ಆ್ಯಪ್ನಗರ

ಕೊಹ್ಲಿ-ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲವೇ?

ಏಕದಿನ ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಬಗ್ಗೆ ಮೂಲಗಳು ತಿಳಿಸಿದೆ.

Vijaya Karnataka Web 12 Jul 2019, 8:58 pm
ಮ್ಯಾಂಚೆಸ್ಟರ್: ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿರುವ ಟೀಮ್ ಇಂಡಿಯಾದ ಅಭಿಯಾನ ಕೊನೆಗೊಂಡಿದೆ. ಇದಾದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲಎಂಬ ಆಘಾತಕಾರಿ ವರದಿಗಳು ಬಂದಿದೆ.
Vijaya Karnataka Web kohli-rohit-01


ಮೂಲಗಳ ಪ್ರಕಾರ ಟೀಮ್ ಇಂಡಿಯಾ ಆಟಗಾರರ ನಡುವೆ ಗುಂಪುಗಾರಿಕೆಯಿದ್ದು, ಒಂದು ಬಣ ವಿರಾಟ್ ಕೊಹ್ಲಿ ಹಾಗೂ ಮಗದೊಂದು ಬಣ ರೋಹಿತ್ ಶರ್ಮಾರನ್ನು ಬೆಂಬಲಿಸುತ್ತಿದೆ.

ಅಷ್ಟೇ ಯಾಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಕೆಲವೊಂದು ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಇದರಿಂದ ತಂಡದಲ್ಲಿ ಅಸಾಮರಸ್ಯ ಉಂಟಾಗಿತ್ತು ಎಂಬ ಆರೋಪಗಳು ಕೇಳಿಬಂದಿದೆ.

ಏಕದಿನ ವಿಶ್ವಕಪ್‌ಗಾಗಿ ಅಂಬಟಿ ರಾಯುಡು ಸ್ಥಾನಕ್ಕೆ ವಿಜಯ್ ಶಂಕರ್ ಆಯ್ಕೆ ಮಾಡಿರುವುದು ಭಿನ್ನಭಿಪ್ರಾಯಕ್ಕೆ ಕಾರಣವಾಗಿತ್ತು. ಇದನ್ನು ಯಾರು ಕೂಡಾ ಪ್ರಶ್ನೆ ಮಾಡುವಂತಿರಲಿಲ್ಲ.

ಕೊಹ್ಲಿಗೆ ಆಡಳಿತಾತ್ಮಕ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಬೆಂಬಲವಿತ್ತು. ಹಾಗಾಗಿ ಏಕಪಕ್ಷೀಯ ನಿರ್ಧಾರವನ್ನು ತಳೆಯುತ್ತಿದ್ದರು ಎಂಬುದು ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಎರಡು ವರ್ಷಗಳ ಹಿಂದೆ ಅಂದಿನ ಕೋಚ್ ಅನಿಲ್ ಕುಂಬ್ಳೆ ಜತೆ ಭಿನ್ನಭಿಪ್ರಾಯ ಕಂಡು ಬಂದಾಗಲೂ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ತಂಡದ ಆಯ್ಕೆಯಲ್ಲೂ ಗುಂಪುಗಾರಿಕೆ ಜಟಿಲವೆನಿಸಿದೆ. ಕಳಪೆ ಫಾರ್ಮ್ ಹೊರತಾಗಿಯೂ ಕೆಎಲ್ ರಾಹುಲ್‌ರನ್ನು ಕೊಹ್ಲಿ ಬೆಂಬಲಿಸುತ್ತಿದ್ದರು. ಆರ್‌ಸಿಬಿ ತಂಡದ ಸದಸ್ಯನಾಗಿದ್ದರಿಂದ ಆಡುವ ಬಳಗದಲ್ಲಿ ಯುಜ್ವೇಂದ್ರ ಚಹಲ್‌‌ಗೆ ಅವಕಾಶ ನೀಡಲಾಗುತ್ತಿತ್ತು ಎಂಬುದಾಗಿ ಆರೋಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌