ಆ್ಯಪ್ನಗರ

ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡುವಾಗ ಈ ಸಂಗತಿಗಳನ್ನು ಮರೆಯದಿರಿ..!

ಶನಿವಾರ ಶನಿದೇವನನ್ನು ಆರಾಧಿಸುವ ದಿನ. ಆದರೆ ಶನಿಯನ್ನು ಬೇಡುವಾಗ ಶನಿಯನ್ನು ದೃಷ್ಟಿಯಿಟ್ಟು ನೋಡಬಾರದು, ಶನಿದೇವನ ಫೋಟೋ ಅಥವಾ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜಿಸಬಾರದು ಹೀಗೆ ಶನಿಯನ್ನು ಪೂಜಿಸುವ ಹಿಂದೆ ಹಲವಾರು ನಂಬಿಕೆಗಳು ಇವೆ.

Vijaya Karnataka Web 28 Feb 2020, 6:41 pm
ಹಿಂದೂ ಪುರಾಣ ಕಥೆಗಳು ಮನುಕುಲದ ಜೀವನಕ್ಕೆ ಸಾಕಷ್ಟು ಸಂಗತಿಗಳನ್ನು ತಿಳಿಸಿಕೊಡುತ್ತವೆ. ದೇವತೆಗಳ ಆರಾಧನೆ ಹಾಗೂ ಅವರ ಆಶೀರ್ವಾದದಿಂದ ಬದುಕು ಹೇಗೆ ವಿಭಿನ್ನತೆಯನ್ನು ಪಡೆದುಕೊಳ್ಳುವುದು? ಉತ್ತಮ ಅದೃಷ್ಟಗಳು ಹೇಗೆ ಯಶಸ್ಸನ್ನು ತಂದುಕೊಡುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತದೆ. ಜೀವನದ ಪ್ರಿತಿಯೊಂದು ಸಂಗತಿಯು ದೇವತೆಗಳು ಹಾಗೂ ಗ್ರಹಗತಿಗಳ ಅನುಸಾರವೇ ನಡೆಯುತ್ತದೆ. ಹಾಗಾಗಿ ನಮ್ಮ ಕುಂಡಲಿಯ ಪ್ರಕಾರ ಯಾವ ಗ್ರಹಗಳು ಹೇಗೆ ಪ್ರಭಾವ ಬೀರುತ್ತವೆ? ಎನ್ನುವುದನ್ನು ತಿಳಿದುಕೊಳ್ಳಬೇಕು.
Vijaya Karnataka Web how to worship lord shani


ಗ್ರಹಗಳು ದೇವತೆಗಳನ್ನು ಪ್ರತಿನಿಧಿಸುತ್ತವೆ. ಅದರಲ್ಲಿ ಶನಿ ಗ್ರಹವು ಮನುಷ್ಯನ ಕರ್ಮ ಫಲಗಳ ಆಧಾರದ ಮೇಲೆ ಪ್ರಭಾವವನ್ನು ಬೀರುತ್ತವೆ ಎಂದು ಹೇಳಲಾಗುವುದು. ಶನಿಯು ಅತ್ಯಂತ ಕಠಿಣ ಹಾಗೂ ನ್ಯಾಯ ಸಮ್ಮತವಾದ ದೇವ ಎಂದು ಹೇಳಲಾಗುವುದು. ಸೂರ್ಯನ ಪುತ್ರನಾದ ಶನಿಯನ್ನು ಮನೆಯಲ್ಲಿ ಪೂಜಿಸುವುದಿಲ್ಲ. ಕೇವಲ ಪ್ರಾರ್ಥನೆ ಹಾಗೂ ಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರ ಮೂಲಕ ಪೂಜೆ ಸಲ್ಲಿಸಲಾಗುವುದು. ಶನಿ ದೇವನಿಗಾಗಿ ವಿಶೇಷ ದೇಗುಲವನ್ನು ನಿರ್ಮಿಸಿ, ಅಲ್ಲಿಯೇ ಪೂಜಿಸಲಾಗುವುದು.

ಶನಿದೇವನ ನಿಧಾನಗತಿಯ ಚಲನೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಸ್ಟೋರಿ

ಶನಿಯ ಚಿತ್ರ ಅಥವಾ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ದುಃಖ ಹಾಗೂ ಸಾವು ಸಂಭವಿಸುವುದು ಎನ್ನುವ ಕಥೆಗಳು ಇರುವುದನ್ನು ಕಾಣಬಹುದು.ಅದೇ ಕೆಲವು ನಂಬಿಕೆ ಹಾಗೂ ಧರ್ಮಗಳ ಪ್ರಕಾರ ಶನಿ ದೇವರ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೆ ಕೆಲವು ನಿಯಮಗಳನ್ನು ಹಾಗೂ ಪೂಜಾ ವಿಧಾನವನ್ನು ಅನುಸರಿಸಬೇಕು. ಆಗ ಶನಿ ದೇವನು ಉತ್ತಮ ಅದೃಷ್ಟಗಳನ್ನು ಆಶೀರ್ವದಿಸುವನು. ಈ ಪೂಜಾ ವಿಧಾನವು ನಿಯಮಿತ ಪೂಜಾ ವಿಧಾನಕ್ಕೆ ವಿರುದ್ಧವಾಗಿರುತ್ತದೆ ಎಂದು ಸಹ ಹೇಳಲಾಗುವುದು.

ಶನಿಯ ಪೂಜೆ
ಕೆಲವು ಧರ್ಮಗ್ರಂಥಗಳು ಶನಿ ದೇವರ ಮುಂದೆ ನಿಲ್ಲುವಾಗ ಭಕ್ತಿ ಭಾವದಿಂದ ಪೂಜಿಸಬೇಕು. ಶನಿ ದೇವನಿಗೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಪೂಜೆಯನ್ನು ಸಲ್ಲಿಸಬೇಕು. ಶನಿ ದೇವನು ತನ್ನ ತಂದೆಯೊಂದಿಗೆ ಎಂದಿಗೂ ಬೆರೆಯಲಿಲ್ಲ. ಅವನ ಸಮ್ಮುಖದಲ್ಲಿ ಪೂಜೆಯನ್ನು ಪಡೆದುಕೊಳ್ಳುವುದನ್ನು ಇಷ್ಟಪಡುವುದಿಲ್ಲ ಎಂದು ಹೇಳಲಾಗುವುದು

ಕೈಯನ್ನು ಹಿಂದೆ ಕಟ್ಟಿ ನಮಸ್ಕರಿಸಬೇಕು
ಶನಿ ದೇವರ ಮುಂದೆ ನಿಂತು ಕೈ ಮುಗಿದು ನಮಸ್ಕರಿಸಬಾರದು. ಅದು ಶನಿ ದೇವರಿಗೆ ಇಷ್ಟವಾಗದು. ಶನಿ ದೇವರ ಚಿತ್ರ ಅಥವಾ ಮೂರ್ತಿಯ ಮುಂದೆ ನಿಲ್ಲುವಾಗ ಕೈಗಳನ್ನು ಹಿಂದೆ ಕಟ್ಟಿ ತಲೆಯನ್ನು ಬಾಗಿಸುವುದರ ಮೂಲಕ ಭಕ್ತಿ ಹಾಗೂ ನಮಸ್ಕಾರವನ್ನು ಮಾಡಬೇಕು ಎಂದು ಹೇಳಲಾಗುವುದು. ಆಗ ಶನಿಯು ಆಶೀರ್ವದಿಸುವನು. ಜೀವನದಲ್ಲಿ ಇರುವ ಅನೇಕ ಕಷ್ಟಗಳನ್ನು ದೂರ ತಳ್ಳುವನು.

ಸುಳ್ಳು ಭರವಸೆಯನ್ನು ನೀಡಬಾರದು
ವ್ಯಕ್ತಿಯು ಆದಷ್ಟು ಭಕ್ತಿ ಹಾಗೂ ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂದು ಶನಿ ಬಯಸುವನು. ಮಾನವೀಯತೆಯ ವಿರುದ್ಧವಾಗಿರುವ ಯಾವುದೇ ಸುಳ್ಳು ಮತ್ತು ಭರವಸೆಯನ್ನು ನೀಡಬಾರದು. ತನ್ನ ಸಮ್ಮುಖದಲ್ಲಿ ಸುಳ್ಳು ಹೇಳುವವರನ್ನು ಶನಿ ದೇವನು ಎಂದಿಗೂ ಕ್ಷಮಿಸುವುದಿಲ್ಲ. ಭಕ್ತರು ಶನಿಯ ದೋಷ ಹಾಗೂ ಕೆಟ್ಟ ದೃಷ್ಟಿಯಿಂದ ಪಾರಾಗಲು ಹನುಮಂತ ಮತ್ತು ಶನಿ ದೇವರನ್ನು ಪೂಜಿಸಬಹುದು ಎಂದು ಹೇಳಲಾಗುವುದು.

ಈ ಗುಣಗಳು ನಿಮ್ಮಲ್ಲಿದ್ದರೆ ಶನಿದೇವನು ಸದಾ ಒಳ್ಳೆಯದನ್ನೇ ಮಾಡುತ್ತಾನೆ..!

ಯಾವುದೇ ಪ್ರಮಾಣ ವಚನವನ್ನು ತೆಗೆದುಕೊಳ್ಳಬೇಡಿ
ಶನಿ ದೇವನ ಮುಂದೆ ಯಾವುದೇ ಪ್ರಮಾಣವಚನವನ್ನು ಕೈಗೊಳ್ಳಬಾರದು. ನಂತರ ನೀವು ಪ್ರಾಮಾಣಿಕವಾಗಿ ಅದನ್ನು ಅನುಸರಿಸದೆ ಇದ್ದರೆ ಶನಿ ದೇವನ ಕೋಪಕ್ಕೆ ಕಾರಣವಾಗಬೇಕಾಗುತ್ತದೆ. ಜೊತೆಗೆ ಅನೇಕ ಕಷ್ಟಗಳು ಎದುರಾಗುವ ಸಾಧ್ಯತೆಗಳು ಹೆಚ್ಚು.

ಪುರಾಣಗಳ ಪ್ರಕಾರ ಶನಿ ಮಂತ್ರ ಅಥವಾ ಶ್ಲೋಕವನ್ನು ಶನಿ ವಿಗ್ರಹದ ಮುಂದೆ ಪಠಿಸಬೇಕು. ಅದು ಅತ್ಯಂತ ಪ್ರಯೋಜನಕಾರಿ ಹಾಗೂ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಹನುಮಂತ ಮತ್ತು ಶನಿ ದೇವರನ್ನು ಪೂಜಿಸಿದರೆ ಶ್ರೇಷ್ಠವಾದದ್ದು. ಈ ಎರಡು ದೇವತೆಗಳು ಅತ್ಯಂತ ಶಕ್ತಿಯನ್ನು ಹೊಂದಿರುವ ದೇವರು ಎಂದು ಹೇಳಲಾಗುವುದು.

ಶನಿ ದೇವರನ್ನು ದೃಷ್ಟಿಯಿಟ್ಟು ನೋಡಬಾರದು
ಶನಿ ದೇವರ ಪೂಜೆ ಅಥವಾ ಮಂತ್ರ ಪಠಿಸುವಾಗ ಶನಿ ದೇವರನ್ನು ಕಣ್ಣು ಮಿಟುಕಿಸದಂತೆ ದೃಷ್ಟಿಸಿ ನೋಡಬಾರದು. ಅದರಿಂದ ದುರಾದೃಷ್ಟ, ಆತಂಕ ಮತ್ತು ಅಸ್ವಸ್ಥತೆ ಉಂಟಾಗುತ್ತದೆ. ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಶನಿ ಚಿತ್ರ ಹಾಗೂ ಮೂರ್ತಿಯನ್ನು ಇಡುವುದು ಉಚಿತವಲ್ಲ. ಬದಲಿಗೆ ಏಕಾಗ್ರತೆ, ಧ್ಯಾನ ಮತ್ತು ಯೋಗದ ಕಡೆಗೆ ಗಮನವನ್ನು ಹರಿಸಬೇಕು. ಆಗ ಶನಿ ದೇವನು ಆಶೀರ್ವದಿಸುವನು.

ಅರ್ಧಾಷ್ಟಮ ಶನಿದೋಷದಿಂದ ಯಾವ ಸಮಸ್ಯೆಗಳು ಎದುರಾಗುತ್ತವೆ ಗೊತ್ತಾ?

ನಕಾರಾತ್ಮಕ ಹವ್ಯಾಸ ಉಚಿತವಲ್ಲ
ವ್ಯಕ್ತಿ ಸದಾ ಕಾಲ ಉತ್ತಮ ಗುಣ ಹಾಗೂ ವರ್ತನೆಯನ್ನು ತೋರಬೇಕು. ಅದರಲ್ಲೂ ಕೆಲವು ವಿಶೇಷ ದಿನಗಳಲ್ಲಿ ತಪ್ಪುಗಳನ್ನು ಮಾಡಬಾರದು. ಅದರಲ್ಲೂ,
  • ವ್ಯಕ್ತಿಯ ನಕ್ಷತ್ರ ಅಥವಾ ರಾಶಿಯ ಮೇಲೆ ಗ್ರಹಣ ಹಿಡಿದಾಗ.
  • ಮಹಿಳೆ ಗರ್ಭಿಣಿ ಇದ್ದಾಗ
  • ಮೃಗೀಯ ವರ್ತನೆ ತೋರುವುದು.
  • ವ್ಯಕ್ತಿ ತನ್ನ ಕುಂಡಲಿಯಲ್ಲಿ ಗ್ರಹಗತಿಗಳು ಬಹಳ ದುರ್ಬಲವಾಗಿದ್ದಾಗ,
ಇಂತಹ ಗಮನಾರ್ಹ ಪರಿಸ್ಥಿತಿ ಇರುವಾಗ ವ್ಯಕ್ತಿ ಸತ್ಯ -ಧರ್ಮಗಳ ನೀತಿಯಲ್ಲಿ ನಡೆಯಬೇಕು. ಅನುಚಿತ ವರ್ತನೆಯನ್ನು ತೋರಬಾರದು. ಅದು ಶನಿ ದೇವನಿಗೆ ಇಷ್ಟವಾಗದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ