ಆ್ಯಪ್ನಗರ

ರೋಹಿತ್‌ಗೆ ಎರಡು ರನೌಟ್ ಜೀವದಾನ; 34 ಬಾಲ್ ಫಿಫ್ಟಿ

ಏಕದಿನ ವಿಶ್ವಕಪ್‌ಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹತ್ ಶರ್ಮಾ ಎರಡು ಬಾರಿ ರನೌಟ್ ಅಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಿರುವ ರೋಹಿತ್ 34 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದ್ದಾರೆ.

Vijaya Karnataka Web 16 Jun 2019, 4:13 pm
ಮ್ಯಾಂಚೆಸ್ಟರ್: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲೇ ಅರ್ಧಶತಕ ಸಿಡಿಸುವ ಮೂಲಕ ಭಾರತದ ಓಪನರ್ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ.
Vijaya Karnataka Web rohit-sharma-05


ಈ ನಡುವೆ ಸಹ ಆಟಗಾರ ಕೆಎಲ್ ರಾಹುಲ್ ಜತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಎರಡು ಬಾರಿ ರನೌಟ್ ಜೀವದಾನವನ್ನು ಪಡೆದರು.

ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಎರಡನೇ ರನ್ ಕಬಳಿಸುವ ವೇಳೆಗೆ ರನೌಟ್ ಆಂತಕ್ಕೊಳಗಾದರು. ಆದರೆ ಪಾಕ್ ಫೀಲ್ಡರ್ ಫಖಾರ್ ಜಮಾನ್ ಕೆಟ್ಟ ಥ್ರೋದಿಂದಾಗಿ ರೋಹಿತ್ ಬಚಾವಾದರು. ಇದಾದ ಸ್ವಲ್ಪದರಲ್ಲೇ ಮಗದೊಂದು ಜೀವದಾನವನ್ನು ಪಡೆದರು. ರೋಹಿತ್ ಡೈವ್ ಹೊಡೆಯುವ ಮೂಲಕ ಕ್ರೀಸ್ ಸೇರಿಕೊಂಡರೂ ಎರಡನೇ ಬಾರಿಯೂ ಕೆಟ್ಟ ಥ್ರೋನಿಂದಾಗಿ ಬಚಾವ್ ಆದರು.

ತಮಗೆ ಸಿಕ್ಕ ಜೀವದಾನದ ಸ್ಪಷ್ಟ ಲಾಭವೆತ್ತಿದ ರೋಹಿತ್ ಶರ್ಮಾ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ಕೆಎಲ್ ರಾಹುಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾದರು.

ಅಷ್ಟೇ ಯಾಕೆ 34 ಎಸೆತಗಳಲ್ಲೇ ಫಿಫ್ಟಿ ಸಾಧನೆ ಮಾಡುವ ಮೂಲಕ ಎದುರಾಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌