ಆ್ಯಪ್ನಗರ

ಮೊದಲ ಪಂದ್ಯದಲ್ಲೇ ಭಾರಿ ಮುಖಭಂಗಕ್ಕೊಳಗಾದ ಪಾಕ್

ವೆಸ್ಟ್‌ಇಂಡೀಸ್ ವಿರುದ್ದ ಕೇವಲ 105 ರನ್‌ಗಳಿಗೆ ಸರ್ವಪತನವನ್ನು ಕಂಡಿರುವ ಪಾಕಿಸ್ತಾನ ಏಕದಿನ ಇತಿಹಾಸದಲ್ಲೇ ಎರಡನೇ ಅತಿ ಕನಿಷ್ಠ ಮೊತ್ತಕ್ಕೆ ಆಲೌಟಾಗಿದೆ. ಈ ಮೂಲಕ ಕೆರೆಬಿಯನ್ ಅಧಿಪತ್ಯ ಮೆರೆದಿದೆ.

Vijaya Karnataka Web 31 May 2019, 5:16 pm
ನಾಟಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಭಾರಿ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ಕೇವಲ 105 ರನ್‌ಗಳಿಗೆ ಸರ್ವಪತನವನ್ನು ಕಂಡಿದೆ.
Vijaya Karnataka Web sarfaraz-ahmed


ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಪಾಕಿಸ್ತಾನ ತನ್ನ ಎರಡನೇ ಅತಿ ಕನಿಷ್ಠ ಮೊತ್ತವನ್ನು ದಾಖಲಿಸಿದೆ. ಈ ಹಿಂದೆ 1992ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿಲೇ‌ಡ್‌ನಲ್ಲಿ 74 ರನ್‌ಗಳಿಗೆ ಆಲೌಟಾಗಿರುವುದು ಪಾಕಿಸ್ತಾನದ ಅತಿ ಕನಿಷ್ಠ ಮೊತ್ತವಾಗಿದೆ.

ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿದ ಪಾಕಿಸ್ತಾನ 21.4 ಓವರ್‌ಗಳಲ್ಲಿ 105 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.

ಕೆರೆಬಿಯನ್ ಪರ ಮಾರಕ ದಾಳಿ ಸಂಘಟಿಸಿದ ಒಶಾನೆ ಥಾಮಸ್ ನಾಲ್ಕು, ನಾಯಕ ಜೇಸನ್ ಹೋಲ್ಡರ್ ಮೂರು, ಆಂಡ್ರೆ ರಸೆಲ್ ಎರಡು ಹಾಗೂ ಶೆಲ್ಡನ್ ಕಾಟ್ರೆಲ್ ಒಂದು ವಿಕೆಟ್ ಪಡೆದು ಮಿಂಚಿದರು.

ವಿಶ್ವಕಪ್‌ನಲ್ಲಿ ಪಾಕ್‌ನ ಅತಿ ಕನಿಷ್ಠ ಮೊತ್ತ:
74 ರನ್: ಇಂಗ್ಲೆಂಡ್ ವಿರುದ್ಧ, ಆಡಿಲೇಡ್ (1992)
105 ರನ್: ವೆಸ್ಟ್ಇಂಡೀಸ್ ವಿರುದ್ಧ, ನಾಟಿಂಗ್‌ಹ್ಯಾಮ್ (2019*)
132 ರನ್: ಆಸ್ಟ್ರೇಲಿಯಾ ವಿರುದ್ಧ, ಲಾರ್ಡ್ಸ್ (1999)
132 ರನ್: ಐರ್ಲೆಂಡ್ ವಿರುದ್ಧ, ಕಿಂಗ್ಸ್‌ಸ್ಟನ್ (2007)
134 ರನ್: ಇಂಗ್ಲೆಂಡ್ ವಿರುದ್ಧ, ಕೇಪ್ ಟೌನ್ (2003)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌