ಆ್ಯಪ್ನಗರ

ವಿಶ್ವಕಪ್ ಬಳಿಕ ಗೇಲ್ ನಿವೃತ್ತಿ?

ಏಕದಿನ ವಿಶ್ವಕಪ್ ಬಳಿಕ ಭಾರತ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಹಾಗೂ ಏಕದಿನ ಸರಣಿಯ ಬಳಿಕ ವೆಸ್ಟ್‌ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಇರಾದೆಯನ್ನು ಹೊಂದಿದ್ದಾರೆ.

Vijaya Karnataka Web 26 Jun 2019, 9:22 pm
ಮ್ಯಾಂಚೆಸ್ಟರ್: ವೆಸ್ಟ್‌ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪ್ರಸಕ್ತ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವರೇ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Vijaya Karnataka Web chris-gayle-03


ಈ ನಡುವೆ ಮೂಲಗಳಿಂದ ಬಂದ ವರದಿಯಂತೆ ವಿಶ್ವಕಪ್ ಬಳಿಕ ಭಾರತ ವಿರುದ್ಧ ತವರಿನಲ್ಲಿ ನಡೆಯಲಿರುವ ಟೂರ್ನಿಯು ಗೇಲ್ ಪಾಲಿಗೆ ಕೊನೆಯ ಟೂರ್ನಿಯಾಗಿರಲಿದೆ.

ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಣ ಸರಣಿಯು ಆಗಸ್ಟ್‌ನಿಂದ ಸೆಪ್ಟೆಂಬರ್ ವರೆಗೆ ಸಾಗಲಿದೆ. ಈ ವೇಳೆಯಲ್ಲಿ ಭಾರತ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿದೆ. ಗೇಲ್ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಭಾಗವಹಿಸಲು ಉತ್ಸುಕತೆ ತೋರಿದ್ದಾರೆ ಎಂಬುದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ 39ರ ಹರೆಯದ ಗೆಲ್, ವಿಶ್ವಕಪ್ ಬೆನ್ನಲ್ಲೇ ಕೊನೆಗೊಳ್ಳುವುದಿಲ್ಲ. ಇನ್ನು ಕೆಲವು ತಿಂಗಳುಗಳು ಮುಂದುವರಿಯಲಿದ್ದೇನೆ. ಬಹುಶ: ಮಗದೊಂದು ಸರಣಿ. ನೋಡೋಣ ಏನಾಗಲಿದೆ. ನಾನು ಭಾರತ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಭಾಗವಹಿಸಲಿದ್ದೇನೆ. ಆದರೆ ಟ್ವೆಂಟಿ-20 ಸರಣಿಯಲ್ಲಿ ಆಡಲ್ಲ ಎಂದು ಹೇಳಿದ್ದಾರೆ.

ವೆಸ್ಟ್‌ಇಂಡೀಸ್ ಮಾಧ್ಯಮ ವ್ಯವಸ್ಥಾಪಕ ಸಹ ಭಾರತ ವಿರುದ್ಧದ ಸರಣಿಯು ಗೇಲ್ ಪಾಲಿಗೆ ಕೊನೆಯದಾಗಿರಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ವಿಂಡೀಸ್ ಸರಣಿಯಲ್ಲಿ ಭಾರತವು ತಲಾ ಮೂರು ಟ್ವೆಂಟಿ-20, ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಆಗಸ್ಟ್ 3ರಂದು ಆರಂಭವಾಗಲಿರುವ ಸರಣಿಯು ಸೆಪ್ಟೆಂಬರ್ 3ರ ವರೆಗೆ ಮುಂದುವರಿಯಲಿದೆ.

ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ ಇದುವರೆಗೆ 103 ಟೆಸ್ಟ್ ಪಂದ್ಯಗಳ್ನಾಡಿರುವ ಗೇಲ್ 42.19ರ ಸರಾಸರಿಯಲ್ಲಿ 7215 ರನ್, 294 ಏಕದಿನಗಳಲ್ಲಿ 10345 ರನ್ ಹಾಗೂ 58 ಟ್ವೆಂಟಿ-20ಗಳಲ್ಲಿ 1627 ರನ್ ಕಲೆ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌