ಆ್ಯಪ್ನಗರ

ಟ್ರೇಡ್‌ಮಾರ್ಕ್ ಸೆಲ್ಯೂಟ್ ಶೈಲಿಯಲ್ಲಿ ಸಂಭ್ರಮಾಚರಿಸಿದ ಕಾಟ್ರೆಲ್

ಏಕದಿನ ವಿಶ್ವಕಪ್ ಆರಂಭವಾಗಿರುವಂತೆಯೇ ತಮ್ಮ ಟ್ರೇಡ್ ಮಾರ್ಕ್ ಸೆಲ್ಯೂಟ್ ಶೈಲಿಯಲ್ಲಿ ಸಂಭ್ರಮಾಚರಿಸುವ ಮೂಲಕ ವೆಸ್ಟ್‌ಇಂಡೀಸ್‌ನ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಗಮನ ಸೆಳೆದಿದ್ದಾರೆ.

Vijaya Karnataka Web 31 May 2019, 5:57 pm
ನಾಟಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಟ್ರೇಡ್‌ಮಾರ್ಕ್ ಸೆಲ್ಯೂಟ್ ಶೈಲಿಯಲ್ಲಿ ಸಂಭ್ರಮಾಚರಿಸುವ ಮೂಲಕ ವೆಸ್ಟ್‌ಇಂಡೀಸ್‌ನ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಗಮನ ಸೆಳೆದಿದ್ದಾರೆ.
Vijaya Karnataka Web sheldon-cottrell


ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕಾಟ್ರೆಲ್, ಕೆರಿಬಿಯನ್ನರಿಗೆ ಮೊದಲ ಸಿಹಿಯನ್ನು ಒದಗಿಸಿದರು.

ಕಾಟ್ರೆಲ್ ದಾಳಿಯಲ್ಲಿ ಪಾಕ್‌ನ ಎಡಗೈ ಆರಂಭಿಕ ಇಮಾಮ್ ಉಲ್ ಹಾಕ್ ವಿಕೆಟ್ ಕೀಪರ್ ಶಾಯ್ ಹೋಪ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಸಂದರ್ಭದಲ್ಲಿ ಕಾಟ್ರೆಲ್ ತಮ್ಮ ಎಂದಿನ ಶೈಲಿಯಲ್ಲಿ ಪರೇಡ್ ಮೂಲಕ ಸೆಲ್ಯೂಟ್ ಮಾಡಿ ಸಂಭ್ರಮಾಚರಿಸಿಕೊಂಡರು.

29ರ ಹರೆದಯ ವಿಂಡೀಸ್ ವೇಗಿ ಆಗಿರುವ ಕಾಟ್ರೆಲ್ ಇದುವರೆಗೆ 14 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 18 ವಿಕೆಟುಗಳನ್ನು ಕಬಳಿಸಿದ್ದಾರೆ. 46 ರನ್ ತೆತ್ತು ಐದು ವಿಕೆಟ್ ಪಡೆದಿರುವುದು ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಕಾಟ್ರೆಲ್ ತಮ್ಮ ನಿಖರ ದಾಳಿಯ ಮೂಲಕ ಹೆಚ್ಚಿನ ಗಮನ ಸೆಳೆದಿದ್ದರು. ಅಲ್ಲಿಂದ ಬಳಿಕ ಟ್ರೇಡ್ ಮಾರ್ಕ್ ಸೆಲ್ಯೂಟ್ ಶೈಲಿಯ ಸಂಭ್ರಮಾಚರಣೆಯು ಹೆಚ್ಚಿನ ಗಮನ ಸೆಳೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌