ಆ್ಯಪ್ನಗರ

ಧೋನಿ ಸಿಕ್ಸರ್ ದಾಖಲೆ ಮುರಿದ ರೋಹಿತ್

ಏಕದಿನ ವಿಶ್ವಕಪ್‌ನಲ್ಲಿ ಬದ್ದ ವೈರಿ ಪಾಕಿಸ್ತಾನ ವಿರುದ್ಧ ಶತಕ ವೈಭವ ಮೆರೆದಿರುವ ರೋಹಿತ್ ಶರ್ಮಾ, ತಮ್ಮ ಸಹ ಆಟಗಾರ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ.

Vijaya Karnataka Web 16 Jun 2019, 5:49 pm
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಓಪನರ್ ರೋಹಿತ್ ಶರ್ಮಾಅಮೋಘ ಶತಕ ಸಾಧನೆ ಮಾಡಿದ್ದಾರೆ.
Vijaya Karnataka Web rohit-sharma-century-vs-pak


ಇದು ಏಕದಿನ ಕ್ರಿಕೆಟ್‌ನಲ್ಲಿ ರೋಹತ್ ಬ್ಯಾಟ್‌ನಿಂದ ಸಿಡಿದ 24ನೇ ಶತಕ ಸಾಧನೆಯಾಗಿದೆ. ಅಷ್ಟೇ ಯಾಕೆ ಪಾಕಿಸ್ತಾನ ವಿರುದ್ಧ ಏಕದಿನದಲ್ಲಿ ಸತತ ಎರಡು ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರವಾಗಿದ್ದಾರೆ.

ಈ ನಡುವೆ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ ಸಿಕ್ಸರ್ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬದಲಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಭಾಜನವಾಗದ್ದಾರೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ355 ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು:
356* ರೋಹಿತ್ ಶರ್ಮಾ
355 ಎಂಎಂ ಧೋನಿ
264 ಸಚಿನ್ ತೆಂಡೂಲ್ಕರ್
251 ಯುವರಾಜ್ ಸಿಂಗ್
247 ಸೌರವ್ ಗಂಗೂಲಿ
243 ವೀರೇಂದ್ರ ಸೆಹ್ವಾಗ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌