ಆ್ಯಪ್ನಗರ

ಬೌಲಿಂಗ್ ಪಡೆ ಭಾರತ ತಂಡದ ಹೆಮ್ಮೆ: ಶಮಿ

ಬೌಲಿಂಗ್ ಪಡೆ ಭಾರತ ಕ್ರಿಕೆಟ್ ತಂಡದ ಹೆಮ್ಮೆ ಎಂದು ಬಲಗೈ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕಳೆದ 30 ವರ್ಷಗಳಲ್ಲೇ ಶ್ರೇಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವುದಾಗಿ ತಿಳಿಸಿದರು.

Vijaya Karnataka Web 18 May 2019, 4:49 pm
ಹೊಸದಿಲ್ಲಿ: ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಒಳಗೊಂಡ ಸಮಕಾಲೀನ ಭಾರತೀಯ ಬೌಲಿಂಗ್ ವಿಭಾಗಕ್ಕೆ ವಿಶ್ವದಲ್ಲೇ ಶ್ರೇಷ್ಠ ಬೌಲಿಂಗ್ ಪಡೆಯ ಪಟ್ಟ ನೀಡಲಾಗಿದೆ. ಇದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಭಾರತದ ವಿಶ್ವಕಪ್ ತಂಡದ ಸದಸ್ಯರಾಗಿರುವ ಬಲಗೈ ಅನುಭವಿ ವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web shami-kohli


ಬ್ಯಾಟಿಂಗ್ ಜತೆಗೆ ನಿಖರ ಬೌಲಿಂಗ್ ಪಡೆಯನ್ನು ಹೊಂದಿರುವುದರಿಂದ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಕಾಣಿಸಿಕೊಂಡಿದೆ. ವೇಗಿಗಳ ಪಡೆಯ ಜತೆಗೆ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಅವರಂತಹ ವಿಕೆಟ್ ಟೇಕಿಂಗ್ ಸ್ಪಿನ್ನರ್‌ಗಳನ್ನು ಭಾರತ ಹೊಂದಿದೆ.

2015ರ ವಿಶ್ವಕಪ್ ತಂಡದ ಭಾಗವಾಗಿರುವ ಶಮಿ ಆಡಿರುವ ಏಳು ಪಂದ್ಯಗಳಲ್ಲೇ 17 ವಿಕೆಟುಗಳನ್ನು ಕಬಳಿಸಿದ್ದರು. ಇದೀಗ ಮಗದೊಂದು ವಿಶ್ವಕಪ್ ಗುರಿಯಾಗಿರಿಸಿಕೊಂಡಿದ್ದಾರೆ.

ಬೌಲರ್‌ಗಳಿಗೆ ನೆರವು ದೊರಕದ ಪಿಚ್‌ನಲ್ಲೂ ಭಾರತೀಯ ಬೌಲರ್‌ಗಳು ಯಶಸ್ವಿಯನ್ನು ಕಂಡಿದ್ದಾರೆ. ಇದೀಗ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದುವ ಮೂಲಕ ಟೀಮ್ ಇಂಡಿಯಾದ ಹೆಮ್ಮೆಯಾಗಿ ಮೂಡಿ ಬಂದಿದೆ ಎಂದು ಶಮಿ ಹೇಳಿದರು.

ಕಳೆದ 20ರಿಂದ 30 ವರ್ಷಗಳ ಭಾರತೀಯ ಕ್ರಿಕೆಟನ್ನು ನೋಡಿದರೆ ಬ್ಯಾಟ್ಸ್‌ಮನ್‌ಗಳ ಅಧಿಪತ್ಯ ಕಾಣಸಿಗುತ್ತದೆ. ಇದಕ್ಕಾಗಿ ಬೌಲರ್‌ಗಳನ್ನು ಟೀಕಿಸಲು ಸಾಧ್ಯವಿಲ್ಲ. ಯಾಕೆಂದರೆ ಭಾರತದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಲಾಗುತ್ತದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕಳೆದ ಆರೇಳು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಇದು ರಾತ್ರಿ ಬೆಳಗಾಗುವುದರೊಳಗೆ ಆಗಿದ್ದಲ್ಲ. ನಮ್ಮ ಬೌಲಿಂಗ್ ಪಡೆಗೆ ಇದರ ಪೂರ್ಣ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌