ಆ್ಯಪ್ನಗರ

ವಿಂಡೀಸ್ ದೈತ್ಯ ವಿವ್ ರಿಚರ್ಡ್ಸ್ ದಾಖಲೆ ಮುರಿದ ಬಾಬರ್

ಏಕದಿನ ವಿಶ್ವಕಪ್‌ನಲ್ಲಿ 32 ವರ್ಷಗಳ ಬಳಿಕ ಪಾಕಿಸ್ತಾನ ಪರ ಸೆಂಚುರಿ ಬಾರಿಸಿದ ಮೊತ್ತ ಮೊದಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಯುವ ಭರವಸೆಯ ಬ್ಯಾಟ್ಸ್‌ಮನ್ ಬಾಬರ್ ಅಜಾಮ್ ಪಾತ್ರವಾಗಿದ್ದಾರೆ.

Vijaya Karnataka Web 27 Jun 2019, 3:16 pm
ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಅಜಾಮ್ ಸಮಯೋಚಿತ ಶತಕದ ನೆರವಿನಿಂದ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶ ಸಾಧ್ಯತೆಯನ್ನು ಜೀವಂತವಾಗಿರಿಸಿದೆ.
Vijaya Karnataka Web babar-azam-03


ಇನ್ನೊಂದೆಡೆ ಕಿವೀಸ್ ವಿಶ್ವಕಪ್‌ನಲ್ಲಿ ಮೊದಲ ಸೋಲಿಗೆ ತುತ್ತಾಗಿದೆ. ಅತ್ತ ಶತಕ ವೈಭವ ಮೆರೆದಿರುವ ಬಾಬರ್ ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದೈತ್ಯ ವಿವ್ ರಿಚರ್ಡ್ಸ್ ದಾಖಲೆಯನ್ನು ಮುರಿದಿದ್ದಾರೆ.

ಅಲ್ಲದೆ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 3000 ರನ್ ದಾಖಲೆಯನ್ನು ಬರೆದಿದ್ದಾರೆ. ಬಾಬರ್ ತಮ್ಮ 68ನೇ ಇನ್ನಿಂಗ್ಸ್‌ನಲ್ಲಿ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ. ವಿಂಡೀಸ್‌ನ ಮಾಜಿ ದಿಗ್ಗಜ ರಿಚರ್ಡ್ಸ್ 69 ಇನ್ನಿಂಗ್ಸ್‌ಗಳಲ್ಲಿ ಇದೇ ಸಾಧನೆ ಮಾಡಿದ್ದರು. ಇನ್ನು ಅಗ್ರಸ್ಥಾನದಲ್ಲಿರುವ ಆಮ್ಲಾ 57 ಇನ್ನಿಂಗ್ಸ್‌ಗಳಲ್ಲೇ ದಾಖಲೆ ತಲುಪಿದ್ದರು.

127 ಎಸೆತಗಳನ್ನು ಎದುರಿಸಿದ ಬಾಬರ್ 11 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ 32 ವರ್ಷಗಳ ಬಳಿಕ ಪಾಕಿಸ್ತಾನ ಪರ ಸೆಂಚುರಿ ಬಾರಿಸಿದ ಮೊತ್ತ ಮೊದಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌