ಆ್ಯಪ್ನಗರ

ಕೌಲ್ಟರ್ ಕೌಂಟರ್ ಅಟ್ಯಾಕ್; ವಿಶಿಷ್ಟ ದಾಖಲೆ

ಆಸ್ಟ್ರೇಲಿಯಾದ ನಥನ್ ಕೌಲ್ಟರ್ ನೈಲ್ ವೆಸ್ಟ್‌ಇಂಡೀಸ್ ವಿರುದ್ಧ 92 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದ್ದಾರೆ. ಇದು ಏಕದಿನ ವಿಶ್ವಕಪ್‌ನಲ್ಲಿ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

Vijaya Karnataka Web 6 Jun 2019, 8:58 pm
ನಾಟಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ನಥನ್ ಕೌಲ್ಟರ್ ನೈಲ್ ಅಮೋಘ ಅರ್ಧಶತಕ ಸಾಧನೆ ಮಾಡಿದ್ದಾರೆ.
Vijaya Karnataka Web nathan-coulter-nile


ಓರ್ವ ಬೌಲರ್ ಆಗಿರುವ ಹೊರತಾಗಿಯೂ ತಂಡಕ್ಕೆ ಅಗತ್ಯವೆನಿಸಿದಾಗ ಅತಿ ಒತ್ತಡದ ಪರಿಸ್ಥಿತಿಯಲ್ಲೂ ಸಮಯೋಚಿತ ಫಿಫ್ಟಿ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗಿಳಿಸಲ್ಪಟ್ಟ ಆಸ್ಟ್ರೇಲಿಯಾ ಒಂದು ಹಂತದಲ್ಲಿ 16.1 ಓವರ್‌ಗಳಲ್ಲೇ 79 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಅಲೆಕ್ಸ್ ಕ್ಯಾರಿ ಜತೆಗೆ ಸ್ಟೀವ್ ಸ್ಮಿತ್ ನಿರ್ಣಾಯಕ ಜತೆಯಾಟದಲ್ಲಿ ಭಾಗಿಯಾದರು.

ಬಳಿಕ ಕೌಲ್ಟರ್ ನೈಲ್ ಕ್ರೀಸಿಗಿಳಿಯುವಾಗ ಆಸೀಸ್ ಸ್ಕೋರ್ 30.4 ಓವರ್‌ಗಳಲ್ಲಿ 147/6. ಇಲ್ಲಿಂದ ಬಳಿಂಕ ಸ್ಮಿತ್ ಜತೆಗೂಡಿದ ಕೌಲ್ಟರ್ 102 ರನ್‌ಗಳ ಮಹತ್ವದ ಜತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಆಸೀಸ್ ತಂಡವನ್ನು 288 ರನ್‌ಗಳ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.

ಸ್ಮಿತ್ ಹಾಗೂ ಕೌಲ್ಟರ್ ನೈಲ್ ಸಮಯೋಚಿತ ಅರ್ಧಶತಕ ಬಾರಿಸಿದರು. ಈ ಪೈಕಿ ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೌಲ್ಟರ್ ನೈಲ್ 60 ಎಸೆತಗಳಲ್ಲೇ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿದ 92 ರನ್ ಗಳಿಸಿದರು.

ಇದು ಏಕದಿನದಲ್ಲಿ ಕೌಲ್ಟರ್ ಬ್ಯಾಟ್‌ನಿಂದ ಸಿಡಿದ ಚೊಚ್ಚಲ ಅರ್ಧಶತಕವಾಗಿದೆ. ಅಷ್ಟೇ ಯಾಕೆ ಏಕದಿನ ವಿಶ್ವಕಪ್‌ನಲ್ಲಿ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವೂ ಕೂಡಾ ಹೌದು. ಇನ್ನು ಒಟ್ಟಾರೆಯಾಗಿ ಏಕದಿನದಲ್ಲಿ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌