ಆ್ಯಪ್ನಗರ

ಟೀಮ್ ಇಂಡಿಯಾ ಕ್ಯಾಂಪ್ ಸೇರಿದ ಪಂತ್‌ಗೆ ಧೋನಿ ಮಾಸ್ಟರ್ ಕ್ಲಾಸ್!

ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕ್ಯಾಂಪ್ ಸೇರಿರುವ ರಿಷಬ್ ಪಂತ್ ಅವರಿಗೆ ಹಿರಿಯ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಮಾರ್ಗದರ್ಶನಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka Web 15 Jun 2019, 8:43 pm
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಗಾಯಾಳು ಶಿಖರ್ ಧವನ್ ಸ್ಥಾನವನ್ನು ತುಂಬಲು ಇಂಗ್ಲೆಂಡ್‌ಗೆ ಪ್ರಯಾಣಿಸಿರುವ ಉದಯೋನ್ಮುಖ ರಿಷಬ್ ಪಂತ್ ಟೀಮ್ ಇಂಡಿಯಾ ಕ್ಯಾಂಪ್ ಸೇರಿದ್ದಾರೆ.
Vijaya Karnataka Web dhoni-pant


ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಮಾಡಿಕೊಂಡಿರುವ ಧವನ್ ಸದ್ಯ ಚೇತರಿಕೆಯ ಹಂತದಲ್ಲಿದ್ದಾರೆ. ಧವನ್ ಲಭ್ಯತೆಯ ಬಗ್ಗೆ ಮೂರು ವಾರಗಳ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಲಭಿಸಲಿದೆ.

ಈ ನಡುವೆ ಪಂತ್‌ಗೆ ತಂಡವನ್ನು ಸೇರಿಕೊಂಡು ತರಬೇತಿ ಆರಂಭಿಸುವಂತೆ ಬಿಸಿಸಿಐ ಸೂಚನೆ ರವಾನಿಸಿದೆ. ಇದರಂತೆ ಮ್ಯಾಂಚೆಸ್ಟರ್‌ನಲ್ಲಿ ಟೀಮ್ ಇಂಡಿಯಾ ಜತೆ ತರಬೇತಿಯನ್ನು ನಡೆಸಿದ್ದಾರೆ.
View this post on Instagram The wicket-keepers club 🖖🖖 #TeamIndia #CWC19 A post shared by Team India (@indiancricketteam) on Jun 15, 2019 at 2:23am PDT

21ರ ಹರೆಯದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಪಂತ್‌ಗೆ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅಮೂಲ್ಯ ಮಾರ್ಗದರ್ಶನಗಳನ್ನು ನೀಡಿದರು.

ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲ ಹರಿದಾಡುತ್ತಿದೆ. ಈ ವೇಳೆಯಲ್ಲಿ ಮಗದೋರ್ವ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸಹ ಜತೆಗಿದ್ದರು.

ಕನಿಷ್ಠ ಮೂರು ಪಂದ್ಯಗಳಿಗೆ ಧವನ್ ಅಲಭ್ಯರಾಗುವ ಸಾಧ್ಯತೆಯಿದೆ. ಹಾಗೊಂದು ವೇಳೆ ಧವನ್ ಅಲಭ್ಯವಾದರೆ ಪಂತ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌