ಆ್ಯಪ್ನಗರ

ಭಾರತ ಹಾಗೂ ಇಂಗ್ಲೆಂಡ್ ಪಂದ್ಯದ ಹಿಂದಿನ ವಿಶೇಷವಾದ ಉದ್ದೇಶ ಗೊತ್ತೇನು?

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಒಂದು ದಿನದ ಭಾಗವಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದೆ.

Vijaya Karnataka Web 30 Jun 2019, 3:33 pm
ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ವಿಶೇಷವಾದ ಉದ್ದೇಶವನ್ನು ಇರಿಸಿಕೊಂಡು ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳು ಕಣಕ್ಕಿಳಿದಿದೆ.
Vijaya Karnataka Web team-india-orange-01


ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್) ನೂತನವಾಗಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಒಂದು ದಿನ ಕಾರ್ಯಕ್ರಮದ ಅಂಗವಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದೆ.

ಮೈದಾನದ ಹೊರಗಡೆಯ ಎಲ್ಲ ಕರ್ತವ್ಯವನ್ನು ಮಕ್ಕಳು ಆರಂಭಿಸುವುದು ಈ ಪಂದ್ಯದ ಮಗದೊಂದು ವಿಶಿಷ್ಟವಾಗಿದೆ. ಟಾಸ್‌ನಿಂದ ಹಿಡಿದು ಪಂದ್ಯದ ಬಳಿಕ ನಡೆಯುವ ಸುದ್ದಿಗೋಷ್ಠಿಯನ್ನು ಮಕ್ಕಳನ್ನು ಆರಂಭಿಸಲಿದ್ದಾರೆ.

ಜಗತ್ತಿನ ಪ್ರತಿಯೊಂದು ಮಗುವಿಗೂ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವುದು ಇದರ ಹಿಂದಿನ ಧ್ಯೇಯವಾಗಿದೆ. ಅಲ್ಲದೆ ಆರೋಗ್ಯ ಪಾಠದ ಜತೆಗೆ ಕ್ರಿಕೆಟ್ ಆಡಲು ಮಕ್ಕಳಿಗೆ ನೆರವಾಗಲಿದೆ.

ಯೂನಿಸೆಫ್ ಅಂಬಾಸಿಡರ್ ಕೂಡಾ ಆಗಿರುವ ಸಚಿನ್ ತೆಂಡೂಲ್ಕರ್ ಸಹ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌