ಆ್ಯಪ್ನಗರ

ಹೈಕಮಾಂಡ್‌ಗೆ ಹಣ ಕೊಡಲ್ಲ ಅಂದರೆ ಆತ್ಮವಂಚನೆ: ರಮೇಶ್‌ ಕುಮಾರ್‌

'ಹೈಕಮಾಂಡ್‌ಗೆ ಹಣ ಕೊಡಬೇಕಾದರೆ ಒಂದು ರೀತಿ ನೀತಿ ಇದೆ. ಅದನ್ನು ಮೀರಬಾರದು ಅಷ್ಟೇ. ಹೈಕಮಾಂಡ್‌ಗೆ ಹಣ ಕೊಡಲ್ಲ ಅಂದರೆ ಆತ್ಮವಂಚನೆ ಮಾಡಿಕೊಂಡಂತೆ.'ಎಂದು ರಮೇಶ್‌ ಕುಮಾರ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 1 Mar 2017, 2:46 pm
ಬೆಂಗಳೂರು: 'ಹೈಕಮಾಂಡ್‌ಗೆ ಹಣ ಕೊಡಬೇಕಾದರೆ ಒಂದು ರೀತಿ ನೀತಿ ಇದೆ. ಅದನ್ನು ಮೀರಬಾರದು ಅಷ್ಟೇ. ಹೈಕಮಾಂಡ್‌ಗೆ ಹಣ ಕೊಡಲ್ಲ ಅಂದರೆ, ಅದು ಆತ್ಮವಂಚನೆ ಮಾಡಿಕೊಂಡಂತೆ,'ಎಂದು ಸಚಿವ ರಮೇಶ್‌ ಕುಮಾರ್‌ ಹೇಳಿದ್ದಾರೆ.
Vijaya Karnataka Web siroya diaries congress dares bjp ramesh kumar yeddyurappa
ಹೈಕಮಾಂಡ್‌ಗೆ ಹಣ ಕೊಡಲ್ಲ ಅಂದರೆ ಆತ್ಮವಂಚನೆ: ರಮೇಶ್‌ ಕುಮಾರ್‌


'ಬಿಜೆಪಿ ನಾಯಕ ಯಡಿಯೂರಪ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕು, ಅವರು ಮಾಜಿ ಸಿಎಂ. ಯಾರದ್ದೋ ಮನೆಯಲ್ಲಿ ಡೈರಿ ಸಿಕ್ಕಿದೆ. ಅದರಲ್ಲಿ ಏನೋ ಬರೆದಿದೆ ಎನ್ನುತ್ತಾರೆ. ಆದರೆ, ಅದನ್ನು ಅಧಿಕೃತವಾಗಿ ಆದಾಯ ತೆರಿಗೆ ಇಲಾಖೆ ಹೇಳಬೇಕು. ಗೋವಿಂದರಾಜು ಈಗಾಗಲೇ ಡೈರಿ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,' ಎಂದು ರಮೇಶ್‌ ಕುಮಾರ್‌ ಹೇಳಿದ್ದಾರೆ.

'ಡೈರಿ ಸಂಬಂಧ ಐಟಿ ಅಧಿಕಾರಿಗಳು ಅಧಿಕೃತ ವರದಿ ಬಿಡುಗಡೆ ಮಾಡಿ, ತಪ್ಪು ಸಾಬೀತಾದರೆ ಒಂದು ನಿಮಿಷವೂ ನಾನು ಇರೋದಿಲ್ಲ. ಸಿದ್ದರಾಮಯ್ಯ ಅವರಿಗೂ ಹೋಗೋಣ ಅಂತ ಹೇಳಿಬಿಡುತ್ತೇನೆ,' ಎಂದು ಹೇಳಿದ್ದಾರೆ.

'ಗೋಮಟೇಶ್ವರನಿಗೆ ಬಟ್ಟೆ ಹಾಕಲ್ಲ ಅನ್ನುವುದನ್ನು ಫೋಟೋ ತೆಗೆದೇ ತೋರಿಸಬೇಕಾ? ರಾಜಕೀಯ ಪಕ್ಷಗಳು ಹೈ ಕಮಾಂಡ್‌ಗೆ ದುಡ್ಡು ಕೊಡಲ್ಲ ಅಂದರೆ ಆತ್ಮ ವಂಚನೆ ಮಾಡಿಕೊಂಡಂತೆ. ಮದುವೆ ಮಾಡಿಕೊಂಡು, ಬೀದಿಯಲ್ಲಿ ಸಂಸಾರ ಮಾಡಲು ಸಾಧ್ಯವೇ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.


ಜಾರ್ಜ್ ಕಾಳಲೆದ ಸಚಿವ ರಮೇಶ್ ಕುಮಾರ್

ಬಿಬಿಎಂಪಿಯಲ್ಲಿ ಮೂರು ಸಾವಿರ ಕೋಟಿ ಅಕ್ರಮ ಆಗಿದೆ ಎಂದು ಬಿಎಸ್‌ವೈ ಆರೋಪ ಮಾಡಿದ್ದಾರೆ ಸರ್ ? ಎಂದು ಪ್ರತಕರ್ತರು ಜಾರ್ಜ್‌ ಅವರನ್ನು ಪ್ರಶ್ನೆ ಮಾಡುವಾಗ ಪಕ್ಕದಲ್ಲೇ ಇದ್ದ ಸಚಿವ ರಮೇಶ್ ಕುಮಾರ್, 'ಜಾರ್ಜ್ ಯೋಗ್ಯತೆಗೆ ಮೂರು ಸಾವಿರ ಕೋಟಿ ಅಷ್ಟೇನಾ..? ಹತ್ತು ಸಾವಿರ ಕೋಟಿ ರೂಪಾಯಿ ಇರಬಹುದು ನೋಡಿ,' ಎಂದ ಜಾರ್ಜ್ ಕಾಳೆಲೆದರು.
ರಮೇಶ್ ಕುಮಾರ್ ಹೇಳಿಕೆಗೆ ಕೆ.ಜೆ.ಜಾರ್ಜ್‌ ನಕ್ಕು ಸುಮ್ಮನಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ