ಆ್ಯಪ್ನಗರ

ಕೊಹ್ಲಿ ದಾಖಲೆ ಮುರಿಯುವ ತವಕದಲ್ಲಿ ಆಮ್ಲಾ

ದಕ್ಷಿಣ ಆಫ್ರಿಕಾದ ಬಲಗೈ ಅನುಭವಿ ಆಟಗಾರ ಹಾಶೀಮ್ ಆಮ್ಲಾ, ಏಕದಿನದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಅತಿ ವೇಗದ 8000 ರನ್‌ಗಳ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ.

Vijaya Karnataka Web 2 Jun 2019, 3:13 pm
ಲಂಡನ್: ದಕ್ಷಿಣ ಆಫ್ರಿಕಾದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಹಾಶೀಮ್ ಆಮ್ಲಾ, ಮಗದೊಂದು ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ.
Vijaya Karnataka Web hashim-amla


ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಒಂದೊಂದಾಗಿ ಮುರಿಯುತ್ತಲೇ ಸಾಗುತ್ತಿರುವ ಆಮ್ಲಾ, ಐಸಿಸಿ ಏಕದಿನ ವಿಶ್ವಕಪ್‌ನಲ್ಲೂ ಇದನ್ನೇ ಅನುಸರಿಸುತ್ತಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದಲ್ಲಿ 8000 ರನ್ ಗಳಿಸಲು ಆಮ್ಲಾಗಿನ್ನು 77 ರನ್‌ಗಳ ಅವಶ್ಯಕತೆಯಿದೆ. ಈ ಮೂಲಕ ರನ್ ಮೆಶಿನ್ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ.

ವಿರಾಟ್ ಕೊಹ್ಲಿ ಅತಿ ವೇಗದಲ್ಲಿ 175 ಇನ್ನಿಂಗ್ಸ್‌ಗಳಲ್ಲಿ 8000 ರನ್ ಗಳಿಸಿದ್ದರು. ಇನ್ನೊಂದೆಡೆ ಆಮ್ಲಾ ಇದುವರೆಗೆ 172 ಇನ್ನಿಂಗ್ಸ್‌ಗಳಲ್ಲಿ 7923 ರನ್ ಗಳಿಸಿದ್ದಾರೆ.

ಈ ನಡುವೆ ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಹಾಗಾಗಿ ತಮ್ಮ ದಾಖಲೆಗಿನ್ನು ಮತ್ತಷ್ಟು ಕಾಯಬೇಕಿದೆ.

ಅಂದ ಹಾಗೆ 8000 ರನ್ ಗಳಿಸಿದರೆ ಜಾಕ್ವಾಸ್ ಕ್ಯಾಲಿಸ್, ಹರ್ಷಲ್ ಗಿಬ್ಸ್ ಹಾಗೂ ಎಬಿ ಡಿ ವಿಲಿಯರ್ಸ್ ಬಳಿಕ ಈ ದಾಖಲೆ ಬರೆದ ದಕ್ಷಿಣ ಆಫ್ರಿಕಾದ ನಾಲ್ಕನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌