ಆ್ಯಪ್ನಗರ

ಜೇಸನ್ ರಾಯ್‌ಗೆ ದಂಡ; ಫೈನಲ್‌ಗೆ ಲಭ್ಯವಾಗುವರೇ?

ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಅಸಾಮಾಧಾನವನ್ನು ತೆೋರಿಕೊಂಡು ಅನುಚಿತ ವರ್ತನೆಯನ್ನು ತೋರಿರುವ ಇಂಗ್ಲೆಂಡ್‌ನ ಜೇಸನ್ ರಾಯ್ ದಂಡನೆಗೊಳಗಾಗಿದ್ದಾರೆ.

Vijaya Karnataka Web 12 Jul 2019, 2:28 pm
ಬರ್ಮಿಂಗ್‌ಹ್ಯಾಮ್: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಅಂಪೈರ್ ಜತೆಗೆ ಜಟಾಪಟಿಗೆ ಇಳಿದಿರುವ ಆತಿಥೇಯ ಇಂಗ್ಲೆಂಡ್‌ನ ಬಲಗೈ ಓಪನರ್ ಬ್ಯಾಟ್ಸ್‌ಮನ್ ಜೇಸನ್ ರಾಯ್‌ಗೆ ದಂಡ ವಿಧಿಸಲಾಗಿದೆ.
Vijaya Karnataka Web jason-roy-05


ಘಟನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಐಸಿಸಿ ಮ್ಯಾಚ್ ರೆಫರಿ, ರಾಯ್ ಮೇಲೆ ಪಂದ್ಯ ಶುಲ್ಕದ ಶೇಕಡಾ 30ರಷ್ಟು ದಂಡ ವಿಧಿಸಿದ್ದಾರೆ. ಆದರೂ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯ ಆಡಲು ಮುಕ್ತವಾಗಲಿದ್ದಾರೆ. ಇದರಿಂದ ಆಂಗ್ಲರ ಪಡೆ ನಿಟ್ಟುಸಿರು ಬಿಡುವಂತಾಗಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಅಲ್ಲದೆ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟಿದ ರಾಯ್ 85 ರನ್ ಗಳಿಸಿದ್ದರು.

ಪ್ಯಾಟ್ ಕಮಿನ್ಸ್ ಬೌನ್ಸರ್ ದಾಳಿಯಲ್ಲಿ ರಾಯ್‌ಗೆ ಔಟ್ ಎಂದು ಅಂಪೈರ್ ಕುಮಾರ ಧರ್ಮಸೇನಾ ತೀರ್ಪು ನೀಡಿದ್ದರು. ಇದರಿಂದ ಆಕ್ರೋಶಗೊಂಡ ರಾಯ್ ಕ್ರೀಸ್ ಬಿಟ್ಟು ಹೋಗದೆ ಅಂಪೈರ್ ಜತೆ ವಾಗ್ವಾದಕ್ಕಿಳಿದರು. ಬಳಿಕ ರಿಪ್ಲೇನಲ್ಲೂ ಔಟ್ ಆಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದರಿಂದ ಸ್ಮರಣೀಯ ಶತಕವನ್ನು ಮಿಸ್ ಮಾಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌