ಆ್ಯಪ್ನಗರ

ನನ್ನ ಹೃದಯ ಭಾರವಾಗಿದೆ; ಭಾವನೆಗಳನ್ನು ತಡೆದುಕೊಳ್ಳಲಾಗದೇ ರೋಹಿತ್!

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರಶಸ್ತಿ ಕನಸು ಭಗ್ನವಾಗಿದೆ. ಇದಾದ ಬೆನ್ನಲ್ಲೇ ಅಭಿಮಾನಿಗಳ ಜತೆಗೆ ರೋಹಿತ್ ಶರ್ಮಾ ಭಾವನಾತ್ಮಕ ಸಂದೇಶವನ್ನು ಹಂಚಿದ್ದಾರೆ. ಟೂರ್ನಿ ಇತಿಹಾಸದಲ್ಲೇ ದಾಖಲೆಯ ಐದು ಶತಕಗಳನ್ನು ಬಾರಿಸಿರುವ ರೋಹಿತ್ ಒಟ್ಟು 648 ರನ್ ಕಲೆ ಹಾಕಿದ್ದರು.

Vijaya Karnataka Web 12 Jul 2019, 2:49 pm
ಮ್ಯಾಂಚೆಸ್ಟರ್: ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಳ್ಳುವುದರೊಂದಿಗೆ ಭಾರತದ ಪ್ರಶಸ್ತಿ ಕನಸು ಭಗ್ನವಾಗಿದೆ.
Vijaya Karnataka Web rohit-sharma-13


ಅಭಿಮಾನಿಗಳ ಜತೆಗೆ ಟೀಮ್ ಇಂಡಿಯಾ ಸದಸ್ಯರಿಗೂ ಈ ನೋವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪ್ರಸ್ತುತ ಟೂರ್ನಿಯಲ್ಲೇ ಅತಿ ಹೆಚ್ಚು ರನ್ ಗಳಿಸಿರುವ ರೋಹಿತ್ ಶರ್ಮಾ ಅಭಿಮಾನಿಗಳ ಜತೆಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

"ಯಾವಾಗ ಮುಖ್ಯವೆನಿಸಿತೋ ಒಂದು ತಂಡವಾಗಿ ಫಲಿತಾಂಶ ನೀಡುವಲ್ಲಿ ವಿಫಲವಾರಾಗಿದ್ದೇವೆ. ಕೇವಲ 30 ನಿಮಿಷಗಳ ಕೆಟ್ಟ ಕ್ರಿಕೆಟ್‌ನಿಂದಾಗಿ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿದ್ದೇವೆ. ನನ್ನ ಹೃದಯ ಭಾರವಾಗಿದೆ. ನಿಮಗೂ ಅದೇ ಅನುಭವಾಗುತ್ತಿದೆ ಎಂಬುದು ಖಾತ್ರಿಯಿದೆ. ತವರೂರಿನ ಹೊರಗೂ ಲಭಿಸಿದ ಬೆಂಬಲ ನಿಜಕ್ಕೂ ಅದ್ಭುತವಾಗಿದೆ. ನಾವು ಆಡಿದಾಗೆಲ್ಲಾ ಯುಕೆಗೆ ನೀಲಿ ಬಣ್ಣ ಬಳಿದಿರುವುದಕ್ಕೆ ನಿಮ್ಮಗೆಲ್ಲರಿಗೂ ಧನ್ಯವಾದಗಳು" ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಏಕದಿನ ವಿಶ್ವಕಪ್‌ವೊಂದರಲ್ಲೇ ದಾಖಲೆಯ ಐದು ಶತಕಗಳನ್ನು ಬಾರಿಸಿದ ವಿಶ್ವದ ಮೊತ್ತ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ರೋಹಿತ್ ಭಾಜನವಾಗಿದ್ದರು. ಈ ಮೂಲಕ ಟೂರ್ನಿಯಲ್ಲೇ ಅತಿ ಹೆಚ್ಚು 648 ರನ್ ಕಲೆ ಹಾಕಿದ್ದರು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಲಾ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿ ವೈಫಲ್ಯ ಅನುಭವಿಸಿದ್ದರು. ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ವಿರೋಚಿತ ಹೋರಾಟ ನೀಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌