ಆ್ಯಪ್ನಗರ

ರಾಯುಡುಗೆ ಕೈ ಮುಗಿದ ಕೊಹ್ಲಿ; ಹೈ ಡ್ರಾಮಾ ಎಂದ ಫ್ಯಾನ್ಸ್

ಏಕದಿನ ವಿಶ್ವಕಪ್ ತಂಡದಿಂದ ಕೈಬಿಟ್ಟಿರುವುದರಿಂದ ತೀವ್ರ ನೊಂದಿರುವ ಅಂಬಟಿ ರಾಯುಡು, ಎಲ್ಲ ಪ್ರಕಾರದ ಕ್ರಿಕೆಟ್‌ಗೂ ಗುಡ್ ಬೈ ಹಾಡಿದ್ದಾರೆ. ಇದೀಗ ರಾಯುಡು ನಿವೃತ್ತಿಗೆ ನಾಯಕ ವಿರಾಟ್ ಕೊಹ್ಲಿ ಕಾರಣ ಎಂಬ ಆರೋಪ ಕೇಳಿಬಂದಿದೆ.

Vijaya Karnataka Web 4 Jul 2019, 8:26 pm
ಹೊಸದಿಲ್ಲಿ: ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡದಿಂದ ಒಂದಲ್ಲ ಎರಡಲ್ಲ ಮೂರು ಬಾರಿ ಕಡೆಗಣಿಸಿದ್ದರಿಂದ ತೀವ್ರ ಮನನೊಂದಿರುವ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ಬಿಸಿಸಿಐ ಮೇಲಿನ ಕೋಪಕ್ಕೆ ಎಲ್ಲ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿಯನ್ನು ಸಲ್ಲಿಸಿದ್ದಾರೆ.
Vijaya Karnataka Web kohli-rayudu


ರಾಯುಡು ಅನಿರೀಕ್ಷಿತ ನಿವೃತ್ತಿಯು ಭಾರತೀಯ ಕ್ರಿಕೆಟ್ ರಂಗದಲ್ಲಿ ತಲ್ಲಣ ಮೂಡಿಸಿದೆ. ಮಾಜಿಗಳಾದ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರಂತಹ ಆಟಗಾರರು ರಾಯುಡು ಬೆಂಬಲಕ್ಕೆ ನಿಂತಿದ್ದಾರೆ.

ಏತನ್ಮಧ್ಯೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಯುಡು ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದರು. ಕೊಹ್ಲಿ ತಮ್ಮ ಸಂದೇಶದಲ್ಲಿ 'ಅಗ್ರ ವ್ಯಕ್ತಿ' ಎಂದು ಉಲ್ಲೇಖಿಸಿದ್ದರಲ್ಲದೆ ಕೈಮುಗಿದುಕೊಳ್ಳು ಇಮೋಜಿ ಹಂಚಿಕೊಂಡಿದ್ದಾರೆ.

ಇದೀಗ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಕುಪಿತರಾಗಿರುವ ಅಭಿಮಾನಿಗಳು ಹೈ ಡ್ರಾಮಾ ಎಂದು ಜರೆದಿದ್ದಾರೆ.

ಟೀಮ್ ಇಂಡಿಯಾ ವ್ಯವಸ್ಥಾಪಕ ಮಂಡಳಿ ಹಾಗೂ ಆಯ್ಕೆ ಮಂಡಳಿಯು ಒಮ್ಮತದ ನಿರ್ಧಾರದಿಂದ ಅಂಬಟಿ ರಾಯುಡುರನ್ನು ಆಯ್ಕೆಗೆ ಪರಿಗಣಿಸದಿರಲು ನಿರ್ಧರಿಸಿದ್ದರು. ಇದರಲ್ಲಿ ನಾಯಕ ವಿರಾಟ್ ಕೊಹ್ಲಿ ಪಾತ್ರ ಕೂಡಾ ಇದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ರಾಯುಡುಗೆ ಶುಭ ಹಾರೈಸಲು ಹೋಗಿ ಕೊಹ್ಲಿ ಅಭಿಮಾನಿಗಳ ಕೈಯಿಂದ ಏಟು ತಿಂದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌