ಆ್ಯಪ್ನಗರ

ರೈಟ್-ದಾದಾ ಭೇಟಿ; ವಿಶ್ವಕಪ್ ಗೆಲುವಿನ ಸಾಧ್ಯತೆ ಎಷ್ಟು?

ಪ್ರತಿಷ್ಠಿತ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಸಾಧ್ಯತೆಯ ಬಗ್ಗೆ ಭಾರತದ ಮಾಜಿ ಕೋಚ್ ಜಾನ್ ರೈಟ್ ಪ್ರತಿಕ್ರಿಯಿಸಿದ್ದಾರೆ. ಮಾಜಿ ನಾಯಕ ಸೌರವ್ ಗಂಗೂಲಿ ಸಂದರ್ಶನ ಮಾಡುವ ಮೂಲಕ ಇನ್ನು ಹೆಚ್ಚಿನ ಗಮನ ಸೆಳೆದಿದ್ದಾರೆ.

Vijaya Karnataka Web 29 May 2019, 12:27 pm
ಲಂಡನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಸಾಧ್ಯತೆಯ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ಜಾನ್ ರೈಟ್ ಮನಬಿಚ್ಚಿ ಮಾತನಾಡಿದ್ದಾರೆ.
Vijaya Karnataka Web ganguly-wright


ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿರುವ ತಾಜಾ ವೀಡಿಯೋದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಮಾಜಿ ಕೋಚ್ ಜಾನ್ ರೈಟ್ ಪರಸ್ಪರ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ವಿಶ್ವಕಪ್ ಗೆಲುವಿನ ಸಾಧ್ಯತೆಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ರೈಟ್ ಭೇಟಿಯನ್ನು ಅನಿರೀಕ್ಷಿತ ಎಂದಿರುವ ದಾದಾ, ತಮ್ಮ ಪಾಲಿಗಿದು ಅತ್ಯಂತ ಸಂತಸದಾಯಕ ಕ್ಷಣ ಎಂದಿದ್ದಾರೆ. ನೇರವಾಗಿ ಭಾರತದ ವಿಶ್ವಕಪ್ ಗೆಲುವಿನ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದಾಗ, ರೈಟ್ ಹೌದು, ಖಂಡಿತವಾಗಿಯೂ ಇದೆ ಎಂದು ಉತ್ತರಿಸಿದರು.

ನಾಲ್ಕನೇ ಕ್ರಮಾಂಕ ಭಾರತಕ್ಕೆ ಅತಿ ದೊಡ್ಡ ತಲೆನೋವು ಸೃಷ್ಟಿ ಮಾಡಿತ್ತು. ಆದರೆ ಕೆಎಲ್ ರಾಹುಲ್ ಶತಕದೊಂದಿಗೆ ಇವೆಲ್ಲಕ್ಕೂ ಉತ್ತರ ದೊರಕಿದೆ ಎಂದು ಸೇರಿಸಿದರು. ಭಾರತೀಯ ವೇಗದ ಪಡೆ ಹಾಗೂ ಸ್ಪಿನ್ ದಾಳಿಯು ಟೀಮ್ ಇಂಡಿಯಾದ ಪ್ರಬಲ ಅಸ್ತ್ರವಾಗಲಿದ್ದಾರೆ ಎಂಬುದನ್ನು ರೈಟ್ ಉಲ್ಲೇಖಿಸಿದರು.

ಜಾನ್ ರೈಟ್ ಬೆಂಬಲಿಸುವ ಮೊದಲ ತಂಡ ಭಾರತ ಎಂದು ಉಲ್ಲೇಖಿಸಿದ ದಾದಾ, ಎರಡನೇ ಹೋಮ್ ಟೀಮ್ ನ್ಯೂಜಿಲೆಂಡ್ ಗೆಲುವಿನ ಸಾಧ್ಯತೆಗಳ ಬಗ್ಗೆಯೂ ಪ್ರಶ್ನಿಸಿದರು. ಕಿವೀಸ್ ಕೂಡಾ ಅತ್ಯುತ್ತಮ ತಂಡವಾಗಿದ್ದು, ಹೆಚ್ಚು ಸಮತೋಲನವನ್ನು ಹೊಂದಿರುವುದಾಗಿ ರೈಟ್ ತಿಳಿಸಿದರು. ಅಲ್ಲದೆ ಕಳೆದ ವರ್ಷದ ರನ್ನರ್ ಅಪ್ ಆಗಿರುವ ನ್ಯೂಜಿಲೆಂಡ್ ಮುಂದೆಯೂ ನೈಜ ಸವಾಲುಗಳು ಎದುರಾಗಲಿದೆ ಎಂದರು.

ಅಂತಿಮವಾಗಿ ದೀರ್ಘ ಸಮಯದ ಬಳಿಕ ರೈಟ್ ಜತೆ ಕ್ರಿಕೆಟ್ ವಿಚಾರದಲ್ಲಿ ಚರ್ಚಿಸಲು ಸಾಧ್ಯವಾಗಿರುವುದು ಉತ್ತಮ ಅನುಭವ ಎಂದು ದಾದಾ ಸೇರಿಸಿದರು. ಈ ವೇಳೆಯಲ್ಲಿ ತಮಗೂ ಅದೇ ಅನುಭವ ಎಂದು ರೈಟ್ ಉತ್ತರಿಸಿದರು.

ನಿಮ್ಮ ಮಾಹಿತಿಗಾಗಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗನಾಗಿರುವ ಜಾನ್ ರೈಟ್, 2000ದಿಂದ 2005ರ ಅವಧಿಯಲ್ಲಿ ಭಾರತ ತಂಡದ ಮುಖ್ಯ ತರಬೇತುದಾರನ ಹುದ್ದೆಯನ್ನು ನಿಭಾಯಿಸಿದ್ದರು. ಈ ವೇಳೆಯಲ್ಲ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌