ಆ್ಯಪ್ನಗರ

ಬೌಂಡರಿ ಗೆರೆ ಬಳಿ ಡೈವ್ ಹೊಡೆದು ಅದ್ಭುತ ಕ್ಯಾಚ್ ಹಿಡಿದ ಜಡೇಜಾ

ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ 12ನೇ ಆಟಗಾರನಾಗಿರುವ ರವೀಂದ್ರ ಜಡೇಜಾ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka Web 30 Jun 2019, 5:20 pm
ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತದ ಫೀಲ್ಡರ್ ರವೀಂದ್ರ ಜಡೇಜಾ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
Vijaya Karnataka Web ravindra-jadeja


ಆಡುವ ಬಳಗದಲ್ಲಿ ಇಲ್ಲದಿದ್ದರೂ 12ನೇ ಆಟಗಾರನಾಗಿ ಕ್ಷೇತ್ರರಕ್ಷಣೆಗಿಳಿದ ಜಡೇಜಾ, ಇಂಗ್ಲೆಂಡ್‌ಗೆ ಮೊದಲ ಆಘಾತ ನೀಡುವಲ್ಲಿ ನೆರವಾದರು.

ಆರಂಭಿಕರಾದ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಇಂಗ್ಲೆಂಡ್‌ಗೆ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 22.1 ಓವರ್‌ಗಳಲ್ಲಿ 160 ರನ್‌ಗಳ ಜತೆಯಾಟ ನೀಡಿದರು.

ಈ ಹಂತದಲ್ಲಿ ಕುಲ್‌ದೀಪ್ ಯಾದವ್ ದಾಳಿಗಿಳಿದ ಜೇಸನ್ ರಾಯ್ ದೊಡ್ಡ ಹೊಡೆತಕ್ಕೆ ಮುಂದಾದರು. ಬೌಂಡರಿ ಗೆರೆ ಬಳಿ ಓಡೋಡಿ ಬಂದ ರವೀಂದ್ರ ಜಡೇಜಾ ಡೈವ್ ಹೊಡೆಯುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು.

ಈ ಮೊದಲು ಕೆಎಲ್ ರಾಹುಲ್ ಸಿಕ್ಸರ್ ಗೆರೆಯಲ್ಲಿ ಕ್ಯಾಚ್‌ಗಾಗಿ ಡೈವ್ ಹೊಡೆಯುವ ವೇಳೆ ಕುಸಿದು ಬಿದ್ದಿದ್ದರು. ಪರಿಣಾಮ ಗಾಯದ ಆತಂಕದ ಹಿನ್ನಲೆಯಲ್ಲಿ ಮೈದಾನ ತೊರೆದಿದ್ದರು. ಬಳಿಕ ರಾಹುಲ್ ಸ್ಥಾನದಲ್ಲಿ ಫೀಲ್ಡಿಂಗ್ ಮಾಡಲು ಜಡೇಜಾ ಅಂಗಣಕ್ಕಿಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌