ಆ್ಯಪ್ನಗರ

ಕೊಹ್ಲಿ, ಧೋನಿ ತಂಡದಲ್ಲಿರುವಾಗ ಭಾರತವೇ ಫೇವರಿಟ್: ಚಹಲ್

ಪ್ರತಿಯೊಬ್ಬ ಕ್ರಿಕೆಟಿಗನಂತೆಯೇ ವಿಶ್ವಕಪ್ ಆಡುವುದು ತನ್ನ ಕನಸಾಗಿದ್ದು, ಅದೀಗ ನನಸುಗೊಂಡಿದೆ. ಅಲ್ಲದೆ ಮುಂಬರುವ ಅತ್ಯುತ್ತಮ ಪ್ರದರ್ಶನವನ್ನು ನೀಡುವ ನಂಬಿಕೆಯನ್ನು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ವ್ಯಕ್ತಪಡಿಸಿದ್ದಾರೆ.

Vijaya Karnataka Web 16 May 2019, 5:14 pm
ಹೊಸದಿಲ್ಲಿ: ಮುಂಬರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ ಎಂದು ಭಾರತದ ವಿಶ್ವಕಪ್ ತಂಡದ ಸದಸ್ಯರಾಗಿರುವ ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web chahal-dhoni-kohli


ಚಹಲ್ ಇಷ್ಟೊಂದು ಆತ್ಮವಿಶ್ವಾಸದಿಂದ ಇಂತಹ ಹೇಳಿಕೆ ನೀಡಲು ಕಾರಣವೊಂದಿದೆ. ಅದೇನೆಂದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿರುವಾಗ ಭಾರತವೇ ನಂ.1 ಫೇವರಿಟ್ ಎಂದಿದ್ದಾರೆ.

ಕಳೆದ ಬಾರಿ ಭಾರತದ ಸ್ಪಿನ್ ವಿಭಾಗವನ್ನು ಆರ್ ಅಶ್ವಿನ್ ಮುನ್ನಡೆಸಿದ್ದರು. ಆದರೆ ಈ ಬಾರಿ ಜವಾಬ್ದಾರಿಯು ಚಹಲ್ ಹಾಗೂ ಕುಲ್‌ದೀಪ್ ಯಾದವ್ ಮೇಲೆ ಇದೆ. ಈ ನಡುವೆ ಒತ್ತಡ ಇದ್ದೇ ಇರುತ್ತದೆ. ಆದರೆ ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿದ್ದೇನೆ ಎಂದಿದ್ದಾರೆ.

ನಮ್ಮಿಬ್ಬರ ನಡುವೆ ನಂಬಿಕೆ ಅತಿ ದೊಡ್ಡ ಅಂಶವಾಗಿದೆ. ನಾವಿಬ್ಬರು ಪರಸ್ಪರ ನಂಬಿಕೆಯನ್ನಿರಿಸುತ್ತೇವೆ. ಬ್ಯಾಟ್ಸ್‌ಮನ್‌ಗಳ ಜತೆಯಾಟದಂತೆ ನಾವಿಬ್ಬರು ಬೌಲಿಂಗ್‌ನಲ್ಲಿ ಜತೆಯಾಟ ನಿಭಾಯಿಸುತ್ತೇವೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂದರು.

ನಾವಿಬ್ಬರು ಯೋಜನೆ ರೂಪಿಸಿ ಅದನ್ನು ಹಿರಿಯರ ನೆರವಿನಿಂದ ಕಾರ್ಯ ರೂಪಕ್ಕೆ ತರುತ್ತೇವೆ. ವಿಶೇಷವಾಗಿಯೂ ಧೋನಿ ಹಾಗೂ ಕೊಹ್ಲಿ ನೆರವನ್ನು ಪಡೆಯುತ್ತೇವೆ. ಮುಂಬರುವ ವಿಶ್ವಕಪ್‌ನಲ್ಲೂ ಅದನ್ನೇ ಮಾಡಲಿದ್ದೇವೆ ಎಂದು ಸೇರಿಸಿದರು.

ನಾನು ಇಂಗ್ಲೆಂಡ್‌ನಲ್ಲಿ ಆಡಿದ್ದೇನೆ. ನನಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಅರಿವಿದೆ. ಈ ಬಾರಿಯೂ ಸ್ಪಿನ್ನರ್‌ಗಳು ಪ್ರಭಾವಿ ಪ್ರದರ್ಶನ ನೀಡುವ ಭರವಸೆಯಿದೆ ಎಂದರು.

ಚೊಚ್ಚಲ ವಿಶ್ವಕಪ್ ಬಗ್ಗೆ ಅತೀವ ಉತ್ಸಾಹಭರಿತನಾಗಿದ್ದೇನೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ವಿಶ್ವಕಪ್ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿದೆ. ನನ್ನ ಕನಸು ನನಸಾಗುತ್ತಿದ್ದು, ಶ್ರೇಷ್ಠ ಪ್ರದರ್ಶನ ನೀಡಲು ತಯಾರಾಗಿದ್ದೇನೆ ಎಂದರು.

ಅದೇ ಹೊತ್ತಿಗೆ ತಾಳ್ಮೆಯಿಂದ ಇದ್ದುಕೊಂಡು ವಿಕೆಟ್ ಕಬಳಿಸುವುದರತ್ತ ಗಮನ ಹರಿಸಿರುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಚೆಸ್ ಆಟವು ತನಗೆ ನೆರವಾಗಿರುವುದಾಗಿ ಹೇಳಿದರು.

ಭಾರತವೇ ಫೇವರಿಟ್. ನಾವು ಸಮತೋಲಿತ ತಂಡವನ್ನು ಹೊಂದಿದ್ದೇವೆ. ಭಾರತ ಹೊರತಾಗಿಯೂ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಬಲ ಪ್ರತಿಸ್ಫರ್ಧಿಯಾಗಬಲ್ಲದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌