ಆ್ಯಪ್ನಗರ

ಏಕದಿನ ವಿಶ್ವಕಪ್‌ನಲ್ಲಿ ದಾಖಲೆ ಬರೆದ ಫಿಂಚ್-ವಾರ್ನರ್

ಏಕದಿನ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಸತತ ಐದು ಬಾರಿ 50ಕ್ಕೂ ಹೆಚ್ಚು ರನ್‌ಗಳ ಜತೆಯಾಟ ನೀಡಿದ ವಿಶ್ವದ ಮೊದಲ ಆರಂಭಿಕ ಜೋಡಿ ಎಂಬ ವಿಶ್ವದಾಖಲೆಗೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಪಾತ್ರವಾಗಿದ್ದಾರೆ.

Vijaya Karnataka Web 25 Jun 2019, 5:08 pm
ಲಾರ್ಡ್ಸ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಓಪನರ್‌ಗಳಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ನೂತನ ವಿಶ್ವ ದಾಖಲೆ ಬರೆದಿದ್ದಾರೆ.
Vijaya Karnataka Web warner-finch-02


ಸಾಂಪ್ರಾದಾಯಿಕ ಬದ್ಧ ವೈರಿ ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಪಂದ್ಯದಲ್ಲಿ ನಾಯಕ ಫಿಂಚ್ ಹಾಗೂ ವಾರ್ನರ್ ಜೋಡಿಯು ಶತಕದ ಜತೆಯಾಟ ನೀಡಿದ್ದರು.

ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಸತತ ಐದು ಬಾರಿ 50ಕ್ಕೂ ಹೆಚ್ಚು ಜತೆಯಾಟ ನೀಡಿರುವ ದಾಖಲೆಗೆ ಪಾತ್ರವಾಗಿದ್ದಾರೆ. ಅಲ್ಲದೆ ಈ ದಾಖಲೆ ಬರೆದ ಮೊತ್ತ ಮೊದಲ ಆರಂಭಿಕ ಜೋಡಿ ಎಂಬ ಹಿರಿಮೆಗೆ ಪಾತ್ರವಾಗಿದೆ.

ಅಂದ ಹಾಗೆ ಯಾವುದೇ ವಿಕೆಟ್‌ಗೆ ಸತತವಾಗಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್‌ಗಳ ಜತೆಯಾಟವು ಆಸ್ಟ್ರೇಲಿಯಾದ ಮಾಜಿ ದಿಗ್ಗಜರಾದ ಮಾರ್ಕ್ ವ್ಹಾ ಹಾಗೂ ರಿಕಿ ಪಾಂಟಿಂಗ್ ಹೆಸರಲ್ಲಿದೆ. ಇವರಿಬ್ಬರು 1996 ಹಾಗೂ 1999ರ ವಿಶ್ವಕಪ್‌ನಲ್ಲಿ ಏಳು ಬಾರಿ 50ಕ್ಕೂ ಹೆಚ್ಚು ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು. ವ್ಹಾ ಹಾಗೂ ಪಾಂಟಿಂಗ್ ಎರಡನೇ ವಿಕೆಟ್‌ಗೆ ಈ ದಾಖಲೆ ಬರೆದಿದ್ದರು.

ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್‌ಗಳ ಜತೆಯಾಟ:
5 ವಾರ್ನರ್-ಫಿಂಚ್ (2019) *
4 ಫ್ಲವರ್-ತವರೆ (1983)
4 ಬೂನ್-ಮಾರ್ಶ್ (1987-92)
4 ಸೊಹೈಲ್-ಅನ್ವರ್ (1996)
4 ಗಿಲ್‌ಕ್ರಿಸ್ಟ್-ಹೇಡನ್ (2003-07)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌