ಆ್ಯಪ್ನಗರ

ವಿಶ್ವಕಪ್ ಗೆಲ್ಲಲಿದ್ದೇವೆ: ಕ್ಯಾಪ್ಟನ್ ಕೊಹ್ಲಿ ಭರವಸೆ

ಇಂಗ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಟೀಮ್ ಇಂಡಿಯಾ ಆಟಗಾರರು ಭೇಟಿ ನೀಡಿದ ವೇಳೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಟ್ರೋಫಿ ಗೆಲ್ಲುವ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

Vijaya Karnataka Web 8 Jun 2019, 8:29 pm
ಲಂಡನ್: ಈ ಬಾರಿಯ ಏಕದಿನ ವಿಶ್ವಕಪ್ ಅತ್ಯಂತ ಕಠಿಣವೆನಿಸಿದೆ. ಆದರೂ ವಿಶ್ವಕಪ್ ಗೆಲ್ಲಲಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರವಸೆ ನೀಡಿದ್ದಾರೆ.
Vijaya Karnataka Web virat-kohli


ಇಂಗ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಓರ್ಪಡಿಸಲಾದ ಔತಣಕೂಟದಲ್ಲಿ ಭಾಗವಹಿಸುತ್ತಾ ಕೊಹ್ಲಿ ವಿಶ್ವಕಪ್ ಗೆಲ್ಲುವ ನಂಬಿಕೆ ವ್ಯಕ್ತಪಡಿಸಿದರು.

ನಾವು ಇಂಗ್ಲೆಂಡ್‌ಗೆ ಬಂದಾಗೆಲ್ಲ ನಿಮ್ಮೆಲ್ಲರನ್ನು ಭೇಟಿಯಾಗುತ್ತಿದ್ದೇವೆ. ವಿಶ್ವಕಪ್ ಗೆಲುವೇ ಪ್ರತಿಯೊಬ್ಬರ ಮನದಲ್ಲಿದೆ. ನಾವು ಈಗಾಗಲೇ ಅತ್ಯುತ್ತಮ ಆರಂಭವನ್ನು ಪಡೆದಿದ್ದೇವೆ ಎಂದು ಉಲ್ಲೇಖಿಸಿದರು.

ಟೂರ್ನಿಯುದ್ಧಕ್ಕೂ ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತೇವೆ. ಇದು ಅತ್ಯಂತ ಕಠಿಣ ವಿಶ್ವಕಪ್. ಆದರೆ ನಾವೆಲ್ಲರೂ ಜತೆಯಾಗಿ ವಿಶೇಷವಾದ ಸಾಧನೆ ಮಾಡಬಹುದಾಗಿದೆ. ವಿಶ್ವಕಪ್ ಗೆಲ್ಲುವ ನಂಬಿಕೆ ನಮಗಿದೆ ಎಂದು ಸೇರಿಸಿದರು.

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆಯಲಿರುವ ತನ್ನ ದ್ವಿತೀಯ ಪಂದ್ಯದಲ್ಲಿ ಭಾರತ ತಂಡವು ಪ್ರಬಲ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌