ಆ್ಯಪ್ನಗರ

ಸಿದ್ದು ಸರಕಾರ ವರ್ಷ ಇರೋದು ಡೌಟ್‌: ಈಶ್ವರಪ್ಪ

ಸಿದ್ದರಾಮಯ್ಯ ಸರಕಾರ ಇನ್ನು ಒಂದು ವರ್ಷ ಖಂಡಿತ ಪೂರೈಸುವ ವಿಶ್ವಾಸವಿಲ್ಲ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.

ವಿಕ ಸುದ್ದಿಲೋಕ 18 Feb 2017, 2:27 pm
ಬೆಂಗಳೂರು: ಸಿದ್ದರಾಮಯ್ಯ ಸರಕಾರ ಇನ್ನು ಒಂದು ವರ್ಷ ಪೂರೈಸುವ ವಿಶ್ವಾಸವಿಲ್ಲ. ದಿನಕ್ಕೊಂದು ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿವೆ. ಮತ್ತೆ ಬಿಜೆಪಿ ಸರಕಾರ ಬರಬೇಕು ಎಂಬುದು ಎಲ್ಲ ಮಠಾಧಿಪತಿಗಳ ಬಯಕೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.
Vijaya Karnataka Web siddaramaiah may not complete year eshwarappa
ಸಿದ್ದು ಸರಕಾರ ವರ್ಷ ಇರೋದು ಡೌಟ್‌: ಈಶ್ವರಪ್ಪ


ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, 'ಇದುವರೆಗೆ ಪಕ್ಷದಲ್ಲಿ ಗೊಂದಲ ಇದ್ದದ್ದು ನಿಜ. ಆದರೆ, ಈಗ ಅದೆಲ್ಲ ಮುಗಿದ ಅಧ್ಯಾಯ. ಯಡಿಯೂರಪ್ಪ ಹಾಗೂ ನನ್ನನ್ನು ಒಟ್ಟಿಗೆ ಕೂರಿಸಿ, ಒಗ್ಗಟ್ಟಾಗಿ ರಾಜ್ಯದಲ್ಲಿ ‌ಪಕ್ಷ ಕಟ್ಟಿ ಅಧಿಕಾರಕ್ಕೆ ತನ್ನಿ ಎಂದು ಅಮಿತ್ ಶಾ ಸಲಹೆ ನೀಡಿದ್ದಾರೆ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇದೆ ಎಂಬುದಕ್ಕೆ ಇದೆ ಸಾಕ್ಷಿ. ಶಾ ನಂಬಿಕೆ ಹಾಗೂ‌‌ ಸಲಹೆಗೆ ಚ್ಯುತಿ ಬಾರದಂತೆ ರಾಜ್ಯದಲ್ಲಿ ‌ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ,' ಎಂದು ಹೇಳಿದ್ದಾರೆ.

'ಕಾರ್ಯಕಾರಿಣಿ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಸರ್ವರಿಗೂ ಸಮಪಾಲು ‌ಸರ್ವರಿಗೂ ಸಮಬಾಳು ಎಂದು ಹೇಳಿದ್ದಾರೆ. ಹಾಗಂದರೆ ಅರ್ಥ ಏನು ? ಮೇಲ್ವರ್ಗದವರು ಹಾಗೂ ಕೆಳವರ್ಗದವರ ನಡುವೆ ತಾರತಮ್ಯ ಆಗಬಾರದು ಎಂದು. ಈ ನಿಟ್ಟಿನಲ್ಲಿ ‌ನಾವೆಲ್ಲ‌ ಕೆಲಸ ಮಾಡೋಣ,' ಎಂದು ಈಶ್ವರಪ್ಪ ಹೇಳಿದ್ದಾರೆ.

'ಬಿಜೆಪಿಯನ್ನು ಅಧಿಕಾರಕ್ಕೆ ತರೋಣ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ‌ಮಾಡೋಣ. ಈ ಮೂಲಕ ಹಿಂದುಳಿದವರು ಹಾಗೂ ದಲಿತರ ಕಲ್ಯಾಣ ಮಾಡೋಣ,' ಎಂದಿದ್ದಾರೆ.

'ಹಿಂದುಳಿದ ‌ವರ್ಗಗಳ ಅಭಿವೃದ್ಧಿಯ ದೃಷ್ಟಿಯಿಂದ ಈಶ್ವರಪ್ಪ ಅವರನ್ನು ಈ ಮೋರ್ಚಾದ ಉಸ್ತುವಾರಿಗೆ ನೇಮಿಸಿದ್ದೇವೆ. ಇದರಿಂದ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಆನೆಬಲ ಬಂದಂತಾಗಿದೆ,' ಎಂದು ಈಶ್ವರಪ್ಪ ಅವರನ್ನು ಯಡಿಯೂರಪ್ಪ ಹೊಗಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ