ಆ್ಯಪ್ನಗರ

ವಿಶ್ವಕಪ್‌ಗೆ ಬೇಗನೆ ಸಜ್ಜಾಗಬೇಕಿದೆ: ರೋಜರ್‌ ಬಿನ್ನಿ

ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್‌ ತಂಡ ಬಹಳ ದಿನಗಳಿಂದ ಏಕದಿನ ಪಂದ್ಯಗಳನ್ನೇ ಆಡಿಲ್ಲ. ಹೀಗಾಗಿ ಟೂರ್ನಿಗೆ ಮೊದಲು ಆಟಗಾರರು ಹೆಚ್ಚು ಚೈತನ್ಯ ತುಂಬಿಕೊಳ್ಳುವ ಅವಶ್ಯಕತೆ ಇದೆ.

Agencies 16 May 2019, 3:50 pm
ಬೆಂಗಳೂರು: ಈಗಾಗಲೇ ಐಪಿಎಲ್ ಪಂದ್ಯಗಳನ್ನು ಆಡಿ ಮುಗಿಸಿರುವ ದೇಶದ ಕ್ರಿಕೆಟಿಗರು ವಿಶ್ವಕಪ್ ಕ್ರಿಕೆಟ್‌ಗೆ ತ್ವರಿತವಾಗಿ ಸಜ್ಜಾಗಬೇಕಿದೆ. ಅಲ್ಲಿ ಹೆಚ್ಚು ಸಮಯವಿಲ್ಲ ಎಂದು ಮಾಜಿ ಕ್ರಿಕೆಟಿಗ ರೋಜರ್‌ ಬಿನ್ನಿ ಹೇಳಿದ್ದಾರೆ.
Vijaya Karnataka Web cricket.


ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್‌ ತಂಡ ಬಹಳ ದಿನಗಳಿಂದ ಏಕದಿನ ಪಂದ್ಯಗಳನ್ನೇ ಆಡಿಲ್ಲ. ಹೀಗಾಗಿ ಟೂರ್ನಿಗೆ ಮೊದಲು ಆಟಗಾರರು ಹೆಚ್ಚು ಚೈತನ್ಯ ತುಂಬಿಕೊಳ್ಳುವ ಅವಶ್ಯಕತೆ ಇದೆ. ನಮ್ಮ ಬೌಲರ್‌ಗಳು ಈಗಾಗಲೇ ಸಜ್ಜಾಗಿರುವುದಂತೂ ನಿಜ. ಒಟ್ಟಿನಲ್ಲಿ ತಂಡದ ಸದಸ್ಯರೆಲ್ಲರೂ ಆದಷ್ಟು ಬೇಗ ಒಟ್ಟಿಗೆ ಕಲೆತು, ಕಪ್‌ ಗೆಲ್ಲಲು ಫಿಟ್‌ ಆಗಬೇಕಿದೆ.

ಪಾಕಿಸ್ತಾನ ಸೇರಿದಂತೆ ಎಲ್ಲ ದೇಶಗಳೂ ಹಲವಾರು ಏಕದಿನ ಪಂದ್ಯಗಳನ್ನು ಆಡಿವೆ. ಇಂಗ್ಲೆಂಡ್‌ ಪಿಚ್‌ನಲ್ಲಿ ಆಡಲಿರುವ ನಮ್ಮ ಬೌಲರ್‌ಗಳು ಸ್ವಿಂಗ್‌ ಕಡೆಗೆ ಹೆಚ್ಚು ಗಮನ ಹರಿಸಲೇಬೇಕು. ಭಾರತ ತಂಡಕ್ಕೆ ಫಿಟ್ನೆಸ್‌ ಕೂಡ ಪ್ರಮುಖವೇ. ಕೇದಾರ್‌ ಜಾಧವ್‌ ಆಡದಿದ್ದರೆ, ಪಂತ್‌ ಫೀಲ್ಡಿಗೆ ಇಳಿಯಬಹುದು ಹಾಗೂ ಎದುರಾಳಿಗಳ ಬೆವರಿಳಿಸಬಹುದು.

ಉಳಿದಂತೆ ಜಸ್‌ಪ್ರೀತ್‌ ಬುಮ್ರಾ ಅವರ ಫಿಟ್ನೆಸ್‌ ಆಶಾದಾಯಕ. ನವದೀಪ್‌ ಸೈನಿ ಅವರು ನಾಲ್ಕನೇ ವೇಗದ ಬೌಲರ್‌ ಆಗಿರುವುದು ನನ್ನ ಪ್ರಕಾರ ಉತ್ತಮ ಆಯ್ಕೆ. ಸೂಕ್ತವಲ್ಲದ ಸಮಯದಲ್ಲಿ ನಮ್ಮ ಆಟಗಾರು ಐಪಿಎಲ್‌ ಆಡಿ ಬಳಲಿದ್ದಾರೆ. ಆದರೆ, ಈಗಲೂ ಉತ್ತಮವಾದುದನ್ನು ಸಾಧಿಸಲು ಅವಕಾಶವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌