ಆ್ಯಪ್ನಗರ

4, 4, 5; ಮೂರು ಪಂದ್ಯದಲ್ಲೇ 13 ವಿಕೆಟ್ ಕಿತ್ತ ಶಮಿ

ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಐದು ವಿಕೆಟ್ ಪಡೆದಿರುವ ಭಾರತೀಯ ವೇಗಿ ಮೊಹಮ್ಮದ್ ಶಮಿ, ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ. ಇದು ಶಮಿ ಅವರ ಚೊಚ್ಚಲ ಐದು ವಿಕೆಟ್ ಸಾಧನೆಯೂ ಹೌದು.

Vijaya Karnataka Web 30 Jun 2019, 7:57 pm
ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಐದು ವಿಕೆಟ್ ಸಾಧನೆ ಮಾಡುವ ಮೂಲಕ ಮಿಂಚಿದ್ದಾರೆ.
Vijaya Karnataka Web mohammad-shami-04


ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 69 ರನ್ ತೆತ್ತಿರುವ ಶಮಿ ಐದು ವಿಕೆಟುಗಳನ್ನು ಪಡೆದರು.

ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಮೊತ್ತ ಮೊದಲ ಬಾರಿಗೆ ಐದು ವಿಕೆಟ್ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮೊದಲು 1987ರ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಎಂಬ ಖ್ಯಾತಿಗೆ ಶಮಿ ಪಾತ್ರವಾಗಿದ್ದರು.

ಇದರೊಂದಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಒಟ್ಟು 13 ವಿಕೆಟ್ ಸಾಧನೆ ಮಾಡಿದ್ದಾರೆ. ಅಲ್ಲದೆ ಎಲ್ಲ ಮೂರು ಪಂದ್ಯಗಳಲ್ಲೂ 4 ವಿಕೆಟ್‌ಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಾರೆ.

ಮೊದಲ 7 ಓವರ್‌ಗಳಲ್ಲಿ 29 ರನ್ ಮಾತ್ರ ಬಿಟ್ಟುಕೊಟ್ಟಿದ್ದ ಶಮಿ ಕೊನೆಯ ಮೂರು ಓವರ್‌ಗಳಲ್ಲಿ 40 ರನ್ ಬಿಟ್ಟುಕೊಡುವ ಮೂಲಕ ಹಿನ್ನಡೆ ಅನುಭವಿಸಿದರು. ಆದರೂ ನಿರಂತರ ಅಂತರಾಳದಲ್ಲಿ ವಿಕೆಟುಗಳನ್ನು ಪಡೆಯುವ ಮೂಲಕ ಮಿಂಚಿದರು.

ಮೊಹಮ್ಮದ್ ಶಮಿ ಬಲೆಗೆ ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯಾನ್ ಮಾರ್ಗನ್, ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ಬಿದ್ದರು.

ಒಟ್ಟಾರೆಯಾಗಿ ಏಕದಿನದಲ್ಲಿ ಮೊತ್ತ ಮೊದಲ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿರುವ ಶಮಿ ಜೀವನಶ್ರೇಷ್ಠ ಬೌಲಿಗ್ ಸಾಧನೆಯನ್ನು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌