ ಮಧುಮೇಹ ರೋಗವು ಆದಷ್ಟು ಬೇಗ ದೂರಾಗುವುದು.

ಮಂಚದ ಕೆಳಗೆ ಇವುಗಳನ್ನಿಟ್ಟು ಮಲಗಿದರೆ ಶನಿದೋಷ..! ಸುಖ ನಿದ್ರೆಗೆ ಇಲ್ಲಿವೆ ಸಲಹೆಗಳು..

​ದೀರ್ಘಾಯುಷ್ಯ ಪ್ರಾಪ್ತಿಯಾಗುವುದು

ಹಸುವಿನ ಶುದ್ಧ ತುಪ್ಪದಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ಲಾಭವನ್ನು ಪಡೆದುಕೊಳ್ಳಬಹುದು. ಮತ್ತು ಶಿವನಿಗೆ ಹಸಿರು ದುರ್ವಾವನ್ನು ಅರ್ಪಿಸುವುದರಿಂದ ಆ ವ್ಯಕ್ತಿಯು ದೀರ್ಘಾಯುಷ್ಯವನ್ನು ಪಡೆದುಕೊಳ್ಳುತ್ತಾನೆ.

ಈ 2 ಮಹಿಳೆಯರನ್ನು ನಂಬಬೇಡಿ ಎನ್ನುತ್ತಾನೆ ಚಾಣಕ್ಯ..! ನಿಮ್ಮ ಪತ್ನಿಗಿದೆಯೇ ಈ ಗುಣ..?

​ಜ್ವರ ದೂರಾಗುವುದು

ನೀವು ದೀರ್ಘಕಾಲದ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದರೆ, ಪಂಚಮುಖಿ ಶಿವಲಿಂಗಕ್ಕೆ ತೀರ್ಥ ಜಲದಿಂದ ಅಭಿಷೇಕವನ್ನು ಮಾಡಬೇಕು ಇದರಿಂದ ರೋಗ ಮುಕ್ತರಾಗಬಹುದು. ಜ್ವರದಿಂದ ಬಳಲುತ್ತಿದ್ದರೆ, ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿ. ಇದು ನಿಮ್ಮನ್ನು ಜ್ವರದಿಂದ ರಕ್ಷಿಸುತ್ತದೆ.

ಮನೆಗೆ ಬರುವಾಗ ಇವುಗಳನ್ನು ತನ್ನಿ..! ಇಲ್ಲವಾದರೆ, ದುರಾದೃಷ್ಟವಂತರಾಗುವಿರಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ